ಐಸಿಡಿಎಸ್ ಬಲಪಡಿಸಲು ಒತ್ತಾಯ

ಗುರುವಾರ , ಮೇ 23, 2019
32 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಐಸಿಡಿಎಸ್ ಬಲಪಡಿಸಲು ಒತ್ತಾಯ

Published:
Updated:

ಚಾಮರಾಜನಗರ: `ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್)ಯನ್ನು ಬಲಗೊಳಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಿದೆ~ ಎಂದು ಅಂಗನವಾಡಿ ನೌಕರರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವಿ. ವರಲಕ್ಷ್ಮೀ ಅಭಿಪ್ರಾಯಪಟ್ಟರು.ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಭಾನುವಾರ ನಡೆದ ಅಂಗನವಾಡಿ ನೌಕರರ ಸಂಘದ ಜಿಲ್ಲಾಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.ಪ್ರಸ್ತುತ ಐಸಿಡಿಎಸ್ ಯೋಜನೆಯಡಿ ಅನುಷ್ಠಾನ ಗೊಂಡಿರುವ ಕಾರ್ಯಕ್ರಮಗಳು ಮೌಲ್ಯಯುತವಾಗಿಲ್ಲ. ಗರ್ಭಿಣಿಯರು, ಬಾಣಂತಿಯರು, ಕಿಶೋರಿಯರ ಹೆಸರಿಗೆ ನೇರವಾಗಿ ಹಣ ನೀಡಬೇಕೆಂದು ಕೇಂದ್ರ ಯೋಜನಾ ಆಯೋಗ ಪ್ರಧಾನಿಗೆ ವರದಿ ನೀಡಿದೆ. ಈ ವರದಿ ಜಾರಿಗೊಂಡರೆ ಅಂಗನವಾಡಿ ಯೋಜನೆಯೇ ರದ್ದಾಗಲಿದೆ. ಹೀಗಾಗಿ, ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸಂಘಟಿತರಾಗಿ ಹೋರಾಟ ಮಾಡಬೇಕಿದೆ ಎಂದರು.ಐಸಿಡಿಎಸ್ ಯೋಜನೆಯನ್ನು ಬಲಿಷ್ಠಗೊಳಿಸಿ ಸಾರ್ವತ್ರಿಕ ರಣಗೊಳಿಸಬೇಕು. ಈ ಬೇಡಿಕೆ ಮುಂದಿಟ್ಟುಕೊಂಡು ಹೋರಾಟ ಮಾಡಬೇಕಿದೆ. 11ನೇ ಪಂಚವಾರ್ಷಿಕ ಯೋಜ ನೆಯ ಶಿಫಾರಸು ಅನ್ವಯ ಐಸಿಡಿಎಸ್ ಯೋಜನೆಯಡಿ ಉತ್ತಮ ಫಲಿತಾಂಶ ಪಡೆಯಲು 73,100 ಕೋಟಿ ರೂ ಅನುದಾನದ ಅಗತ್ಯವಿದೆ. ಕೇಂದ್ರ ಸರ್ಕಾರ ಕೇವಲ 23,328 ಕೋಟಿ ರೂ ಮಂಜೂರು ಮಾಡಿದೆ. ಹೀಗಾಗಿ, ಉತ್ತಮ ಫಲಿತಾಂಶ ಬರಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.ಅಂಗನವಾಡಿ ಕಾರ್ಯಕರ್ತೆಯರಿಗೆ 4,500 ರೂ ಗೌರವಧನ ನೀಡಲು ಆದೇಶ ಜಾರಿಯಾಗಿದೆ. ಆದರೆ, ಗೌರವಧನ ನೀಡುತ್ತಿಲ್ಲ. ಅಂಗನವಾಡಿ ಕೇಂದ್ರಕ್ಕೆ ನೀಡುವ ಆಹಾರ, ಆಟಿಕೆ ಸಾಮಗ್ರಿಗಳು ಗುಣಮಟ್ಟದಿಂದ ಕೂಡಿರುವುದಿಲ್ಲ. ಹೀಗಾಗಿ, ಅಂಗನವಾಡಿ ಕೇಂದ್ರಗಳಿಗೆ ಬರುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರವೇ ಕಾರಣ ಎಂದು ಟೀಕಿಸಿದರು.ಕಾರ್ಯಕರ್ತೆಯರ ಹಾಜರಾತಿ ಪುಸ್ತಕ ಪರಿಶೀಲಿಸಿ ಅಂಗನವಾಡಿ ಕೇಂದ್ರದಲ್ಲಿ ಅವ್ಯವಹಾರ ನಡೆದಿದೆ ಎಂದು ಕ್ರಮಜರುಗಿಸುವುದು ಸರಿಯಲ್ಲ. ಅಂಗನವಾಡಿ ಕೇಂದ್ರ ಫಲಿತಾಂಶ ಕಾಣಬೇಕಾದರೆ ಕೇಂದ್ರಗಳು ಆಕರ್ಷಕವಾಗಿ ಇರಬೇಕು. ಗುಣಮಟ್ಟದ ಆಹಾರ, ಆಟಿಕೆ ಪೂರೈಸಬೇಕು ಎಂದರು.  ರಾಜ್ಯ ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಸುನಂದಾ, ಚಾಮರಾಜನಗರ ತಾಲ್ಲೂಕು ಘಟಕದ ಅಧ್ಯಕ್ಷೆ ಸುಜಾತಾ, ಕಾರ್ಯದರ್ಶಿ ಪಾರ್ವತಮ್ಮ, ಯಳಂದೂರು ತಾಲ್ಲೂಕು ಘಟಕದ ಅಧ್ಯಕ್ಷೆ ನಾಗವೇಣಿ, ಕಾರ್ಯದರ್ಶಿ ಪುಟ್ಟಬಸಮ್ಮ, ಗುಂಡ್ಲುಪೇಟೆ ತಾಲ್ಲೂಕು ಘಟಕದ ಅಧ್ಯಕ್ಷೆ ಸುಮಿತ್ರಾ, ಕಾರ್ಯದರ್ಶಿ ಶಕುಂತಲಾ, ನಾಗಮಣಿ, ಸೋಮೇಶ್ವರಿ, ಜಯಮಾಲಾ, ಕಾಂಚನಾ, ಶಾಮೀದಾಬಾನು, ಅನುಸೂಯ ಇತರರು ಹಾಜರಿದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry