ಭಾನುವಾರ, ಆಗಸ್ಟ್ 1, 2021
21 °C

ಎರಡೂವರೆ ಟನ್ ಭಾರದ ಕಲ್ಲು ಎಳೆದ ಎತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಇಲ್ಲಿನ ರಾಜೇಂದ್ರ ಗಂಜ್ ಆವರಣದಲ್ಲಿ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಅಂಗವಾಗಿ ಸೋಮವಾರ ನಡೆದ ಎತ್ತುಗಳಿಂದ ಎರಡೂವರೆ ಟನ್ ಭಾರದ ಕಲ್ಲು ಎಳೆಯುವ(ಅಖಿಲ ಭಾರತ ಮುಕ್ತ) ಸ್ಪರ್ಧೆ ನಡೆಯಿತು.ಆಂಧ್ರಪ್ರದೇಶದ ಚೌಟಪಲ್ಲಿ ಪತಲಿಂಗ ಗ್ರಾಮದ ಆರ್.ಎನ್ ರೆಡ್ಡಿ ಎಂಬುವವರ ಎತ್ತುಗಳು 20ನಿಮಿಷಗಳಲ್ಲಿ 2,265 ಅಡಿ ದೂರು ಎಳೆಯುವ ಮೂಲಕ ಪ್ರಥಮ ಸ್ಥಾನ 70 ಸಾವಿರ ರೂಪಾಯಿ ನಗದು  ಬಹುಮಾನ ಪಡೆದುಕೊಂಡವು. ಆಂಧ್ರ ಪ್ರದೇಶದ ಪೆದ್ದಕಾಶಿನಿ ಗ್ರಾಮದ ಆಲ ರಾಮಕೃಷ್ಣರೆಡ್ಡಿ ಎಂಬುವವರ ಎತ್ತುಗಳು 20 ನಿಮಿಷಗಳಲ್ಲಿ 2,443 ಅಡಿ ದೂರ ಎಳೆಯುವ ಮೂಲಕ ದ್ವಿತೀಯ ಸ್ಥಾನ 55 ಸಾವಿರ ರೂಪಾಯಿಗಳ ನಗದು ಬಹುಮಾನ ಗಳಿಸಿದವು.ರಾಯಚೂರಿನ ಮಾಜಿ ಶಾಸಕ ಎ.ಪಾಪಾರೆಡ್ಡಿ ಅವರ ಎತ್ತುಗಳು 20 ನಿಮಿಷಗಳಲ್ಲಿ 2,164 ಅಡಿ ದೂರ ಎಳೆಯುವ ಮೂಲಕ ತೃತೀಯ ಸ್ಥಾನ 45 ಸಾವಿರ ರೂಪಾಯಿಗಳ ನಗದು ಬಹುಮಾನ ಪಡೆದುಕೊಂಡರು. ಆಂಧ್ರ ಪ್ರದೇಶದ ಹೂಯ್ಯಳವಾಠ ಗ್ರಾಮದ ಬೂರೆಡ್ಡಿಒಬಳರೆಡ್ಡಿ ಎಂಬುವವರ ಎತ್ತುಗಳು 20 ನಿಮಿಷಗಳಲ್ಲಿ 2,115 ಅಡಿ ದೂರ ಎಳೆಯುವ ಮೂಲಕ ನಾಲ್ಕನೇ ಸ್ಥಾನ 35 ಸಾವಿರ ರೂಪಾಯಿಗಳ ನಗದು ಬಹುಮಾನ ಪಡೆದವು.ಆಂಧ್ರಪ್ರದೇಶ ವನಪರ್ತಿ ಗ್ರಾಮದ ಜಂಗಿರಾಜು ಎಂಬುವವರ ಎತ್ತುಗಳು 20ನಿಮಿಷಗಳಲ್ಲಿ 1,809 ಅಡಿ ದೂರು ಎಳೆಯುವ ಮೂಲಕ ಐದನೇ ಸ್ಥಾನ 25 ಸಾವಿರ ರೂಪಾಯಿಗಳ ನಗದು ಬಹುಮಾನ ಪಡೆದುಕೊಂಡರು. ಆಂಧ್ರ ಪ್ರದೇಶದ ದವಾನಪಲ್ಲೆ ಗ್ರಾಮದ ಟಿ.ನವೀನ ರೆಡ್ಡಿ ಎಂಬುವವರ ಎತ್ತುಗಳು 20 ನಿಮಿಷಗಳಲ್ಲಿ 1,387 ಅಡಿ ದೂರ ಎಳೆಯುವ ಮೂಲಕ ಆರನೇ ಸ್ಥಾನ 15ಸಾವಿರ ರೂಪಾಯಿಗಳ ನಗದು ಪಡೆದುಕೊಂಡರು.ವಿಜೇತರಾದ ಎಲ್ಲ ಎತ್ತುಗಳ ಮಾಲೀಕರಿಗೆ ಆಂಧ್ರಪ್ರದೇಶ ವಾರ್ತಾ ಮತ್ತು ಪ್ರಚಾರ ಖಾತೆ ಸಚಿವೆ ಅರುಣ ಭರತಸಿಂಹರೆಡ್ಡಿ ಬಹುಮಾನ ವಿತರಿಸಿ ಸನ್ಮಾನಿಸಿದರು. ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಅಧ್ಯಕ್ಷ ಎ.ಪಾಪಾರೆಡ್ಡಿ, ಜಿ.ಬಸವರಾಜರೆಡ್ಡಿ, ಲಾಲಪ್ಪ ಹಾಗೂ ಮುನ್ನೂರು ಕಾಪು ಬಲಿಜ ಸಮಾಜದ ಬಾಂಧವರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.