ನವದೆಹಲಿ (ಪಿಟಿಐ): ಭಾರತದ ಡಿಸ್ಕಸ್ ಥ್ರೋ ಸ್ಪರ್ಧಿ ಕೃಷ್ಣಾ ಪೂನಿಯಾ ಪೋರ್ಟ್ಲ್ಯಾಂಡ್ನಲ್ಲಿ ನಡೆದ ಹಾಲ್ವಿನ್ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದರು. ಈ ಮೂಲಕ ಲಂಡನ್ ಒಲಿಂಪಿಕ್ಸ್ಗೆ `ಎ~ ಶ್ರೇಣಿಯಲ್ಲೂ ಅರ್ಹತೆ ಪಡೆದುಕೊಂಡರು.

ಐದು ದಿನಗಳ ಹಿಂದಷ್ಟೇ 61.12ಮೀ. ದೂರ ಎಸೆಯುವ ಮೂಲಕ `ಬಿ~ ಶ್ರೇಣಿಯಲ್ಲಿ ಪೂನಿಯಾ ಅರ್ಹತೆ ಗಿಟ್ಟಿಸಿಕೊಂಡಿದ್ದರು. ಆದರೆ ಮಂಗಳವಾರ ನಡೆದ ಸ್ಪರ್ಧೆಯಲ್ಲಿ 62.25ಮೀಟರ್ ದೂರ ಎಸೆದು `ಎ~ ಶ್ರೇಣಿಯಲ್ಲಿಯು ಅರ್ಹತೆ ಪಡೆದರು. ಒಲಿಂಪಿಕ್ಸ್ಗೆ ಅರ್ಹತೆ ಪಡೆಯಲು `ಬಿ; ಶ್ರೇಣಿಯಲ್ಲಿ 59.50ಮೀ. ದೂರ ಎಸೆಯುವುದು ಅಗತ್ಯವಿತ್ತು. `ಎ~ ಶ್ರೇಣಿಯಲ್ಲಿ 62ಮೀ. ದೂರ ಎಸೆಯಬೇಕಿತ್ತು.

ದೆಹಲಿ ಕಾಮನ್ವೆಲ್ತ್ ಕೂಟದಲ್ಲಿ ಚಿನ್ನದ ಪದಕ ಜಯಿಸಿದ ನಂತರ ಪೂನಿಯಾ ಎಸೆದ ಗರಿಷ್ಠ ದೂರವಿದು. ಇತ್ತೀಚಿಗೆ ಮೊಣಕಾಲಿನ ಗಾಯದ ನೋವಿನಿಂದ ಚೇತರಿಸಿಕೊಂಡಿರುವ ಅವರು ಎರಡು ಸಲ 60ಮೀಟರ್ಗೂ ಹೆಚ್ಚು ದೂರ ಎಸೆದಿದ್ದಾರೆ. ಕಳೆದ ವರ್ಷದ ಏಪ್ರಿಲ್ನಲ್ಲಿ ಕ್ಯಾಲಿಫೋರ್ನಿಯಾದಲ್ಲಿ ನಡೆದ ಸ್ಪರ್ಧೆಯಲ್ಲಿ 63.93ಮೀ. ದೂರ ಎಸೆದಿದ್ದರು. ಇದು ಅವರ ಶ್ರೇಷ್ಠ ಸಾಧನೆಯಾಗಿದೆ.

`ಕಳೆದ ಸ್ಪರ್ಧೆಯಲ್ಲೂ ಉತ್ತಮ ಪ್ರದರ್ಶನ ನೀಡಿರುವ ಪೂನಿಯಾ ಒಲಿಂಪಿಕ್ಸ್ನಲ್ಲಿ ಪದಕ ಜಯಿಸುವ ಭರವಸೆ ಮೂಡಿಸಿದ್ದಾರೆ. ಗಾಯದ ಸಮಸ್ಯೆಯ ನಡುವೆಯೂ ಈ ಸಾಧನೆ ಮಾಡಿರುವುದು ಖುಷಿ ನೀಡಿದೆ~ ಎಂದು ಪೂನಿಯಾ ಪತಿ ವೀರೇಂದರ್ ಪೂನಿಯಾ ಸಂತಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.