ಶುಕ್ರವಾರ, ಅಕ್ಟೋಬರ್ 2, 2020
24 °C

ಏರ್ ಪಿಸ್ತೂಲ್‌ನಲ್ಲಿ ಹೀನಾಗೆ 12ನೇ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏರ್ ಪಿಸ್ತೂಲ್‌ನಲ್ಲಿ ಹೀನಾಗೆ 12ನೇ ಸ್ಥಾನ

ಲಂಡನ್ (ಪಿಟಿಐ): ಹೀನಾ ಸಿಂಧು ಹಾಗೂ ಅನ್ನು ರಾಜ್ ಸಿಂಗ್ ಅವರು ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಶೂಟಿಂಗ್‌ನಲ್ಲಿ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು.ರಾಯಲ್ ಆರ್ಟಿಲರಿ ಬ್ಯಾರಕ್ಸ್ ಶೂಟಿಂಗ್ ರೇಂಜ್‌ನಲ್ಲಿ ಭಾನುವಾರ ನಡೆದ ಈ ಸ್ಪರ್ಧೆಯಲ್ಲಿ ಹೀನಾ ಹಾಗೂ ಅನ್ನು ಅವರು ಕ್ರಮವಾಗಿ 12 ಹಾಗೂ 23ನೇ ಸ್ಥಾನ ಪಡೆದರು.ನಿರೀಕ್ಷಿಸಿದಷ್ಟು ನಿಖರವಾದ ಗುರಿಗಾರಿಗೆ ಭಾರತ ಈ ಇಬ್ಬರೂ ಶೂಟರ್‌ಗಳಿಂದ ಸಾಧ್ಯವಾಗಲಿಲ್ಲ.  ಹತ್ತರ ಪಾಯಿಂಟುಗಳನ್ನು ಗಿಟ್ಟಿಸಿಕೊಡುವ ವೃತ್ತದಲ್ಲಿ ಶೂಟ್    ಮಾಡಿದ್ದು ಕೂಡ ಕಡಿಮೆ.ಅರ್ಹತಾ ಸುತ್ತಿನಲ್ಲಿ ಹೀನಾ ಗಳಿಸಿದ್ದು 382 ಪಾಯಿಂಟ್ಸ್. ಹನ್ನೊಂದು ಬಾರಿ ಅವರು ಹತ್ತು ಪಾಯಿಂಟು ಸಿಗುವ ವೃತ್ತಕ್ಕೆ ಗುರಿ ಇಟ್ಟರು. ಆದರೂ ಫೈನಲ್ ತಲುಪುವುದು ಸಾಧ್ಯವಾಗಲಿಲ್ಲ. ಅನ್ನು ಅವರಂತೂ ನಿರಾಸೆಯಾಗುವಂತೆ ಮಾಡಿದರು. ಅವರು ಗಳಿಸಿದ್ದು ಕೇವಲ 378 ಪಾಯಿಂಟ್ಸ್.ಈ ವಿಭಾಗದಲ್ಲಿ ಸ್ವರ್ಣ ಪದಕವನ್ನು ಚೀನಾದ ಗುವೊ ವೆಂಜುನ್ (388+100.1=488.1 ಪಾ.) ಪಾಲಾಯಿತು. ಬೆಳ್ಳಿ ಹಾಗೂ ಕಂಚನ್ನು ಕ್ರಮವಾಗಿ ಫ್ರಾನ್ಸ್‌ನ ಸೆಲಿನ್ ಗಾಬೆರ್ವಿಲ್ಲಿ (387+99.6=486.6 ಪಾ.) ಹಾಗೂ ಉಕ್ರೇನ್‌ನ ಒಲೆನಾ ಕೊಸ್ತೆವಿಚ್ (387+99.6) ಅವರು ಗೆದ್ದುಕೊಂಡರು.ಬಿಂದ್ರಾ ಮಹತ್ವಾಕಾಂಕ್ಷೆ:
ಬೀಜಿಂಗ್‌ನಲ್ಲಿ ಸ್ವರ್ಣ ಪದಕ ಗೆದ್ದಿದ್ದ ಅಭಿನವ್ ಬಿಂದ್ರಾ ಅವರು ಪುರುಷರ 10 ಮೀ. ಏರ್ ರೈಫಲ್ ಶೂಟಿಂಗ್‌ನಲ್ಲಿ ಮತ್ತೊಮ್ಮೆ ಚಾಂಪಿಯನ್ ಆಗುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ.

ವಿಜಯ ವೇದಿಕೆಯಲ್ಲಿ ಮತ್ತೆ ಎತ್ತರದಲ್ಲಿ ನಿಲ್ಲುವ ಆಶಯದೊಂದಿಗೆ ಅವರು ಸೋಮವಾರ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರೊಂದಿಗೆ ಗಗನ್ ನಾರಂಗ್ ಕೂಡ ಏರ್ ರೈಫಲ್ ವಿಭಾಗದಲ್ಲಿ ಪದಕಕ್ಕೆ ಗುರಿ ಇಡುವರು. ಮೂರನೇ ಬಾರಿಗೆ ಒಲಿಂಪಿಕ್‌ನಲ್ಲಿ ಸ್ಪರ್ಧಿಸುತ್ತಿರುವ ನಾರಂಗ್ ಮತ್ತೊಮ್ಮೆ ನಿರಾಸೆ ಕಾಡದಂತೆ ಗುರಿ ಇಡುವ ವಿಶ್ವಾಸ ಹೊಂದಿದ್ದಾರೆ.`ನಾನು ಹಿಂದಿರುಗಿ ನೋಡುವುದಿಲ್ಲ. ಬೀಜಿಂಗ್‌ನಲ್ಲಿನ ಪ್ರದರ್ಶನದ ನೆನಪನ್ನು ಕೆದಕುವ ಮೂಲಕ ಅನಗತ್ಯವಾಗಿ ಒತ್ತಡಕ್ಕೆ ಸಿಲುಕುವುದು ಇಷ್ಟವಿಲ್ಲ~ ಎಂದು ಬಿಂದ್ರಾ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.