ಭಾನುವಾರ, ಮೇ 9, 2021
33 °C

ಐಪಿಎಲ್ ಪಂದ್ಯ: ಆಸ್ಟ್ರೇಲಿಯಾದಲ್ಲಿ ಪ್ರಸಾರವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್ (ಪಿಟಿಐ): ಐಪಿಎಲ್ ಐದನೆಯ ಆವೃತ್ತಿಯ ಪಂದ್ಯಗಳನ್ನು ನೋಡುವ ಅವಕಾಶ ಆಸ್ಟ್ರೇಲಿಯಾದ ಕ್ರೀಡಾಭಿಮಾನಿಗಳಿಗೆ ಈ ಸಲ ಲಭಿಸುತ್ತಿಲ್ಲ. ಆದ್ದರಿಂದ ಎಂಟು ವಾರಗಳ ಈ ಟೂರ್ನಿಯನ್ನು ನೋಡಲು ಅಂತರ್ಜಾಲದ ಮೊರೆ ಹೋಗಬೇಕಾಗಿದೆ.`ನೆಟ್‌ವರ್ಕ್ ಟೆನ್~ ಎನ್ನುವ ಸಂಸ್ಥೆ ಐಪಿಎಲ್‌ನ ನಾಲ್ಕು ಆವೃತ್ತಿಗಳ ಪಂದ್ಯಗಳ ಪ್ರಸಾರದ ಹಕ್ಕನ್ನು ಪಡೆದುಕೊಂಡಿತ್ತು. ಹೆಚ್ಚು ಜನ ಈ ಪಂದ್ಯಗಳನ್ನು ನೋಡಲು ಆಸಕ್ತಿ ತೋರದ ಕಾರಣ `ರೇಟಿಂಗ್ ಪಾಯಿಂಟ್~ ಸಹ ಕಡಿಮೆಯಾಗಿದೆ. ಆದ್ದರಿಂದ ಪಂದ್ಯ ಪ್ರಸಾರದ ಹಕ್ಕಿನಿಂದ ನೆಟ್‌ವರ್ಕ್ ಸಂಸ್ಥೆ ಹಿಂದೆ ಸರಿದಿದೆ.`ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಸಲದ ಐಪಿಎಲ್ ಪ್ರಸಾರದ ಹಕ್ಕು ನೀಡಲು ಭಾರಿ ಮೊತ್ತದ ಹಣ ಕೇಳಿದೆ. ಆದ್ದರಿಂದ ಇಲ್ಲಿನ ನೆಟ್‌ವರ್ಕ್ ಸಂಸ್ಥೆಗಳು ಹಕ್ಕನ್ನು ಪಡೆಯಲು ಮುಂದಾಗುತ್ತಿಲ್ಲ~ ಎಂದು ಅಲ್ಲಿನ ಪತ್ರಿಕೆ ವರದಿ ಮಾಡಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.