ಬುಧವಾರ, ಜೂಲೈ 8, 2020
28 °C

ಏರ್ ಮಾರ್ಷಲ್ ಕುಕ್ರೇಜಾ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಭಾರತೀಯ ವಾಯುಪಡೆಯ ತರಬೇತಿ ವಿಭಾಗದ (ಬೆಂಗಳೂರು) ಎಒಸಿ (ಏರ್ ಆಫೀಸರ್ ಇನ್ ಕಮ್ಯಾಂಡಿಂಗ್) ಏರ್ ಮಾರ್ಷಲ್ ಧೀರಜ್ ಕುಕ್ರೇಜಾ, ಎಒಸಿ ಇನ್ ಚೀಫ್ ಅವರು ಬುಧವಾರ ಬೀದರ್ ವಾಯುನೆಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕುಕ್ರೇಜಾ ಅವರಿಗೆ ಸಾಂಪ್ರದಾಯಿಕ ಗೌರವ ವಂದನೆ ಸಲ್ಲಿಸಲಾಯಿತು. ಅದಕ್ಕೂ ಮುನ್ನ ಬೀದರ ವಾಯುಪಡೆ ಕೇಂದ್ರದ ಎಒಸಿ ಏರ್ ಕಮ್ಯಾಡೋರ್ ಎಸ್‌ಪಿ ಧರ್‌ಕರ್ ಅವರು ವಾಯುಕೇಂದ್ರದಲ್ಲಿ ಕುಕ್ರೇಜಾ ಅವರನ್ನು ಬರಮಾಡಿಕೊಂಡರು. ಧೀರಜ್ ಅವರ ಪತ್ನಿ ನೀರಜಾ ಕುಕ್ರೇಜಾ ಕೂಡ ಜೊತೆಗಿದ್ದರು.ಐದು ಸಾವಿರದ ಎಂಟು ನೂರು ಗಂಟೆಗಳ ಹಾರಾಟದ ಅನುಭವ ಇರುವ ಕುಕ್ರೇಜಾ ಅವರು ಲಡಾಕ್ ಮತ್ತು ಈಶಾನ್ಯ ರಾಜ್ಯಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಅಮೆರಿಕಾದ ರಾಷ್ಟ್ರೀಯ ಭದ್ರತಾ ವಿಶ್ವವಿದ್ಯಾಲಯದಿಂದ ಫೆಲೋಷಿಪ್ ಪಡೆದಿರುವ ಕುಕ್ರೇಜಾ ಅವರು ವಾಯುಪಡೆಯಲ್ಲಿ ಹಲವು ಮಹತ್ವದ ಸ್ಥಾನಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.ಕುಕ್ರೇಜಾ ಅವರು ಬೀದರ್  ವಾಯುಪಡೆ ತರಬೇತಿ ಕೇಂದ್ರದಲ್ಲಿ ಲಭ್ಯ ಇರುವ ಆಧುನಿಕ ತರಬೇತಿ ಸೌಲಭ್ಯಗಳು, ಅವುಗಳ  ನಿರ್ವಹಣೆ ಮತ್ತು ವಿವಿಧ ಸೌಲಭ್ಯಗಳನ್ನು  ಪರಿಶೀಲಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.