ಶಿಲ್ಲಾಂಗ್ (ಪಿಟಿಐ): ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ರಂಗ್ದಜೀದ್ ಕ್ಲಬ್ ಇಲ್ಲಿ ನಡೆದ ಐ–ಲೀಗ್ ಫುಟ್ಬಾಲ್ ಟೂರ್ನಿಯ ಪಂದ್ಯದಲ್ಲಿ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ಸಿ) ತಂಡವನ್ನು ಸೋಲಿಸಿತು.

ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ರಂಗ್ದಜೀದ್ 3–2 ಗೋಲುಗಳಿಂದ ಅಚ್ಚರಿಯ ಗೆಲುವು ಸಾಧಿಸಿತು. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಬಿಎಫ್ಸಿಗೆ ಆಘಾತ ನೀಡಿತು.

ನೂತನ ಕೋಚ್ ಹೆರ್ರಿಂಗ್ ಶಾಂಗ್ಪ್ಲಿಯಾಂಗ್ ಗರಡಿಯಲ್ಲಿ ಸಜ್ಜುಗೊಂಡಿರುವ ರಂಗ್ದಜೀದ್ ತಂಡ ಅಮೋಘ ಆಟ ಪ್ರದರ್ಶಿಸಿತು. ಪಂದ್ಯದ 15ನೇ ನಿಮಿಷದಲ್ಲಿ ಸ್ಟೀವನ್ ದಿಯಾಸ್ ಗೋಲು ಗಳಿಸುವ ಮೂಲಕ ಮುನ್ನಡೆ ತಂದುಕೊಟ್ಟರು. ಲಾಲ್ನುನ್ಪುಯಿಯಾ 31ನೇ ನಿಮಿಷದಲ್ಲಿ ಗೋಲು ಗಳಿಸಿ ಮುನ್ನಡೆಯನ್ನು 2–0ರಲ್ಲಿ ಹೆಚ್ಚಿಸಿದರು.

ಆದರೆ ಪಂದ್ಯದ 60ನೇ ನಿಮಿಷದಲ್ಲಿ ಚುರುಕಿನ ಆಟ ತೋರಿದ ಬಿಎಫ್ಸಿ ನಾಯಕ ಸುನಿಲ್ ಚೆಟ್ರಿ ತಂಡಕ್ಕೆ ಮೊದಲ ಗೋಲು ತಂದಿತ್ತರು. ನಂತರದ ನಿಮಿಷದಲ್ಲಿ (61) ಸೀನ್ ರೂನಿ ಗೋಲು ಬಾರಿಸಿ ಪಂದ್ಯ 2–2ರಲ್ಲಿ ಸಮಬಲವಾಗಲು ಕಾರಣರಾದರು. ಸೋಲಿನ ಭೀತಿ ಎದುರಿಸಿದ್ದ ಬಿಎಫ್ಸಿ ತಂಡಕ್ಕೆ ಇದರಿಂದ ಕೊಂಚ ಸಮಾಧಾನವಾಯಿತು.

ಆದರೆ ಈ ಸಂಭ್ರಮ ಹೆಚ್ಚು ಹೊತ್ತು ಉಳಿಯಲಿಲ್ಲ. ಏಕೆಂದರೆ 76ನೇ ನಿಮಿಷದಲ್ಲಿ ಎದುರಾಳಿ ತಂಡದ ರಾಂಟಿ ಮಾರ್ಟಿನ್ಸ್ ಗೋಲು ಗಳಿಸಿ ಬಿಎಫ್ಸಿ ತಂಡವನ್ನು ಒತ್ತಡಕ್ಕೆ ಸಿಲುಕಿಸಿದರು. ಕೊನೆಯಲ್ಲಿ ಚೆಟ್ರಿ ಬಳಗಕ್ಕೆ ಗೋಲು ಗಳಿಸಲು ಅವಕಾಶ ನೀಡದಂತೆ ಎಚ್ಚರಿಕೆ ವಹಿಸಿದ ರಂಗ್ದಜೀದ್ ಗೆಲುವಿನ ನಗೆ ಬೀರಿತು. ಸೋಲು ಕಂಡರೂ ಬಿಎಫ್ಸಿ ತಂಡದ ಅಗ್ರ ಸ್ಥಾನಕ್ಕೆ ದಕ್ಕೆಯಾಗಲಿಲ್ಲ. ಚೆಟ್ರಿ ಪಡೆ 17 ಪಂದ್ಯಗಳನ್ನು ಆಡಿದ್ದು 31 ಪಾಯಿಂಟ್ಗಳನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.