ನವದೆಹಲಿ (ಪಿಟಿಐ): ಹೆಚ್ಚುತ್ತಿರುವ ರೈಲು ಅಪಘಾತಗಳನ್ನು ತಡೆಯಲು ಅಪಘಾತ ನಿಯಂತ್ರಣ ಸಾಧನಗಳನ್ನು (ಎಸಿಡಿ) ಅಳವಡಿಸುವ ಕಾರ್ಯ ವಿಳಂಬವಾಗುತ್ತಿರುವುದಕ್ಕೆ ಸಂಸದೀಯ ಸಮಿತಿಯು ರೈಲ್ವೆ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿದೆ.

ಈ ಕಾರ್ಯ ಪೂರ್ಣಗೊಳಿಸಲು ಇನ್ನು ಆರು ತಿಂಗಳಲ್ಲಿ ಸಮಗ್ರ ಕಾರ್ಯತಂತ್ರ ರೂಪಿಸುವಂತೆಯೂ ಅದು ತಾಕೀತು ಮಾಡಿದೆ.

ರೈಲ್ವೆಗೆ ಸಂಬಂಧಿಸಿದ, ಡಿಎಂಕೆ ಸಂಸದ ಟಿ.ಆರ್.ಬಾಲು ನೇತೃತ್ವದ ಸ್ಥಾಯಿ ಸಮಿತಿಯು, ಎಸಿಡಿ ಅವಡಿಸುತ್ತಿರುವ ರೀತಿ ಸಮಾಧಾನಕರವಾಗಿಲ್ಲ ಎಂದು ಇತ್ತೀಚೆಗೆ ಸಂಸತ್ನಲ್ಲಿ ಮಂಡಿಸಿದ ವರದಿಯಲ್ಲಿ ಹೇಳಿದೆ. ಕಾಲಮಿತಿಯಲ್ಲಿ ಈ ಕಾರ್ಯ ಪೂರ್ಣಗೊಳಿಸಲು ರೈಲ್ವೆ ಇಲಾಖೆಯು ಸಮಗ್ರ ಯೋಜನೆಯನ್ನು ರೂಪಿಸಬೇಕೆಂದೂ ಸಲಹೆ ನೀಡಿದೆ.

2006ರ ಜುಲೈನಿಂದ ಈಶಾನ್ಯ ವಲಯ ರೈಲ್ವೆಯಲ್ಲಿ (ಎನ್ಎಫ್ಆರ್) ಎಸಿಡಿ ಅಳವಡಿಕೆ ಕಾರ್ಯವು ಪೈಲಟ್ ಯೋಜನೆಯಾಗಿ ನಡೆಯುತ್ತಿದೆ. ಇದರ ಪರಿಣಾಮವನ್ನು ನೋಡಿಕೊಂಡು ಸುಧಾರಿತ ಎಸಿಡಿಗಳನ್ನು ಅಳವಡಿಸಲಾಗುತ್ತದೆ ಎಂದು ರೈಲ್ವೆ ಸಚಿವಾಲಯ ಸಮಜಾಯಿಷಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.