ಶುಕ್ರವಾರ, ಜನವರಿ 17, 2020
24 °C

ಒಂಚೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಂಚೂರು

ಪುಣ್ಯಸ್ನಾನದ ಸ್ಥಳ

ಹರಿಯಾಣದ ಕುರುಕ್ಷೇತ್ರದಲ್ಲಿರುವ ಬ್ರಹ್ಮ ಸರೋವರ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಸ್ನಾನ ಮಾಡುವ ಸ್ಥಳ. ಸೂರ್ಯಗ್ರಹಣದ ಸಂದರ್ಭದಲ್ಲಿ ಸುಮಾರು 5 ಲಕ್ಷ ಭಕ್ತರು ಇಲ್ಲಿಗೆ ಸ್ನಾನ ಮಾಡಲು ಬರುತ್ತಾರೆ.ಪ್ರೀತಿಯ ಚೆಂಡು

ಅಮೆರಿಕದ ಲೈನ್‌ ಬ್ರಯಾಂಟ್‌ ಎಂಬಾಕೆ ತನ್ನ ಪತಿ ಮೃತಪಟ್ಟ ಮೇಲೆ ಅವರ ದೇಹವನ್ನು ಸುಟ್ಟು, ಅದರ ಬೂದಿಯನ್ನು ಬಳಸಿ ಒಂದು ಸಣ್ಣ ಕಾಂಕ್ರೀಟ್‌ ಚೆಂಡನ್ನು ರೂಪಿಸಿದರು. 0.9 ಮೀಟರ್‌ ವ್ಯಾಸದ ಆ ಚೆಂಡನ್ನು ಫ್ಲಾರಿಡಾದ ಕರಾವಳಿಯಲ್ಲಿ ಸಮುದ್ರದೊಳಗೆ ಹಾಕಿದರು. ಪತಿಯ ಪ್ರೀತಿಯ ದ್ಯೋತಕವಾದ ಆ ಚೆಂಡನ್ನು ಹವಳ ಸುತ್ತುವರಿಯುತ್ತದೆ. ಅದರಲ್ಲಿ ಜಲಚರಗಳು ಪ್ರೀತಿಯಿಂದ ವಾಸ ಮಾಡುತ್ತವೆ ಎಂಬುದು ಅವರ ಭಾವನೆ.

ಪ್ರತಿಕ್ರಿಯಿಸಿ (+)