ಬಳ್ಳಾರಿ: ಬಿರು ಬಿಸಿಲಿಗೆ ಹೆಸರಾಗಿರುವ ಬಳ್ಳಾರಿ ಜಿಲ್ಲೆಯ ಜನರ ಬಹುದಿನಗಳ ಕನಸನ್ನು ನನಸು ಮಾಡಲು ರಾಜ್ಯ ಹಾಲು ಉತ್ಪಾದಕರ ಮಹಾ ಮಂಡಳಿ (ಕೆಎಂಎಫ್) ಮುಂದಾಗಿದೆ.

ರೂ 10 ಕೋಟಿ ವೆಚ್ಚದ ಐಸ್ ಕ್ರೀಂ ಉತ್ಪಾದನಾ ಘಟಕಕ್ಕೆ ಶುಕ್ರವಾರ ಪ್ರಾಯೋಗಿಕ ಚಾಲನೆ ದೊರೆತಿದ್ದು, ಈ ಭಾಗದ ಐಸ್ ಕ್ರೀಂ ಪ್ರಿಯರ ಬಹುದಿನಗಳ ಬೇಡಿಕೆ ಈಡೇರಲಿದೆ.

ಜಿಲ್ಲೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಐಸ್ ಕ್ರೀಂ ಪ್ರಿಯರ ನೆರವಿಗಾಗಿ 20 ಸಾವಿರ ಲೀಟರ್ ಸಾಮರ್ಥ್ಯದ ಐಸ್ ಕ್ರೀಂ ಉತ್ಪಾದನಾ ಘಟಕ ಸ್ಥಾಪನೆಗೆ ಕಳೆದ ವರ್ಷವೇ ಭೂಮಿ ಪೂಜೆ ನೆರವೇರಿಸಿದ್ದ ಕೆಎಂಎಫ್ ಅಧ್ಯಕ್ಷ ಜಿ. ಸೋಮಶೇಖರ ರೆಡ್ಡಿ ಅವರ ಜನ್ಮದಿನದ ಅಂಗವಾಗಿ ಶುಕ್ರವಾರ ಘಟಕದ ಪ್ರಾಯೋಗಿಕ ಉತ್ಪಾದನೆಗೆ ಚಾಲನೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಕೆಎಂಎಫ್ ಈಗಾಗಲೇ ಐಸ್ ಕ್ರೀಂ ಉತ್ಪಾದನಾ ಘಟಕ ಹೊಂದಿದ್ದು, ಇದೀಗ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಗೆ ಸುಲಭವಾಗಿ ಸಾಗಣೆ ಮಾಡುವ ಉದ್ದೇಶದಿಂದ ಬಳ್ಳಾರಿಯಲ್ಲೇ ನೂತನ ಘಟಕ ಸ್ಥಾಪಿಸಲಾಗಿದೆ.

ಚಾಕೋಲೇಟ್, ಮ್ಯಾಂಗೋ, ಸ್ಟ್ರಾ ಬೆರಿ, ಬಟರ್ ಸ್ಕಾಚ್, ಪೈನಾಪಲ್, ಕಾಜೂ, ಪಿಸ್ತಾ, ಕೇಸರಿ ಮತ್ತಿತರ ಸ್ವಾದಭರಿತ ಕಪ್, ಸ್ಟಿಕ್, ಕೋನ್, ಸ್ಲ್ಯಾಬ್ ಮಾದರಿಯ ಕನಿಷ್ಠ 30 ಮಿಲಿ ಲೀಟರ್ನಿಂದ ಗರಿಷ್ಠ 5 ಲೀಟರ್ವರೆಗಿನ ಐಸ್ ಕ್ರೀಂ ಉತ್ಪಾದನೆ ಕೆಲವೇ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದೆ.

ರೂ 5ರಿಂದ ರೂ 500ರವರೆಗೆ ಮುಖಬೆಲೆ ಹೊಂದಿರುವ ಐಸ್ ಕ್ರೀಂ ಉತ್ಪಾದನೆ ಮಾಡಲಾಗುವುದು ಎಂದು ಕೆಎಂಎಫ್ನ ಮದರ್ ಡೈರಿಯ ವ್ಯವಸ್ಥಾಪಕಿ ವಿಜಯಲಕ್ಷ್ಮಿ `ಪ್ರಜಾವಾಣಿ'ಗೆ ತಿಳಿಸಿದರು. ಸ್ಥಳೀಯ ಮುಖಂಡರಿಗೆ ಹಾಗೂ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಮುಖಂಡರಿಗೆ ಘಟಕದ ಪ್ರಾಯೋಗಿಕ ಆರಂಭೋತ್ಸವದ ವಿಷಯ ತಿಳಿಸದೆ, ಗುಟ್ಟಾಗಿ ಪೂಜೆ ನೆರವೇರಿಸಿ ಚಾಲನೆ ನೀಡಿರುವುದು ವಿಶೇಷ.

ಘಟಕದಲ್ಲಿ ಪ್ರಾಯೋಗಿಕ ಉತ್ಪಾದನೆಗಾಗಿ ಪೂಜೆ ಮತ್ತು ಹೋಮ ನೆರವೇರಿಸಿ ಘಟಕಕ್ಕೆ ಚಾಲನೆ ನೀಡಲಾಗಿದೆ. ಇದುವರೆಗೂ ಶಾಶ್ವತ ವಿದ್ಯುತ್ ಸಂಪರ್ಕವೂ ದೊರೆತಿಲ್ಲ. ಪೂರ್ಣ ಪ್ರಮಾಣದ ಉತ್ಪಾದನೆ ಆರಂಭವಾದ ಬಳಿಕ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡು, ಅಧಿಕೃತವಾಗಿ ಘಟಕದ ಉದ್ಘಾಟನೆ ನೆರವೇರಲಿದೆ ಎಂದು ಕೆಎಂಎಫ್ನ ಸಹಾಯಕ ನಿರ್ದೇಶಕ ಶಶಿಧರ ತಿಳಿಸಿದರು. ಮುಂದಿನ ಬೇಸಿಗೆಯ ವೇಳೆಗೆ ಇಲ್ಲಿಂದಲೇ ಬಳ್ಳಾರಿ, ಕೊಪ್ಪಳ ರಾಯಚೂರು, ಗದಗ, ಧಾರವಾಡ, ಬೆಳಗಾವಿ, ದಾವಣಗೆರೆ, ಚಿತ್ರದುರ್ಗ, ಬಾಗಲಕೋಟೆ, ವಿಜಾಪುರ ಮತ್ತಿತರ ಜಿಲ್ಲೆಗಳಿಗೆ ಐಸ್ಕ್ರೀಂ ಪೂರೈಸಲಾಗುವುದು ಎಂದು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.