ಗುರುವಾರ , ಮೇ 13, 2021
35 °C

ಏರ್ ಇಂಡಿಯ ವರಮಾನ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾದ ಮಾರ್ಚ್ 31ಕ್ಕೆ ಕೊನೆಗೊಂಡ 2011-12ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಒಟ್ಟು ವರಮಾನದಲ್ಲಿ ಶೇ. 46ರಷ್ಟು ಏರಿಕೆ ದಾಖಲಿಸಿದೆ.ಹಿಂದಿನ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ  ದೇಶೀಯ  ವಿಮಾನ ಹಾರಾಟದ ವರಮಾನವೂ ಶೇ. 38ರಷ್ಟು ಹೆಚ್ಚಿದೆ. ಅಂತರರಾಷ್ಟ್ರೀಯ ಪ್ರಯಾಣಿಕರಿಂದ ಬರುವ ಆದಾಯವೂ ನಾಲ್ಕನೇ ತ್ರೈಮಾಸಿಕದಲ್ಲಿ ಶೇ. 36ರಷ್ಟು ಹೆಚ್ಚಿದೆ. 2010-11ಕ್ಕೆ ಹೋಲಿಸಿದರೆ 2011-12ರ ವರಮಾನದಲ್ಲಿ ಶೇ. 13ರಷ್ಟು ಹೆಚ್ಚಳವಾಗಿದೆ ಎಂದು ಏರ್ ಇಂಡಿಯದ ಹಿರಿಯ ಅಧಿಕಾರಿ ಬುಧವಾರ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.ಏರ್ ಇಂಡಿಯವನ್ನು ಆರ್ಥಿಕವಾಗಿ ಸಶಕ್ತಗೊಳಿಸಲು ಮುಂದಿನ 8 ವರ್ಷಗಳ ಅವಧಿಯಲ್ಲಿ ಷೇರು ಹೂಡಿಕೆ ಮೂಲಕ  ರೂ30 ಸಾವಿರ ಕೋಟಿ ಮತ್ತು ಹೊಸ ಸಾಲ ರೂಪದಲ್ಲಿ ರೂ 21,200 ಕೋಟಿಯಷ್ಟು ಬಂಡವಾಳ ಒದಗಿಸುವ ಹೊಸ ಯೋಜನೆಗೆ ಕೇಂದ್ರ ಸರ್ಕಾರ ಇತ್ತೀಚೆಗೆ ಒಪ್ಪಿಗೆ ನೀಡಿದೆ. ಜತೆಗೆ ಆದಾಯ ಗಳಿಕೆಯಲ್ಲಿಯೂ ಹೆಚ್ಚಳವಾಗಿರುವುದು ಏರ್ ಇಂಡಿಯದ ರೆಕ್ಕೆಗಳನ್ನು ಇನ್ನಷ್ಟು ಅಗಲವಾಗಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.