ಬುಧವಾರ, ಏಪ್ರಿಲ್ 21, 2021
31 °C

ಒಂದು ಸಾವಿರ ಗ್ರಾಮಗಳಲ್ಲಿ ಸುವರ್ಣ ಗ್ರಾಮೋದಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಸುವರ್ಣ ಗ್ರಾಮೋದಯ ಯೋಜನೆಯನ್ನು (5ನೇ ಹಂತ) ಈ ವರ್ಷ ಒಂದು ಸಾವಿರ ಗ್ರಾಮಗಳಲ್ಲಿ ಅನುಷ್ಠಾನಗೊಳಿಸಲು ಸರ್ಕಾರ ಆದೇಶ ಹೊರಡಿಸಿದೆ.

ಪ್ರತಿ ಗ್ರಾಮಕ್ಕೆ ಒಂದು ಕೋಟಿ ರೂಪಾಯಿ ಪ್ರಕಾರ ಒಟ್ಟು ಒಂದು ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತದೆ.ಯೋಜನೆಯಡಿ ಆಯ್ಕೆಯಾದ ಗ್ರಾಮಗಳಿಗೆ ಹಂಚಿಕೆಯಾಗುವ ಒಟ್ಟು ಅನುದಾನದಲ್ಲಿ ಶೇ 70ರಷ್ಟು ಹಣವನ್ನು ರಸ್ತೆ ಮತ್ತು ಚರಂಡಿಗೆ, ಶೇ 3ರಷ್ಟನ್ನು ತ್ಯಾಜ್ಯ  ವಿಲೇವಾರಿಗೆ, ಶೇ 2ರಷ್ಟನ್ನು ಸೌರವಿದ್ಯುತ್ ಬೀದಿ ದೀಪ ಅಳವಡಿಸಲು, ಶೇ 10ರಷ್ಟನ್ನು ಅಂಗನವಾಡಿ ಕಟ್ಟಡನಿರ್ಮಾಣಕ್ಕೆ ಹಾಗೂ ಉಳಿದ ಶೇ 15ರಷ್ಟನ್ನು ಅವಶ್ಯಕತೆಗೆ ಅನುಗುಣವಾಗಿ ಶಾಲೆ, ಗ್ರಂಥಾಲಯ, ಪಂಚಾಯಿತಿಗಳಿಗೆ ಕಟ್ಟಡ, ಬಯಲು ರಂಗಮಂದಿರ, ಸಮುದಾಯ ಭವನ ನಿರ್ಮಾಣ ಇತ್ಯಾದಿಗಳಿಗೆ ಬಳಸಬಹುದಾಗಿದೆ.2006ರಲ್ಲಿ ಜಾರಿಗೆ ಬಂದ ಸುವರ್ಣ ಗ್ರಾಮೋದಯ ಯೋಜನೆಯಡಿ ಮೊದಲ ಹಂತದಲ್ಲಿ 1204 ಗ್ರಾಮಗಳನ್ನು ಆಯ್ಕೆ ಮಾಡಲಾಗಿತ್ತು. ಇವುಗಳ ವ್ಯಾಪ್ತಿಯಲ್ಲಿ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ.ಎರಡನೇ ಹಂತದಲ್ಲಿ 222 ಗ್ರಾಮಗಳು, ಮೂರನೇ ಹಂತದಲ್ಲಿ 1,574 ಗ್ರಾಮಗಳು ಹಾಗೂ ನಾಲ್ಕನೇ ಹಂತದಲ್ಲಿ 381 ಗ್ರಾಮಗಳನ್ನು ಆಯ್ಕೆ ಮಾಡಲಾಗಿತ್ತು. ಇವುಗಳ ವ್ಯಾಪ್ತಿಯಲ್ಲಿನ ಕಾಮಗಾರಿಗಳು ಇನ್ನೂ ಪ್ರಗತಿಯಲ್ಲಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.