ಭಾರತದ ಫುಟ್ಬಾಲ್ ಕ್ಷೇತ್ರಕ್ಕೆ ಈ ವರ್ಷ ಅತ್ಯಂತ ನಿರಾಶಾದಾಯಕ. ಪುರುಷರ ತಂಡವು ಸತತ ಸೋಲುಗಳ ಬಳಿಕ ಫಿಫಾ ರ್ಯಾಂಕಿಂಗ್ನಲ್ಲಿ 142ನೇ ಸ್ಥಾನಕ್ಕೆ ಕುಸಿತ ಕಂಡಿದ್ದು ಒಂದೆಡೆ ಆದರೆ, ಮತ್ತೊಂದೆಡೆ 2025–26ರ ಸಾಲಿನ ಇಂಡಿಯನ್ ಸೂಪರ್ ಲೀಗ್(ಐಎಸ್ಎಲ್) ಮೇಲೆ ಆವರಿಸಿದ್ದ ಕರಿನೆರಳು ಸರಿಯಲೇ ಇಲ್ಲ.

l ಈ ನಿರಾಸೆಗಳ ಮಧ್ಯೆ ಪುರುಷರ ತಂಡ ಸಿಎಎಫ್ಎ ನೇಷನ್ಸ್ ಕಪ್ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದಿತು. 19 ವರ್ಷದೊಳಗಿನ ಪುರುಷರ ತಂಡವು ಸ್ಯಾಫ್ ಫುಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಸೀನಿಯರ್ ಮಹಿಳೆಯರ ತಂಡವು 2026ರ ಎಫ್ಎಸಿ ಏಷ್ಯನ್ ಕಪ್ ಟೂರ್ನಿಗೆ ಮೊದಲ ಬಾರಿ ನೇರ ಅರ್ಹತೆ ಪಡೆಯಿತು

l 2024–25ನೇ ಸಾಲಿನ ಐಎಸ್ಎಲ್ ಕಿರೀಟವನ್ನು ಏಪ್ರಿಲ್ನಲ್ಲಿ ಮೋಹನ್ ಬಾಗನ್ ಸೂಪರ್ ಜೈಂಟ್ಸ್ ತಂಡವು ಗೆದ್ದುಕೊಂಡಿತು. ಫೈನಲ್ನಲ್ಲಿ ಬೆಂಗಳೂರು ಎಫ್ಸಿ ತಂಡವನ್ನು 2–1ರಿಂದ ಮಣಿಸಿತು

ಹಾಕಿ

l ಹರ್ಮನ್ಪ್ರೀತ್ ಸಿಂಗ್ ನಾಯಕತ್ವದ ಭಾರತದ ಪುರುಷರ ತಂಡವು ಏಷ್ಯಾ ಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು, 2026ರ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯಿತು

l ಭಾರತದ ಆತಿಥ್ಯದಲ್ಲಿ ನಡೆದ ಎಫ್ಐಎಚ್ ಜೂನಿಯರ್ ಪುರುಷರ ವಿಶ್ವಕಪ್ನಲ್ಲಿ ಭಾರತ ತಂಡವು ಕಂಚಿನ ಪದಕ ಗೆದ್ದುಕೊಂಡಿತು

l ಭಾರತ ತಂಡದ ಆಟಗಾರ ಲಲಿತ್ ಕುಮಾರ್ ಉಪಾಧ್ಯಾಯ (ಜೂನ್), ಆಟಗಾರ್ತಿ ವಂದನಾ ಕಟಾರಿಯಾ (ಏಪ್ರಿಲ್) ಅವರು ಅಂತರರಾಷ್ಟ್ರೀಯ ಹಾಕಿಗೆ ನಿವೃತ್ತಿ ಘೋಷಿಸಿದರು

ಟೆನಿಸ್

l ಟೆನಿಸ್ ದಿಗ್ಗಜ, ಕನ್ನಡಿಗ ರೋಹನ್ ಬೋಪಣ್ಣ ನವೆಂಬರ್ನಲ್ಲಿ ತಮ್ಮ 22 ವರ್ಷಗಳ ವೃತ್ತಿಪರ ಟೆನಿಸ್ ವೃತ್ತಿಜೀವನಕ್ಕೆ ವಿದಾಯ ಹೇಳಿದರು

l ಭಾರತದ ಟೆನಿಸ್ ದಿಗ್ಗಜರಾದ ವಿಜಯ್ ಅಮೃತರಾಜ್ ಮತ್ತು ಲಿಯಾಂಡರ್ ಪೇಸ್ ಅವರಿಗೆ ಅಂತರರಾಷ್ಟ್ರೀಯ ಟೆನಿಸ್ ಹಾಲ್ ಆಫ್ ಫೇಮ್ ಗೌರವ ದೊರೆಯಿತು

l ಇಟಲಿಯ ಯಾನಿಕ್ ಸಿನ್ನರ್ ಮತ್ತು ಸ್ಪೇನ್ ಕಾರ್ಲೋಸ್ ಅಲ್ಕರಾಜ್ ಅವರು ಪುರುಷರ ಟೆನಿಸ್ನ ಪ್ರಮುಖ ಶಕ್ತಿಕೇಂದ್ರಗಳಾಗಿ ಬೆಳೆದರು. ಇವರಿಬ್ಬರು 2025ರಲ್ಲಿ ತಲಾ ಎರಡು ಗ್ರ್ಯಾನ್ಸ್ಲಾಮ್ಗಳನ್ನು ಗೆದ್ದುಕೊಂಡರು

ಬ್ಯಾಡ್ಮಿಂಟನ್

l ಭಾರತದ ಲಕ್ಷ್ಯಸೇನ್ ಅವರು ಆಸ್ಟ್ರೇಲಿಯಾ ಓಪರ್ ಬಿಡಬ್ಲ್ಯುಎಫ್ ಸೂಪರ್ 500 ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದರು

l ಕರ್ನಾಟಕದ ಆಯುಷ್ ಶೆಟ್ಟಿ ಅವರು ಅಮೆರಿಕ ಓಪನ್ ಸೂಪರ್ 300 ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡರು

l ಭಾರತದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿಯು ಪ್ಯಾರಿಸ್ನಲ್ಲಿ ನಡೆದ ವಿಶ್ವ ಚಾಂಪಿಯನ್ಷಿಪ್ನಲ್ಲಿ ಪುರುಷರ ಡಬಲ್ಸ್ನಲ್ಲಿ ಕಂಚು ಗೆದ್ದುಕೊಂಡಿತು

ಕುಸ್ತಿ

l ಕುಸ್ತಿಪಟು ವಿನೇಶ್ ಫೋಗಟ್ ಅವರು ನಿವೃತ್ತಿ ನಿರ್ಧಾರದಿಂದ ಹೊರಬರುವುದಾಗಿ ಘೋಷಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.