ಶನಿವಾರ, ಮೇ 8, 2021
25 °C

ಎಲ್ಲರನ್ನೂ ರಕ್ಷಿಸುತ್ತೇವೆ: ಸೇನೆ ಅಭಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್):  ಮೇಘಸ್ಫೋಟಕ್ಕೆ ತುತ್ತಾಗಿರುವ ಉತ್ತರಾಖಂಡದಲ್ಲಿ ಅತಂತ್ರರಾಗಿರುವ ಪ್ರತಿಯೊಬ್ಬರನ್ನು ರಕ್ಷಿಸುವುದಾಗಿ ಸೇನೆಯ ಕೇಂದ್ರ ಕಮಾಂಡ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಅನಿಲ್ ಚೈಟ್ ಭರವಸೆ ನೀಡಿದ್ದಾರೆ.ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸೇನಾ ಸಿಬ್ಬಂದಿ `ದೇವರಲ್ಲ' ಎಂದೂ ಅವರು ಹೇಳಿದ್ದಾರೆ.

`ಇನ್ನು  ಮುಂದೆ ಯಾರೊಬ್ಬರೂ ಅಲ್ಲಿ ಸಾಯುವುದಿಲ್ಲ. ಸಿಲುಕಿ ಹಾಕಿಕೊಂಡ ಪ್ರತಿಯೊಬ್ಬರನ್ನೂ ನಾವು ರಕ್ಷಿಸುತ್ತೇವೆ. ಜನರು ಎಲ್ಲಿಯೇ ಸಿಕ್ಕಿಹಾಕಿಕೊಂಡಿದ್ದರೂ, ಆ ಸ್ಥಳಕ್ಕೆ ತೆರಳಿ ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುತ್ತೇವೆ' ಎಂದು ಲೆಫ್ಟಿನೆಂಟ್ ಜನರಲ್ ಚೈಟ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.`ನಾವು ದೇವರಲ್ಲ. ಯುದ್ಧ, ಶಾಂತಿ ಅಥವಾ ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ದೇಶದ ಜನರ ಸೇವೆ ಮಾಡುವುದಕ್ಕಾಗಿ ನಾವಿರುವುದು' ಎಂದು ಅವರು ಹೇಳಿದ್ದಾರೆ.ಸಿಬ್ಬಂದಿ ನಡೆಸುತ್ತಿರುವ ರಕ್ಷಣಾ ಕಾರ್ಯ ಯಶಸ್ವಿಯಾಗಲಿ ಎಂದು ದೇಶದ ಜನರು ಹಾರೈಸಬೇಕು ಎಂದೂ ಅವರು ಮನವಿ ಮಾಡಿದ್ದಾರೆ.

ರಕ್ಷಣಾ ಕಾರ್ಯಕ್ಕಾಗಿ ಸೇನೆಯ ಅತ್ಯುತ್ತಮ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪ್ರತಿಯೊಬ್ಬ ಅಧಿಕಾರಿಯೂ ನಾಲ್ವರು ವ್ಯಕ್ತಿಗಳಿಗೆ ಸಮ ಎಂದು ಅವರು ಹೇಳಿದ್ದಾರೆ.ಎರಡನೇ ಹಂತದ ರಕ್ಷಣಾ ಕಾರ್ಯಾಚರಣೆಯನ್ನು ಸೇನೆ ಆರಂಭಿಸಿದೆ. ಆದರೆ  ರಕ್ಷಣಾ ಕಾರ್ಯಕ್ಕೆ ಸಮಯದ ಮಿತಿಯನ್ನು ನಿಗದಿ ಪಡಿಸಲು ಸಾಧ್ಯವಿಲ್ಲ ಎಂದು ಚೈಟ್ ಮಾಹಿತಿ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.