ರಾಯಬಾಗ: ಸಣ್ಣ ನೀರಾವರಿ ಇಲಾಖೆ ಯಿಂದ ₨ 5.5 ಕೋಟಿ ವೆಚ್ಚದಲ್ಲಿ ವಿಶೇಷ ಘಟಕ ಯೋಜನೆಯ ಗಿರಿಜನ ಉಪಯೋಗಿ ಯೋಜನೆಯಡಿ ತಾಲ್ಲೂಕಿನ ಬೆಂಡವಾಡ ಗ್ರಾಮದ ಪರಿಶಿಷ್ಟ ಜಾತಿ–ಜನಾಂಗದ ಒಂದೆ ಕಡೆ ಇರುವ 550 ಎಕರೆ ಜಮೀನಿಗೆ ರಾಜ್ಯದಲ್ಲಿಯೇ ಅತಿ ದೊಡ್ಡ ಏತ ನೀರಾವರಿ ಯೋಜನೆಯ ಕಾಮಗಾರಿಗೆ ಮಂಗಳವಾರ ಶಾಸಕ ದುರ್ಯೋಧನ ಐಹೊಳೆ ಚಾಲನೆ ನೀಡಿದರು.

ನೀರಾವರಿ ಯೋಜನೆಯನ್ನು ಜಾಗ ನೂರ ಹಳ್ಳಕ್ಕೆ ಜಾಕ್ವೆಲ್ ನಿರ್ಮಿಸಿದ್ದು ಅಲ್ಲಿಂದ ಕೊಳವೆಗಳ ಮೂಲಕ ಬೆಂಡ ವಾಡ ಗ್ರಾಮದ ಜಮೀನುಗಳಿಗೆ ತಂದು ಐದು ಕಡೆಗಳಿಂದ ಜಮೀನುಗಳಿಗೆ ನೀರು ಪೂರೈಸಲಾಗುವುದು. ರೈತರು ಕಚ್ಚಾಡದೆ ನೀರು ಪೋಲು ಮಾಡದೆ ಯೋಜನೆಯ ಸದುಪಯೋಗಪಡೆದು ಕೊಳ್ಳುವಂತೆಸಲಹೆ ಮಾಡಿದರು.

430 ಎಕರೆ ಪರಿಶಿಷ್ಟರ ಹಾಗೂ ಉಳಿದ 120 ಎಕರೆ ಹಿಂದುಳಿದವರ ಜಮೀನು ಇದೆ. ಅದೇ ರೀತಿ ತಾಲ್ಲೂಕಿನ 11 ಗ್ರಾಮಗಳಿಗೆ ಬಹುಗ್ರಾಮ ಯೋಜನೆಯಡಿ ಕೃಷ್ಣಾ ನದಿಯಿಂದ ಶುದ್ಧ ಕುಡಿಯುವ ನೀರಿನ ಯೋಜನೆ ₨14 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು ಮುಂದಿನ ತಿಂಗಳು ಕಾಮಗಾರಿ ಪೂರ್ತಿಮುಗಿಯಲಿದೆ ಎಂದರು.

ಮಾವಿನಹೊಂಡಾ–ಕಟಕಬಾವಿ ರಸ್ತೆ ಕಾಮಗಾರಿಗೆ ₨ 50 ಲಕ್ಷ, ಚಿಕ್ಕೋಡಿ ರೆಲ್ವೆ ನಿಲ್ದಾಣದಿಂದ ಬೆಂಡ ವಾಡವರೆಗಿನ ರಸ್ತೆ ಸುಧಾರಣೆಗೆ ಹಾಗೂ ಡಾಂಬರೀಕರಣಕ್ಕೆ ₨ 50 ಲಕ್ಷ ಮಂಜೂರಾಗಿದ್ದು ಕಾಮಗಾರಿ ಪ್ರಾರಂಭವಾಗಿದೆ ಎಂದರು.

ಸಣ್ಣ ನೀರಾವರಿ ಇಲಾಖೆಯ ಸಹಾ ಯಕ ಕಾರ್ಯನಿರ್ವಾಹಕ ಎಂಜಿನಿ ಯರ್ ಆರ್.ವಿ.ಮಾವುಲಿ, ಸಹಾಯಕ ಎಂಜಿನಿಯರ್ ಐ.ಎಸ್.ಹತ್ತಿ ಮಾತ ನಾಡಿದರು. ತಾ.ಪಂ.ಕಾರ್ಯ ನಿರ್ವಾ ಹಕ ಅಧಿಕಾರಿ ವೀರಣ್ಣ ವಾಲಿ ಮಾತ ನಾಡಿದರು. ಎ.ಟಿ.ಅಸ್ಕಿ, ಎನ್.ಎಂ. ಶಿಂಧೂರ, ಸದಾಶಿವ ಹುಂಜಾಗೋಳ, ಸುರೇಶ ಚೌಗಲಾ, ಲಕ್ಕಪ್ಪ ಪೂಜಾರಿ, ಕಲ್ಲಪ್ಪ ಪೂಜಾರಿ, ಸಂತೋಷ ಗಾಣಿಗೇರ, ಸುನಿಲ ಪಾಟೀಲ, ಬಿ.ವೈ. ಪವಾರ, ಎ.ಜಿ.ದೇಸಾಯಿ, ಜಿ.ಪಂ. ಸದಸ್ಯೆ ನೀಲವ್ವ ಮಳವಾಡ, ರಮೇಶ ಗಾಯ ಕವಾಡ ಹಾಗೂ ಬೆಂಡವಾಡ, ಕಂಕನ ವಾಡಿ, ಜಾಗನೂರ, ಮಾವಿ ಹೊಂಡಾ, ಜೋಡಟ್ಟಿ, ನಿಪನಾಳ ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.