ಗುರುವಾರ , ಅಕ್ಟೋಬರ್ 1, 2020
21 °C

ಎಲ್ಲದಕ್ಕೂ ಭಗವಂತನೇ ಕಾರಣ: ನೊಣವಿನಕೆರೆ ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಲ್ಲದಕ್ಕೂ ಭಗವಂತನೇ ಕಾರಣ: ನೊಣವಿನಕೆರೆ ಶ್ರೀ

ಲಕ್ಷ್ಮೇಶ್ವರ: ಭಗವಂತನಿಲ್ಲದೆ ಈ ಜಗತ್ತಿನಲ್ಲಿ ಏನೂ ನಡೆಯುವುದಿಲ್ಲ. ಎಲ್ಲ ಕಾರ್ಯದ ಹಿಂದೆ ದೇವರು ಇರುತ್ತಾನೆ. ಆದರೆ ಈ ಸತ್ಯವನ್ನು ಎಲ್ಲರೂ ಅರಿತುಕೊಂಡು ಒಳ್ಳೆಯ ಕೆಲಸ ಮಾಡಬೇಕು ಎಂದು ತುಮಕೂರ ಜಿಲ್ಲೆ ನೊಣವಿನಕೆರೆ ಕಾಡಸಿದ್ಧೇಶ್ವರಮಠದ ಶಿವಾನು ಭವ ಚರವರ್ಯ ಕರಿಬಸವ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ  ಸಲಹೆ ನೀಡಿದರು.ಸಮೀಪದ ಗುಲಗಂಜಿಕೊಪ್ಪದ ಹತ್ತಿರ ದುಂಡಿ ಬಸವೇಶ್ವರ ದೇವಸ್ಥಾನ ಸೇವಾ ಸಮಿತಿ ವತಿಯಿಂದ ನೂತನವಾಗಿ ಬಸವೇಶ್ವರ ಪವಳಿಯಲ್ಲಿ ನಿರ್ಮಿಸಿರುವ ದುಂಡಿ ಬಸವೇಶ್ವರ, ಈಶ್ವರ, ಹನುಮಂತ ದೇವರ ದೇವಸ್ಥಾನ, ದುಂಡಿ ಬಸವೇಶ್ವರ ಪ್ರಸಾದ ನಿಲಯ, ದುಂಡಿ ಬಸವೇಶ್ವರ ಸಮುದಾಯ ಭವನ ಹಾಗೂ ವೇದ ಪಾಠ ಶಾಲೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈಚಿನ ದಿನಗಳಲ್ಲಿ ಜನರು ಧರ್ಮದಿಂದ ದೂರ ಸರಿಯುತ್ತಿದ್ದಾರೆ. ಹೀಗಾಗಿ ಜನರಲ್ಲಿ ಮಾನಸಿಕ ನೆಮ್ಮದಿ ಹಾಳಾಗಿ ಸಮಾಜದಲ್ಲಿ ಅಶಾಂತಿ ತಲೆದೂರಿದೆ.  ಎಲ್ಲರೂ ಧರ್ಮ ಮಾರ್ಗದಲ್ಲಿ ನಡೆಯಬೇಕಾದ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು. ದುಂಡಿ ಬಸವೇಶ್ವರ ದೇವಸ್ಥಾನ ಎರಡನೇ ಧರ್ಮಸ್ಥಳವಾಗಿ ಮೆರೆಯಲಿ ಎಂದು ಹಾರೈಸಿದರು.ಮಾಜಿ ಸಂಸದ ಮಂಜುನಾಥ ಕುನ್ನೂರ ಸಾರ್ವಜನಿಕರು ಹೆಚ್ಚು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದರ ಮೂಲಕ ದೇಶದ ಪರಂಪರೆ ಸಂಸ್ಕೃತಿ ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಮಾಜಿ ಶಾಸಕರಾದ ಗಂಗಣ್ಣ ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ ಸಮಾಜದಲ್ಲಿ ಉತ್ತಮ ದಾನಿಗಳಿದ್ದಾರೆ. ಆದರೆ ನೀಡಿದ ದಾನ ಸದ್ಭಳಕೆ ಆಗಬೇಕು ಎಂದು ದಾನಿಗಳು ಇಚ್ಛಿಸುತ್ತಾರೆ. ಈ ನಿಟ್ಟಿನಲ್ಲಿ ದುಂಡಿ ಬಸವೇಶ್ವರ ಸೇವಾ ಸಮಿತಿ ಸದಸ್ಯ ಮಂಡಳಿ ನಿಸ್ವಾರ್ಥದಿಂದ ದುಡಿದು ಸುಸಜ್ಜಿತ ದೇವಸ್ಥಾನ ನಿರ್ಮಿಸಿರುವುದು ಶ್ಲಾಘನೀಯ ಎಂದರು.ಅಧ್ಯಕ್ಷತೆ ವಹಿಸಿದ್ದ ಚಂದ್ರಶೇಖರಪ್ಪ ಬಡ್ನಿ ಮಾತನಾಡಿ ಎಲ್ಲರೂ ಸಮಾಜ ಸೇವೆ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಈಚೆಗೆ ಜನರಲ್ಲಿ ಸೇವಾ ಮನೋಭಾವನೆ ಕಡಿಮೆ ಯಾಗಿರುವುದು ವಿಷಾದನೀಯ ಎಂದರು.

ಗಂಜಿಗಟ್ಟಿ ಶ್ರೀಗಳು, ಕುಂದಗೋಳ ಶ್ರೀಗಳು, ಮಹಾರಾಷ್ಟ್ರದ ಕರಜ ಶ್ರೀಗಳು, ಮಳೆ ಮಲ್ಲಿಕಾರ್ಜುನ ಸ್ವಾಮೀಜಿ, ನಾವಲಗಿ ಶ್ರೀಗಳು ಮಾತನಾಡಿದರು.ಫಕ್ಕಣ್ಣ ಗಡ್ಡಿ, ಸೋಮಣ್ಣವಡಕಣ್ಣವರ, ಎಲ್.ಸಿ. ಲಿಂಬಯ್ಯಸ್ವಾಮಿಮಠ, ಅಪ್ಪಣ್ಣ ತಟ್ಟಿ, ಈರಣ್ಣ ಅಂಕಲ ಕೋಟಿ, ಬಸವರಾಜ ಗಾಂಜಿ, ನಿಂಗನಗೌಡ ಪಾಟೀಲ, ಆರ್.ಎಫ್. ಪುರಾಣಿಕಮಠ, ಸಂಜಯಮೂರ್ತಿ ಮತ್ತಿತರರು ಹಾಜರಿದ್ದರು.ಅಶೋಕ ಸೇಬಣ್ಣವರ ಸ್ವಾಗತಿಸಿದರು. ಬಸವರಾಜ ಬೆಂಡಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಎಸ್. ಬಾಳೇಶ್ವರಮಠ ಕಾರ್ಯಕ್ರಮ ನಿರೂಪಿಸಿದರು. ಡಿ.ಎಂ. ಪೂಜಾರ ವಂದಿಸಿದರು. ನಂತರ ದೇವಸ್ಥಾನ ನಿರ್ಮಾಣಕ್ಕೆ ದಾನ ಮಾಡಿದ ದಾನಿಗಳನ್ನು ಸನ್ಮಾನಿಸಲಾಯಿತು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.