ನವದೆಹಲಿ (ಪಿಟಿಐ): ಜಾಗತಿಕ ಮಟ್ಟದಲ್ಲಿನ ಆರ್ಥಿಕ ಪರಿಸ್ಥಿತಿಯ ಅಸ್ಥಿರತೆಯಿಂದಾಗಿ ದೇಶದ ಮಾಹಿತಿ ತಂತ್ರಜ್ಞಾನ (ಐ.ಟಿ) ಕ್ಷೇತ್ರದ ಕಂಪೆನಿಗಳು ಹೊಸ ನೇಮಕಾತಿಗೆ ಹಿಂದೇಟು ಹಾಕುತ್ತಿವೆ. ಇದರಿಂದಾಗಿ ಮೇ ತಿಂಗಳಲ್ಲಿ ಐ.ಟಿ ಕ್ಷೇತ್ರದ ನೇಮಕಾತಿ ಪ್ರಮಾಣ ಶೇ 29ರಷ್ಟು ಕುಸಿದಿದೆ.`ಮೈ ಹೈರಿಂಗ್ ಕ್ಲಬ್ ಡಾಟ್ ಕಾಂ~ ನಡೆಸಿದ ಸಮೀಕ್ಷೆ ಈ ವಿಷಯ ಹೊರಹಾಕಿದೆ.

`ಆರ್ಥಿಕ ಅಸ್ಥಿರತೆ ಪರಿಣಾಮವಾಗಿ ಕಂಪೆನಿಗಳು ವೆಚ್ಚ ಕಡಿತಕ್ಕೆ ಮುಂದಾಗಿರುವುದು ಕೂಡ ಒಟ್ಟಾರೆ ನೇಮಕಾತಿ ಪ್ರಮಾಣ ಕಡಿಮೆಯಾಗಲು ಪ್ರಮುಖ ಕಾರಣ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ಕುಮಾರ್ ಹೇಳಿದ್ದಾರೆ.

ಐ.ಟಿ ಮತ್ತು ಐ.ಟಿ ಆಧಾರಿತ ಉದ್ದಿಮೆ ವಲಯದಲ್ಲಿ ಹೊಸ ನೇಮಕ ಪ್ರಕ್ರಿಯೆ ಹೆಚ್ಚಲು ಇನ್ನೂ 3-4 ತಿಂಗಳು ಬೇಕಾಗಬಹುದು. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದಿಂದ ದೇಶದ ಸಾಫ್ಟ್ವೇರ್ ಕಂಪೆನಿಗಳಿಗೆ (ಸೇವಾ ರಫ್ತು ಮೂಲಕ) ಹೆಚ್ಚಿನ ಲಾಭ ಬರುತ್ತಿದೆ. ಆದರೆ, ನೇಮಕಾತಿ ಮಂದಗತಿಯಲ್ಲಿವೆ ಎಂದು ಮಾನವ ಸಂಪನ್ಮೂಲ ಸಲಹಾ ಸಂಸ್ಥೆಯೊಂದರ ನಿರ್ದೇಶಕಿ ಪ್ರಾಚಿ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಮತ್ಸ್ಯ ಸಂಪತ್ತು ರಫ್ತು ವೃದ್ಧಿ

ನವದೆಹಲಿ (ಪಿಟಿಐ):  ಸಿಗಡಿ, ಚಿಪ್ಪು ಮೀನು ಸೇರಿದಂತೆ ಪ್ರಮುಖ ಸಾಗರ ಉತ್ಪನ್ನಗಳ ರಫ್ತು ವಹಿವಾಟು ಕಳೆದ ಹಣಕಾಸು ವರ್ಷದಲ್ಲಿ ಶೇ 20ರಷ್ಟು ಹೆಚ್ಚಿದ್ದು, ರೂ1881 ಕೋಟಿ (34.20 ಕೋಟಿ ಡಾಲರ್) ವಹಿವಾಟು ನಡೆದಿದೆ ಎಂದು ಕೃಷಿ ಇಲಾಖೆ ಹೇಳಿದೆ.

ದಕ್ಷಿಣ ಏಷ್ಯಾ, ಜಪಾನ್ ಮತ್ತು ಅಮೆರಿಕ ಮಾರುಕಟ್ಟೆಗಳಿಂದ ಈ ಸರಕುಗಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚಿದೆ ಎಂದು ಕೃಷಿ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಬುಧವಾರ ಇಲ್ಲಿ ತಿಳಿಸಿದ್ದಾರೆ.2010-11ನೇ ಸಾಲಿನಲ್ಲಿ ರೂ1567 ಕೋಟಿ (28.50 ಕೋಟಿ ಡಾಲರ್) ವಹಿವಾಟು ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.