ಮಂಗಳವಾರ, ಏಪ್ರಿಲ್ 20, 2021
26 °C

ಎಲ್ಲ ಕಡೆ ಸೈಕಲ್ ಸವಾರಿ ಆಗಲಿ

ರುದ್ರೇಶ್ ಬಿ. ಅದರಂಗಿ, ಬೆಂಗಳೂರು. Updated:

ಅಕ್ಷರ ಗಾತ್ರ : | |

ಮೈಸೂರಿನ ಜಿಲ್ಲಾಧಿಕಾರಿಗಳಾದ ಪಿ.ಎಸ್. ವಸ್ತ್ರದ್ ಅವರು ಪ್ರತಿ ಸೋಮವಾರ ಸರ್ಕಾರಿ ನೌಕರರು ಕಚೇರಿಗೆ ಕಡ್ಡಾಯವಾಗಿ ಸೈಕಲ್‌ನಲ್ಲೇ ಬರಬೇಕೆಂಬ ಆದೇಶ ಹೊರಡಿಸಿರುವುದು ಸ್ವಾಗತಾರ್ಹವಾದುದು.

 

ಕೇವಲ ಜಿಲ್ಲಾಧಿಕಾರಿಗಳ ಆದೇಶ ಪತ್ರದಲ್ಲಷ್ಟೇ ಇರದೆ ಸ್ವತಃ ತಾವೇ ಅದನ್ನು ಪರಿಪಾಲಿಸಿ ಇತರರಿಗೆ ಮಾದರಿಯಾಗಿದ್ದಾರೆ.ಇದು ಕೇವಲ ಮೈಸೂರು ಜಿಲ್ಲೆಗಷ್ಟೇ ಅಲ್ಲ, ರಾಜ್ಯದಾದ್ಯಂತ ಎಲ್ಲಾ ಸರ್ಕಾರಿ ಕಚೇರಿ ಮತ್ತು ಸಚಿವರಿಗೂ ಅನ್ವಯವಾಗಬೇಕಾಗಿದೆ.ದಿನೇ ದಿನೇ ವಾಹನಗಳು ಹೆಚ್ಚುತ್ತಿವೆ. ಆದರೆ ಪೆಟ್ರೋಲ್ ಮೊದಲಾದ ಇಂಧನಗಳ ಕೊರತೆಯುಂಟಾಗಿ ಅವುಗಳ ಬೆಲೆ ಗಗನಮುಖಿಯಾಗಿದೆ. ಇದಕ್ಕೆ ಪರಿಹಾರೋಪಾಯವಾಗಿ ಸಾರ್ವಜನಿಕ ವಾಹನಗಳ ಬಳಕೆ, ಸೈಕಲ್‌ನಂತಹ ಇಂಧನೇತರ ವಾಹನಗಳ ಬಳಕೆ ಹೆಚ್ಚಬೇಕಾಗಿದೆ.

 

ಮೈಸೂರು ಜಿಲ್ಲಾಧಿಕಾರಿಗಳ ಆದೇಶ ಇದಕ್ಕೊಂದು ಪರಿಹಾರವಾಗಿದೆ. ಪೂರಕವಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರಿನಲ್ಲಿ  ತಿಂಗಳಿಗೊಮ್ಮೆ ಬಸ್ ದಿನವನ್ನು ಆಚರಿಸುತ್ತಿದೆ.

 

ಸಾರ್ವಜನಿಕರು, ಅಧಿಕಾರಿಗಳು, ಸಚಿವರು ಇದಕ್ಕೆ ಸ್ಪಂದಿಸಿ ತಿಂಗಳಿಗೊಮ್ಮೆ ಸಾರ್ವಜನಿಕ ವಾಹನ / ಸೈಕಲ್ ಗಳಲ್ಲಿ ಸಂಚರಿಸಿದಲ್ಲಿ  ಇಂಧನದ ಕೊರತೆ ನೀಗುವುದಲ್ಲದೆ, ಸಂಚಾರದ ಒತ್ತಡ ಕಡಿಮೆಯಾಗಿ ವಾಯುಮಾಲಿನ್ಯ ಕಡಿಮೆಯಾಗುತ್ತದೆ.

 

ಮೂಲಭೂತ ಸೌಕರ್ಯ ಹಾಗೂ ಇಂಧನಗಳ ಕೊರತೆಯ ಸಂದರ್ಭದಲ್ಲಿ  ಇಂತಹ ಮಾರ್ಗೋಪಾಯಗಳು ಅನಿವಾರ್ಯವಾಗಿದ್ದು, ಎಲ್ಲರೂ ಇದನ್ನು ಪಾಲಿಸಿದಾಗ ರಾಷ್ಟ್ರ ಬಲಿಷ್ಠವಾಗುತ್ತದೆ. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.