ಗುರುವಾರ , ಏಪ್ರಿಲ್ 15, 2021
21 °C

ಏನ್ ಲೈಫೋ ಇದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಏನ್ ಲೈಫೋ ಇದು~

`ಏನ್ ಲೈಫೋ ಇದು~ ಚಿತ್ರ ಸೆಟ್ಟೇರಲು ಸಿದ್ಧವಾಗಿದೆ. ಎಂ.ಜಿ.ರಾಜ್ ಕಥೆ, ಚಿತ್ರಕಥೆ ರಚಿಸಿ ನಿರ್ದೇಶನ ಮಾಡುತ್ತಿದ್ದಾರೆ. ಶಾಂತಿಪಾರ್ಥ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರವಿಕೀರ್ತಿ ಸಂಗೀತ, ಕುಮಾರ್ ಮತ್ತು ರಾಜ್ ಸಂಭಾಷಣೆ, ಕಪಿಲ್ ನೃತ್ಯ ನಿರ್ದೇಶನ, ಮಹೇಶ್ ಎ.ಬಿ.ಹಳ್ಳಿ- ಚಿರತೆ ಸುಸೈ ಸಾಹಿತ್ಯ, ಶಿವು ಸಾಹಸ, ಕೃಷ್ಣರಾವ್ ಸಂಕಲನ, ಹಂಪಿ ಸುಂದರ್ ಕಲಾನಿರ್ದೇಶನವಿದೆ.ಪ್ರದೀಪ್, ದೀಪಿಕಾ ದಾಸ್, ಓಂ ಪ್ರಕಾಶ್, ಶ್ವೇತಾ, ಹರ್ಷವರ್ಧನ್, ಶಿವಕುಮಾರ್, ಕೃತಿ, ಗಣೇಶ್, ನಾಗಾರ್ಜುನ, ನೆಲಮಂಗಲ ಬಾಬು, ರಂಗರಾಮು ತಾರಾಗಣವಿದೆ.

ಶೀಘ್ರದಲ್ಲೇ `ರೆಬಲ್~     

`ರೆಬಲ್~ ಚಿತ್ರಕ್ಕೆ ರೀರೆಕಾರ್ಡಿಂಗ್ ನಡೆಯುತ್ತಿದೆ. ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯದಲ್ಲೇ ಬಿಡುಗಡೆಯಾಗಲಿದೆ. ಎಸ್. ವಿ. ರಾಜೇಂದ್ರ ಸಿಂಗ್‌ಬಾಬು ನಿರ್ದೇಶನದ ಈ ಚಿತ್ರದ ನಾಯಕ ಆದಿತ್ಯ.ಸಂಜನಾ, ದೀಪಿಕಾ ರಾವ್, ಶರತ್‌ಲೋಹಿತಾಶ್ವ, ರಾಮಕೃಷ್ಣ, ಅವಿನಾಶ್, ಸುಹಾಸಿನಿ  ತಾರಾಬಳಗದಲ್ಲಿದ್ದಾರೆ. ನಿರ್ದೇಶಕರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಸೆಲ್ವರಾಜ್ ಛಾಯಾಗ್ರಹಣ, ಜೆಸಿಗಿಫ್ಟ್ ಸಂಗೀತ, ರವಿವರ್ಮ ಸಾಹಸ ನಿರ್ದೇಶನ ಮಾಡಿದ್ದಾರೆ.

ಬೆಂಗಳೂರಿನಲ್ಲಿ `ಸ್ವೀಟಿ~

ರಾಧಿಕಾ ಕುಮಾರಸ್ವಾಮಿ ನಿರ್ಮಿಸುತ್ತಿರುವ `ಸ್ವೀಟಿ~ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಆದಿತ್ಯ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿಯಾಗಿ ರಾಧಿಕಾ ಅಭಿನಯಿಸುತ್ತಿದ್ದಾರೆ. ವಿಜಯಲಕ್ಷ್ಮಿ ಸಿಂಗ್ ನಿರ್ದೇಶನದ ಈ ಚಿತ್ರಕ್ಕೆ ಅರ್ಜುನ್‌ಜನ್ಯ ಸಂಗೀತ, ಅಜಯ್ ವಿನ್ಸಂಟ್ ಛಾಯಾಗ್ರಹಣ, ಕೆಂಪರಾಜ್ ಸಂಕಲನ, ಈಶ್ವರಿ ಕುಮಾರ್ ಕಲಾ ನಿರ್ದೇಶನ, ರವಿವರ್ಮ ಸಾಹಸ ನಿರ್ದೇಶನ, ಹರ್ಷ, ಇಮ್ರಾನ್ ಸರ್ದಾರಿಯಾ, ಮುರಳಿ ನೃತ್ಯ ನಿರ್ದೇಶನ, ಬಿ.ಎ.ಮಧು ಸಂಭಾಷಣೆ ಚಿತ್ರಕ್ಕೆ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.