ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಸೂದೆಯನ್ನು ಕಾಯ್ದೆ ರೂಪಕ್ಕೆ ತಂದು 2017ರ ಏಪ್ರಿಲ್ 1 ರಿಂದ ಅನುಷ್ಠಾನಗೊಳಿಸುವ ಗುರಿ ಕೇಂದ್ರ ಸರ್ಕಾರದ್ದು. ಆದರೆ ಹೊಸ ತೆರಿಗೆ ವ್ಯವಸ್ಥೆಯನ್ನು ಅಳವಡಿಸಲು ಕಂಪೆನಿಗಳು ಇನ್ನೂ ತಕ್ಕ ಸಿದ್ಧತೆ ನಡೆಸಿಲ್ಲ.
ಜಿಎಸ್ಟಿ ತಮ್ಮ ಉದ್ಯಮದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಮತ್ತು ಅದನ್ನು ಎದುರಿಸುವುದು ಹೇಗೆ ಎಂಬ ಬಗ್ಗೆ ತಜ್ಞರಿಂದ ಸಲಹೆಗಳನ್ನು ಪಡೆಯಲು ಉದ್ಯಮಿಗಳು ಮುಂದಾಗಿದ್ದಾರೆ.
₹134 ಲಕ್ಷ ಕೋಟಿ ಮೌಲ್ಯದಷ್ಟಿರುವ ಭಾರತದ ಆರ್ಥಿಕತೆಯನ್ನು ಮತ್ತು 130 ಕೋಟಿ ಗ್ರಾಹಕರನ್ನು ಜಿಎಸ್ಟಿ ಇದೇ ಮೊದಲ ಬಾರಿಗೆ ಏಕರೂಪದ ತೆರಿಗೆ ವ್ಯವಸ್ಥೆಯಡಿ ತರಲಿದೆ.
ಮಸೂದೆಗೆ ರಾಜ್ಯಸಭೆಯ ಅಂಗೀಕಾರ ದೊರೆತಿದೆಯಾರೂ ಕಾಯ್ದೆಯಾಗಿ ಬದಲಾಗಲು ಇನ್ನೂ ಕೆಲವು ಸಮಯ ಬೇಕು. 29 ರಾಜ್ಯಗಳ ವಿಧಾನಸಭೆಯಲ್ಲಿ ಈ ಮಸೂದೆ ಅಂಗೀಕಾರವಾಗಬೇಕಾಗಿದೆ. ಹೊಸ ವ್ಯವಸ್ಥೆಯಲ್ಲಿ ತೆರಿಗೆ ಸಂಗ್ರಹಕ್ಕೆ ಅಧಿಕಾರಿಗಳಿಗೆ ತರಬೇತಿ ನೀಡುವ ಮತ್ತು ಹೆಚ್ಚಿನ ಕಂಪೆನಿಗಳನ್ನು ಇದರ ವ್ಯಾಪ್ತಿಗೆ ತರುವ ಕೆಲಸಗಳೂ ನಡೆಯಬೇಕಿದೆ.
ಸಣ್ಣ ಕಂಪೆನಿಗಳಿಗೆ ಆತಂಕ: ಲುಧಿಯಾನದ ರೋಮೆರ್ ವುಲನ್ ಮಿಲ್ಸ್ ಮಾಲೀಕ ಜಿ.ಆರ್. ರಲ್ಹಾನ್ ಅವರು ಏಕರೂಪದ ತೆರಿಗೆ ವ್ಯವಸ್ಥೆಗೆ ಇನ್ನೂ ಸಿದ್ಧರಾಗಿಲ್ಲ. ‘ಸಣ್ಣ ಕಂಪೆನಿಗಳು ಈ ತೆರಿಗೆ ವ್ಯವಸ್ಥೆಯನ್ನು ಆತಂಕದಿಂದಲೇ ನೋಡುತ್ತಿವೆ’ ಎಂದು ಅವರು ಹೇಳಿದ್ದಾರೆ.
‘ಜಿಎಸ್ಟಿ ಗರಿಷ್ಠ ದರ ಹೆಚ್ಚಿದ್ದರೆ ಅದರಿಂದ ನನ್ನ ಉದ್ಯಮಕ್ಕೆ ಹೊಡೆತ ಬೀಳಬಹುದು’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ‘ಜಿಎಸ್ಟಿ’ಯನ್ನು ಈ ಹಿಂದೆ ಜಾರಿಗೆ ತಂದಿದ್ದ ದೇಶಗಳು ಈ ಏಕರೂಪದ ತೆರಿಗೆ ವ್ಯವಸ್ಥೆಯ ಲಾಭ ಪಡೆಯುವ ಮುನ್ನ ಕೆಲ ವರ್ಷ ಆರ್ಥಿಕ ಹಿಂಜರಿತದ ಸಮಸ್ಯೆ ಎದುರಿಸಿದ್ದವು.
ಭಾರತವು ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ದೇಶಗಳಲ್ಲಿ ಒಂದಾಗಿದೆ. ಮಾರ್ಚ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕ ವೃದ್ಧಿ ದರವು (ಜಿಡಿಪಿ) ಶೇ 7.9 ರಷ್ಟಿತ್ತು. ಜಿಎಸ್ಟಿ ಅನುಷ್ಠಾನಕ್ಕೆ ಬಂದರೆ ಮೂರದಿಂದ ಐದು ವರ್ಷಗಳಲ್ಲಿ ಜಿಡಿಪಿ ಶೇ 0.8 ರಷ್ಟು ವೃದ್ಧಿಯಾಗಲಿದೆ ಎಂದು ಎಚ್ಎಸ್ಬಿಸಿಯ ಆರ್ಥಿಕ ತಜ್ಞರು ಅಂದಾಜು ಮಾಡಿದ್ದಾರೆ.
ಎಲ್ಲರೂ ಸಿದ್ಧತೆ ನಡೆಸಿಲ್ಲ: ಹೊಸ ತೆರಿಗೆ ವ್ಯವಸ್ಥೆಗೆ ಹೊಂದಿಕೊಳ್ಳಲು ದೇಶದ ಶೇ 20 ರಷ್ಟು ವ್ಯಾಪಾರ ಸಂಸ್ಥೆಗಳು ಅದರಲ್ಲೂ ದೊಡ್ಡ ಕಂಪೆನಿಗಳು ಮಾತ್ರ ಸಿದ್ಧತೆ ನಡೆಸಿವೆ. ಆದರೆ, ಉಳಿದವರು ದಶಕಗಳಿಂದ ಅನುಸರಿಸಿಕೊಂಡು ಬರುತ್ತಿರುವ ತೆರಿಗೆ ಪದ್ಧತಿಯಿಂದ ಹೊರಬರಲು ತಯಾರಿಯನ್ನೇ ನಡೆಸಿಲ್ಲ.
ಎಲ್ಲ ರಾಜ್ಯಗಳ ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರವಾದ ಬಳಿಕ ‘ಜಿಎಸ್ಟಿ’ ಮಂಡಳಿಯನ್ನು ರಚಿಸಬೇಕಾಗುತ್ತದೆ. ಈ ಮಂಡಳಿಯು ತೆರಿಗೆಯ ಸ್ವರೂಪವನ್ನು ಅಂತಿಮಗೊಳಿಸುತ್ತದೆ. ಈ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ ನವೆಂಬರ್ವರೆಗೆ ಕಾಲಾವಕಾಶ ಬೇಕು.
‘ಸರ್ಕಾರ ಹೇಳಿದಂತೆ ಮುಂದಿನ ವರ್ಷ ಏಪ್ರಿಲ್ 1 ರಿಂದಲೇ ಜಿಎಸ್ಟಿ ಅನುಷ್ಠಾನಗೊಳ್ಳುವ ಸಾಧ್ಯತೆ ತೀರಾ ಕಡಿಮೆ. 2017ರ ಜುಲೈ ಅಥವಾ ಅಕ್ಟೋಬರ್ವರೆಗೆ ಕಾಲಾವಕಾಶ ಅಗತ್ಯವಿದೆ’ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಗರಿಷ್ಠ ದರ ನಿಗದಿ: ಜಿಎಸ್ಟಿ ಗರಿಷ್ಠ ದರವನ್ನು ಶೇ 18 ಕ್ಕೆ ನಿಗದಿಪಡಿಸಲು ಕೇಂದ್ರ ಸರ್ಕಾರ ಒಲವು ತೋರಿದೆ. ಆದರೆ ಇದನ್ನು ಹೆಚ್ಚಿಸಬೇಕು ಎಂದು ಕೆಲವು ರಾಜ್ಯಗಳು ಒತ್ತಾಯಿಸುತ್ತಿವೆ.
ಸರಕು ತಯಾರಕರು ಗರಿಷ್ಠ ತೆರಿಗೆ ದರಕ್ಕೆ ಹೊಂದಿಕೊಳ್ಳಬಹುದು. ಆದರೆ, ಶೇ 15 ರಷ್ಟು ತೆರಿಗೆ ಪಾವತಿಸುತ್ತಿರುವ ಸೇವಾ ವಲಯದ ಕಂಪೆನಿಗಳಿಗೆ ಇದು ಹೆಚ್ಚಿನ ಹೊರೆಯೆನಿಸಲಿದೆ. ಈ ಕಂಪೆನಿಗಳು ಹೆಚ್ಚಿನ ಹೊರೆಯನ್ನು ತಾವೇ ಭರಿಸಬೇಕು ಅಥವಾ ಇದನ್ನು ಗ್ರಾಹಕರ ಮೇಲೆ ವರ್ಗಾಯಿಸಬೇಕಾಗುತ್ತದೆ.
ಹೊಸ ತೆರಿಗೆ ವ್ಯವಸ್ಥೆ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ಟೆಲಿಕಾಂ ಕಂಪೆನಿಗಳು, ಹಣಕಾಸು ಸೇವಾ ಕಂಪೆನಿಗಳು ಮತ್ತು ಇ–ಕಾಮರ್ಸ್ ಕಂಪೆನಿಗಳು ಆತಂಕದಲ್ಲಿವೆ.
ಜನರು ಹಾವನ್ನು ಭಯದಿಂದ ನೋಡುವ ರೀತಿಯಲ್ಲಿ, ಸೇವಾ ವಲಯದ ಕಂಪೆನಿಗಳು ‘ಜಿಎಸ್ಟಿ’ಯನ್ನು ನೋಡುತ್ತಿವೆ
-ಅಮಿತ್ ಕುಮಾರ್ ಸರ್ಕಾರ್ ಗ್ರಾಂಟ್ ಥಾರ್ನ್ಟನ್ ಕಂಪೆನಿಯ ಪರೋಕ್ಷ ತೆರಿಗೆ ವಿಭಾಗದ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.