ಬೆಂಗಳೂರು: ಪಿ.ಎಲ್. ತಿಮ್ಮಣ್ಣ ತಂದಿತ್ತ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಎಸ್ಎಐ `ಬಿ' ತಂಡದವರು ಕೆಎಸ್ಎಚ್ಎ ಆಶ್ರಯದ ರಾಜ್ಯ `ಎ' ಡಿವಿಷನ್ ಹಾಕಿ ಲೀಗ್ ಚಾಂಪಿಯನ್ಷಿಪ್ನಲ್ಲಿ ಸುಲಭ ಗೆಲುವು ಪಡೆದರು.

ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಎಸ್ಎಐ `ಬಿ' ತಂಡ 5-0 ಗೋಲುಗಳಿಂದ ಎಎಸ್ಸಿ ಬಾಯ್ಸ ತಂಡವನ್ನು ಮಣಿಸಿತು.

ತಿಮ್ಮಣ್ಣ ಅವರು ಪಂದ್ಯದ 6, 9 ಹಾಗೂ 23ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಹ್ಯಾಟ್ರಿಕ್ ಸಾಧನೆ ಮಾಡಿದರು. ಇತರ ಎರಡು ಗೋಲುಗಳನ್ನು ಪಿ.ಆರ್. ಅಯ್ಯಪ್ಪ (31) ಹಾಗೂ ಫರ್ಹಾನ್ (56) ತಂದಿತ್ತರು.

ಎಂಇಜಿ ಬಾಯ್ಸ ಮತ್ತು ಪೋಸ್ಟಲ್ ತಂಡಗಳ ನಡುವಿನ ದಿನದ ಪಂದ್ಯ 2-2 ಗೋಲುಗಳ ಡ್ರಾದಲ್ಲಿ ಕೊನೆಗೊಂಡಿತು.
ಸ್ಯಾಮುಯೆಲ್ ನಿರಂಜನ್ (3ನೇ ನಿಮಿಷ) ಮತ್ತು ಎಂ. ನವೀನ್ ಕುಮಾರ್ (16) ತಂದಿತ್ತ ಗೋಲುಗಳ ನೆರವಿನಿಂದ ಪೋಸ್ಟಲ್ ಆರಂಭದಲ್ಲೇ 2-0 ರಲ್ಲಿ ಮುನ್ನಡೆ ಪಡೆದಿತ್ತು.

ಮರುಹೋರಾಟ ನಡೆಸಿದ ಎಂಇಜಿ ಬಾಯ್ಸ ರವೀಂದರ್ (33) ಹಾಗೂ ಅಜಯ್ ಭಾಲಾ (34) ಗಳಿಸಿದ ಗೋಲುಗಳ ನೆರವಿನಿಂದ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಯಿತು.

ಗುರುವಾರ ನಡೆಯುವ ಪಂದ್ಯಗಳಲ್ಲಿ ಎಎಸ್ಸಿ ಬಾಯ್ಸ- ಎಂಇಜಿ ಬಾಯ್ಸ ಮತ್ತು ಪೋಸ್ಟಲ್- ಎಸ್ಎಐ `ಬಿ' ತಂಡಗಳು ಪೈಪೋಟಿ ನಡೆಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.