ಶುಕ್ರವಾರ, ಮೇ 27, 2022
30 °C

ಎಲ್ಲರ ಕಲ್ಯಾಣವೇ ಸಮಾನತೆ

ಪ್ರಜವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ವ್ಯಕ್ತಿ ಕಲ್ಯಾಣದ ಜತೆಗೆ ಸಮಾಜದ ಕಲ್ಯಾಣವೂ ಆದಾಗ ಮಾತ್ರ ಪರಿಪೂರ್ಣ ಸಮಾನತೆ ಸಾಧ್ಯ ಎಂದು ಶಿಕ್ಷಕಿ ಎ.ಸಿ. ಶಶಿಕಲಾ ಅಭಿಪ್ರಾಯಪಟ್ಟರು.ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಹದಡಿ ರಸ್ತೆಯ ಜ್ಞಾನ ಭಾರತಿ ಡಿ.ಇಡಿ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಲ್ಲಿಹಾಳ್ ಶಿವಲಿಂಗಮ್ಮ ಹಾಗೂ ಶಾನುಭೋಗ್ ಹಾಲಯ್ಯ ಅವರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮೇಲು-ಕೀಳು, ಬಡವ-ಬಲ್ಲಿದ, ಮಹಿಳೆ-ಪುರುಷ, ಮೇಲು-ಕೀಳು ಎಂಬ ಭೇದವಿಲ್ಲದೆ ಎಲ್ಲರೂ ಒಂದೇ ಎನ್ನುವ ಅಂಶವನ್ನು ಬಸವಣ್ಣ ಸೇರಿದಂತೆ ಶರಣರು ಜಗತ್ತಿಗೆ ತೋರಿಸಿಕೊಟ್ಟರು. ಬಸವಣ್ಣ, ಅಲ್ಲಮಪ್ರಭು, ಶಿವಯೋಗಿ ಸಿದ್ಧರಾಮ, ಚನ್ನಬಸವಣ್ಣ, ಅಕ್ಕನಾಗಮ್ಮ  ಸೇರಿದಂತೆ ಹಲವು ಶರಣರು ವಚನಗಳ ಮೂಲಕ ಸಮಾಜದ ಲೋಪಗಳನ್ನು ತಿದ್ದಲು ಪ್ರಯತ್ನಿಸಿದರು ಎಂದು ಬಣ್ಣಿಸಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎಸ್.ಪಿ. ಸಂಜೀವಮೂರ್ತಿ ಮಾತನಾಡಿ, ಶರಣರು ಸಮಾಜಕ್ಕೆ ಸರಳವಾದ ಸಾಹಿತ್ಯ ಕೊಟ್ಟಿದ್ದಾರೆ. ಅಂತಹ ದಾರ್ಶನಿಕರು ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಆಶಿಸಿದರು.ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಚಿಕ್ಕೋಳ್ ಈಶ್ವರಪ್ಪ ಪ್ರಾಸ್ತಾವಿಕ ಮಾತನಾಡಿದರು.ಸಂಗಪ್ಪ ತೋಟದ ವಚನ ಹಾಡಿದರು. ಶ್ರುತಿ ಸ್ವಾಗತಿಸಿದರು. ಕುಸುಮಾ ಕಾರ್ಯಕ್ರಮ ನಿರೂಪಿಸಿದರು. ವೀರಭದ್ರಪ್ಪ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.