ತಿ.ನರಸೀಪುರ: ಅನಿಲ ಸಂಪರ್ಕ ಇರುವ ಪಡಿತರದಾರರಿಗೆ ಈ ಬಾರಿ ಸೀಮಎಣ್ಣೆ ಹಂಚಿಕೆ ಮಾಡದಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಒಂದೇ ಸಿಲಿಂಡರ್ ಹೊಂದಿರುವ ನಮಗೆ ಗ್ಯಾಸ್ ಮುಗಿದರೆ ಮತ್ತೊಂದು ಸಿಲಿಂಡರ್ ಬರುವವರೆಗೇ ಕನಿಷ್ಠ ಒಂದು ವಾರವಾದರೂ ಹಿಡಿಯುತ್ತದೆ. ಅಲ್ಲಿಯವರೆಗೆ ನಾವು ಅಡುಗೆ ಮಾಡಿ ತಿನ್ನುವುದಾರರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಕನಿಷ್ಠ ಗ್ಯಾಸ್ ಇರುವವರೆಗೆ 2 ಲೀಟರ್ ಸೀಮೆಎಣ್ಣೆ ನೀಡಬೇಕು. ಸೀಮಎಣ್ಣೆ ನಮಗೆ ಕೊಡದಿದ್ದರೆ ಗ್ಯಾಸ್ ಮುಗಿದರೆ ತುರ್ತು ಸ್ಟೌ ಬಳಸಲು ತೊಂದರೆಯಾಗುತ್ತದೆ. ಗ್ರಾಮಾಂತರ ಪ್ರದೇಶದಲ್ಲಿ ಅನೇಕರು ಇನ್ನೂ ಸೀಮೆಎಣ್ಣೆ ದೀಪ ಬಳಸುತ್ತಾರೆ.

ಈಗ ವಿದ್ಯುತ್ ಲೋಡ್ ಶೆಡ್ಡಿಂಗ್ ಸಮಸ್ಯೆ ಕೂಡ ಇದೆ. ಇಂತಹ ಸಂದರ್ಭದಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ ಗ್ಯಾಸ್ ಸಂಪರ್ಕ ಪಡೆದಿರುವವರಿಗೆ ಕನಿಷ್ಠ 2 ಲೀಟರ್ ಸೀಮೆಎಣ್ಣೆ ವಿತರಿಸಲು ಕ್ರಮ ಕೈಗೊಳ್ಳುವಂತೆ ಪಟ್ಟಣದ ನಾಗರಿಕರು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.