ಗೋಣಿಕೊಪ್ಪಲು: ಅಡುಗೆ ಅನಿಲ ಸೋರಿಕೆ ಸಂದರ್ಭದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕೂಡ ಸಂಭವಿಸಿ ಅಡುಗೆ ಮನೆ ಹಾಗೂ ಇತರ ಸಾಮಾಗ್ರಿಗಳು ಸುಟ್ಟು ಭಾರಿ ನಷ್ಟವಾಗಿರುವ ಘಟನೆ ಇಲ್ಲಿಗೆ ಸಮೀಪದ ಕಳತ್ಮಾಡುವಿನಲ್ಲಿ ಗುರುವಾರ ನಡೆದಿದೆ.

ಕಳತ್ಮಾಡುವಿನ ಜಪ್ಪೆಕೊಲ್ಲಿ ಉತ್ತಪ್ಪ ಎಂಬವರ ಅಡುಗೆ ಮನೆಯಲ್ಲಿ ಮಧ್ಯಾಹ್ನ 2.30ರ ವೇಳೆಗೆ ಅಡುಗೆ ಅನಿಲ ಸೋರುತಿತ್ತು ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ವಿದ್ಯುತ್ ಅವಘಡವೂ ಸಂಭವಿಸಿ ಅಡುಗೆ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಗಾಬರಿಗೊಂಡ ಉತ್ತಪ್ಪ ಪತ್ನಿ ಶೋಭಾ ತಮ್ಮ ವೃದ್ಧ ತಂದೆ ಅಯ್ಯಪ್ಪ ಹಾಗೂ ತಾಯಿ ಅಕ್ಕಮ್ಮ ಅವರನ್ನು ಹೊರಗೆ ಕರೆತರುವಾಗ ಗಾಳಿಬೀಬಿಸಿ ಬೆಂಕಿ ಮತ್ತಷ್ಟು ಬಿರುಸುಗೊಂಡಿದೆ.

ಇದರಿಂದ ಅಡುಗೆ ಮನೆಯಲ್ಲಿದ್ದ ರೆಫ್ರಜಿರೇಟರ್, ಮಿಕ್ಸಿ, ಅಡುಗೆ ಪಾತ್ರೆ ಹಾಗೂ ಇತರ ಬೆಲೆಬಾಳುವ ಸಾಮಾಗ್ರಿಗಳು ಸುಟ್ಟುಕರಲಾಗಿವೆ. ಜತೆಗೆ ಕಿಟಕಿ, ಬಾಗಿಲುಗಳು, ವಿದ್ಯುತ್ ಬೋರ್ಡ್, ತಂತಿ ಕೂಡ ಸುಟ್ಟು ಹೋಗಿವೆ. ಬೆಂಕಿಯ ಶಾಖಕ್ಕೆ ಮನೆಯ ಗೋಡೆ ಬಿರುಕುಬಿಟ್ಟಿದೆ. ಅರ್ಸಿಸಿ ಮನೆಯಾದ್ದರಿಂದ ಬೆಂಕಿ ಇತರ ಭಾಗಗಳಿಗೆ ಹರಡದೆ ಸಂಭವಿಸಬಹುದಾಗಿದ್ದ ಹೆಚ್ಚಿನ ಅನಾಹುತ ತಪ್ಪಿದೆ. ಆದರೂ ಸುಮಾರು ರೂ.15 ಲಕ್ಷ ನಷ್ಟವಾಗಿದೆ ಎಂದು ಉತ್ತಪ್ಪ ತಿಳಿಸಿದ್ದಾರೆ.

ವಿಷಯ ತಿಳಿದ ವಿಧಾನಸಭಾ ಅಧ್ಯಕ್ಷ ಕೆ.ಜಿ. ಬೋಪಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೂಡಲೆ ತಹಶೀಲ್ದಾರ್ ನಷ್ಟದ ಅಂದಾಜಿನ ವರದಿ ನೀಡಿದರೆ ಸರ್ಕಾರಕ್ಕೆ ಸಲ್ಲಿಸಿ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳ ಲಾಗುವುದು ಎಂದು ಹೇಳಿದರು. ಬಳಿಕ ತಹಶೀ ಲ್ದಾರ್ ಹನುಮಂತರಾಯಪ್ಪ ಭೇಟಿ ನೀಡಿ ಪರಿಶೀಲಿಸಿ ಅಂದಾಜಿನ ನಷ್ಟವನ್ನು ದಾಖಲಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.