ಮಂಗಳವಾರ, ಏಪ್ರಿಲ್ 13, 2021
28 °C

ಒಂದೇ ಕುಟುಂಬದ ನಾಲ್ವರಿಗೆ ಡೆಂಗೆ ಜ್ವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುದ್ದೇಬಿಹಾಳ: ತಾಲ್ಲೂಕಿನ ಗೋನಾಳ ಎಸ್.ಎಚ್. ಗ್ರಾಮದ ತೋಳಲದಿನ್ನಿ   ಹಾಗೂ ಬಡಿಗೇರ ಕುಟುಂಬದ  ಸದಸ್ಯರು ಡೆಂಗೆ ಜ್ವರದಿಂದ ಬಳಲುತ್ತಿದ್ದು, ಸೂಕ್ತ ಸಮಯದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರಕದೇ ಬೆಳಗಾವಿಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಜೀವ ಉಳಿಸಿಕೊಂಡ ಘಟನೆ ನಡೆದಿದೆ.ಶಿವಪುತ್ರಪ್ಪ ತೋಳಲದಿನ್ನಿ, ಸಂತೋಷ ತೋಳಲದಿನ್ನಿ, ಪ್ರೇಮಾ ತೋಳಲದಿನ್ನಿ ಇವರು ಗರಸಂಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೇ ಅನಿವಾರ್ಯವಾಗಿ ಬೆಳಗಾವಿಯ ಕೆ.ಎಲ್.ಇ. ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಗುಣಮುಖರಾಗಿದ್ದಾರೆ. ಇದೇ ಗ್ರಾಮದ ಮಾನಮ್ಮ ರಾಮಚಂದ್ರ ಬಡಿಗೇರ, ದಾನೇಶ ಮಲ್ಲಣ್ಣ ಬಡಿಗೇರ (ಎಂಟು ತಿಂಗಳ ಮಗು) ಲಕ್ಷ್ಮಿಂಬಾಯಿ ಬಡಿಗೇರ ಮೊದಲಾದವರು ಇದೇ ಜ್ವರದಿಂದ ಬಳಲುತ್ತಿದ್ದಾರೆ.ಗ್ರಾಮದಲ್ಲಿ ಇನ್ನೂ ಕೆಲವರಿಗೆ ಡೆಂಗೆ ಜ್ವರ ಬಂದಿದ್ದು ತಾಲ್ಲೂಕು ಆಡಳಿತ ಮಾತ್ರ  ಎಚ್ಚೆತ್ತುಕೊಂಡಿಲ್ಲ. ಕವಡಿಮಟ್ಟಿ  ಪಂಚಾಯಿತಿ ಹಾಗೂ  ಗರಸಂಗಿ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮದಲ್ಲಿ ಅನಾರೋಗ್ಯಕರ ವಾತಾವರಣ ಮನೆ ಮಾಡಿದೆ ಎಂದು  ಗಾ.ಪಂ. ಸದಸ್ಯ ತಿಮ್ಮಣ್ಣ ಮಾದರ ದೂರಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.