ಗುರುವಾರ , ಮೇ 13, 2021
22 °C

ಎ ಡಿವಿಷನ್ ಹಾಕಿ: ಹುಬ್ಬಳ್ಳಿ ತಂಡಕ್ಕೆ ವಿಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹುಬ್ಬಳ್ಳಿಯ ಸೌತ್ ವೆಸ್ಟರ್ನ್ ರೈಲ್ವೆ ಹಾಗೂ ಬೆಂಗಳೂರಿನ ಡಿವೈಎಸ್‌ಎಸ್ `ಎ~ ತಂಡದವರು ಇಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ ಆಶ್ರಯದ `ಎ~ ಡಿವಿಷನ್ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಜಯಗಳಿಸಿದರು.



ಅಕ್ಕಿತಿಮ್ಮನಹಳ್ಳಿ ರಾಜ್ಯ  ಹಾಕಿ  ಸಂಸ್ಥೆ  ಕ್ರೀಡಾಂಗಣದಲ್ಲಿ  ಗುರುವಾರ ನಡೆದ ಪಂದ್ಯದಲ್ಲಿ ಸೌತ್ ವೆಸ್ಟರ್ನ್ ರೈಲ್ವೆ ತಂಡ 1-0 ಗೋಲಿನಿಂದ ಬಿಎಸ್‌ಎನ್‌ಎಲ್ ತಂಡವನ್ನು ಮಣಿಸಿತು. ವಿಜಯದ ಗೋಲು 23ನೇ ನಿಮಿಷದಲ್ಲಿ ಹಸನ್ ಅಲಿ ಮೂಲಕ ಬಂತು.



ಇದೇ ಲೀಗ್ ಇನ್ನೊಂದು ಪಂದ್ಯದಲ್ಲಿ  ಡಿವೈಎಸ್‌ಎಸ್ `ಎ~ ತಂಡ 4-1 ಗೋಲುಗಳಿಂದ ಗದಗಿನ ಎಸ್‌ಎಚ್‌ಬಿಎಚ್‌ಸಿ ಮೇಲೆ ಸುಲಭ ಜಯ ಪಡೆಯಿತು. ವಿಜಯಿ ತಂಡದ ಕುಶಾ (3), ಸಹದೇವ್ ಹಾಗೂ ಎದುರಾಳಿ ತಂಡದ ಪ್ರವೀಣ್ ಗೋಲು ತಂದಿತ್ತರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.