ಬೆಂಗಳೂರು: `ಒಕ್ಕಲಿಗ ಸಮುದಾಯವನ್ನು ಅಗೌರವದಿಂದ ನಡೆಸಿಕೊಂಡು, ಸಮುದಾಯದ ಅಧಿಕಾರಿಗಳಿಗೆ ತೊಂದರೆ ಕೊಟ್ಟರೆ, ಮೌನಕ್ಕೆ ಶರಣಾಗಿ ಸುಮ್ಮನೆ ಕೂರುವುದಿಲ್ಲ' ಎಂದು ವಿರೋಧ ಪಕ್ಷದ ನಾಯಕ ಎಚ್. ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ನೀಡಿದರು.

ನಗರದಲ್ಲಿ ಭಾನುವಾರ ರಾಜ್ಯ ಒಕ್ಕಲಿಗರ ಒಕ್ಕೂಟ ಏರ್ಪಡಿಸಿದ್ದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಮುಖ್ಯಮಂತ್ರಿ ಪದವಿ ಹಾಗೂ ಅಧಿಕಾರ ಶಾಶ್ವತ ಅಲ್ಲ. ನಿಮ್ಮ ಅಧಿಕಾರಕ್ಕೆ ನಾನು ಹೆದರಿಕೊಳ್ಳುವುದಿಲ್ಲ. ಕೇವಲ ಒಕ್ಕಲಿಗ ಸಮುದಾಯದ ಅಧಿಕಾರಿಗಳು ಎಂದು ಅವರ ವರ್ಗಾವಣೆ ವಿಷಯದಲ್ಲಿ ಸೇಡಿನ ರಾಜಕಾರಣ ಮಾಡಿ, ನನ್ನ ಜೊತೆ ಆಟವಾಡಬೇಡಿ. ಇನ್ನಾದರೂ ನಿಮ್ಮ ನಡವಳಿಕೆ ತಿದ್ದಿಕೊಳ್ಳಿ' ಎಂದು ಸಲಹೆ ನೀಡಿದರು.

`ಒಕ್ಕಲಿಗ ಸಮುದಾಯದಿಂದಲೇ ನೀವು ಈ ಸ್ಥಾನಕ್ಕೇರಿರುವುದು. ಈಗ ಅದೇ ಸಮುದಾಯಕ್ಕೆ ಅಗೌರವ ತೋರುತ್ತಿದ್ದೀರಿ. ಒಕ್ಕಲಿಗರು ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ತಲೆ ತಗ್ಗಿಸಿ ನಿಂತಿಲ್ಲ. ಧೈರ್ಯವಾಗಿ ಹೋರಾಟ ನಡೆಸಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ಸಮುದಾಯಗಳಿಗೂ ಸಮಾನ ಗೌರವ ನೀಡಿದ್ದೆ. ಸಂಕುಚಿತ ಮನೋಭಾವದಿಂದ ನೀವು ನಡೆದುಕೊಂಡಂತೆ ನಾನೆಂದೂ ವರ್ತಿಸಿಲ್ಲ' ಎಂದು ಖಾರವಾಗಿ ನುಡಿದರು.

`ಜೆಡಿಎಸ್ನಲ್ಲೇ ಇದ್ದು ಪಕ್ಷವನ್ನೇ ಮುಗಿಸುವ ಪ್ರಯತ್ನಕ್ಕೆ ಕೈ ಹಾಕಿದ ಕಾರಣಕ್ಕೆ ನಿಮ್ಮನ್ನು ಪಕ್ಷದಿಂದ ಹೊರಹಾಕುವ ನಿರ್ಧಾರ ತೆಗೆದುಕೊಳ್ಳಲಾಯಿತು. ಏನೇ ಆದರೂ ನಮ್ಮ ಪಕ್ಷ ಕೊಡುಗೈ ಪಕ್ಷವೇ ಹೊರತು ಕೈ ಒಡ್ಡುವ ಪಕ್ಷವಲ್ಲ' ಎಂದರು.

`ಶಾಸಕ ಡಿ.ಕೆ. ಶಿವಕುಮಾರ್ ಅವರು ಮಂತ್ರಿ ಮಂಡಲದಲ್ಲಿ ಇದ್ದಿದ್ದರೆ ಒಕ್ಕಲಿಗ ಸಮುದಾಯವರಿಗೆ ಅನ್ಯಾಯವಾದಲ್ಲಿ ಹೋರಾಟ ನಡೆಸುತ್ತಿದ್ದರು. ಈ ಕಾರಣದಿಂದಲೇ ಅವರ ಮೇಲೆ ನಾನಾ ಆರೋಪಗಳನ್ನು ಮಾಡಿ ಮೂಲೆಗುಂಪು ಮಾಡಿದ್ದಾರೆ' ಎಂದು ಬೇಸರ ವ್ಯಕ್ತಪಡಿಸಿದರು.

`ಇದೇ ರೀತಿ ರಾಜಕಾರಣ ಮಾಡಿದ ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗಾಗಿರುವ ಗತಿಯೇ ನಿಮಗೂ ಬರುತ್ತದೆ ಮುಖ್ಯಮಂತ್ರಿಗಳೆ' ಎಂದು ಎಚ್ಚರಿಸಿದರು.

ದೇವನಹಳ್ಳಿಯ ಅಂತರ ರಾಷ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರನ್ನು ಇಡಲು ಕೇಂದ್ರದ ಮೇಲೆ ಒತ್ತಡ ಹೇರುತ್ತೇವೆ ಎಂದು ಸಂಸದ ಅನಂತ ಕುಮಾರ್ ಹೇಳಿದ ಮಾತಿಗೆ ಪ್ರತಿಕ್ರಿಯಿಸಿದ ಅವರು, ಲೋಕಸಭೆ ಚುನಾವಣೆಯಲ್ಲಿ ಒಕ್ಕಲಿಗರ ಮತಗಳನ್ನು ಪಡೆಯುವ ಉದ್ದೇಶದಿಂದಾರೂ ಕೇಂದ್ರ ಸರ್ಕಾರ ಈ ಕೆಲಸವನ್ನು ಮಾಡಲಿ ಎಂದು ವ್ಯಂಗ್ಯವಾಡಿದರು.

ಗೌಡರ ಕುಟುಂಬ ಸುಮ್ಮನಿರೊಲ್ಲ
ಸಮುದಾಯದ ಬಗ್ಗೆ ಕಾಳಜಿಯಿಂದ ದುಡಿಯುವ ಹಾಗೂ ಅನ್ಯಾಯವಾದಾಗ ಧ್ವನಿ ಎತ್ತುವವರನ್ನು ಬಗ್ಗು ಬಡಿಯುವುದು ಬಹಳ ಹಿಂದಿನಿಂದಲೂ ವ್ಯವಸ್ಥೆ ಮಾಡುತ್ತಾ ಬಂದಿದೆ. ಆದರೆ ಈಗ ಒಕ್ಕಲಿಗ ಸಮುದಾಯದವರನ್ನು ರಕ್ಷಣೆ ಮಾಡುವವರು ಯಾರೂ ಇಲ್ಲ ಎಂದು ತಿಳಿಯಬೇಡಿ. ಒಕ್ಕಲಿಗರನ್ನು ಯಾರೇ ಮುಟ್ಟಿದರೂ ದೇವೇಗೌಡರ ಕುಟುಂಬ ಸುಮ್ಮನಿರುವುದಿಲ್ಲ.
- ನಂಜಾವಧೂತ ಸ್ವಾಮೀಜಿ, ಸ್ಫಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ .

ಮಕ್ಕಳಿಗೆ ಹಾಲು ಕೊಡಿ
ಕೆಎಂಎಫ್ಗೆ ನಷ್ಟವಾಗುತ್ತದೆ ಎಂದು ಶಾಲಾ ಮಕ್ಕಳಿಗೆ ಹಾಲು ನೀಡುವ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಹಿಂಜರಿಯುತ್ತಿದೆ. ಸಂಸ್ಥೆಗೆ ನಷ್ಟವಾದರೂ ಪರವಾಗಿಲ್ಲ, ಯೋಜನೆಯನ್ನು ಶೀಘ್ರದಲ್ಲೇ ಅನುಷ್ಠಾನಕ್ಕೆ ತರಬೇಕು ಎಂದು ವಿರೋಧ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದರು.

ಹಾಲಿನ ಯೋಜನೆಗೆ ರೂ 300 ರಿಂದ ರೂ 400 ಕೋಟಿ ಖರ್ಚಾಗುತ್ತದೆ. ಒಂದು ಲಕ್ಷ ಕೋಟಿಗೂ ಹೆಚ್ಚಿನ ಬಜೆಟ್ ಮಂಡಿಸುವ ರಾಜ್ಯ ಸರ್ಕಾರಕ್ಕೆ ಈ ವೆಚ್ಚ ಹೊರೆಯಾಗುತ್ತದೆಯೇ ಎಂದು ಪ್ರಶ್ನಿಸಿದರು.

`ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಎಚ್.ಡಿ. ರೇವಣ್ಣ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ವಿಧಾನ ಸಭಾಧ್ಯಕ್ಷರಿಗೆ ಪತ್ರ ಬರೆದಿದ್ದೇನೆ. ಸಂಪ್ರದಾಯದಂತೆ ಅಧ್ಯಕ್ಷ ಸ್ಥಾನಕ್ಕೆ ವಿರೋಧ ಪಕ್ಷದ ಉಪ ನಾಯಕರನ್ನು ನೇಮಕ ಮಾಡಬೇಕು. ಆದರೆ, ಇನ್ನು ಉಪ ನಾಯಕರ ನೇಮಕವಾಗಿಲ್ಲ. ಈ ಕಾರಣದಿಂದಾಗಿ ಅನುಭವ ಇರುವ ರೇವಣ್ಣ ಅವರನ್ನು ನೇಮಕ ಮಾಡಬೇಕು' ಎಂದು ಸ್ಪಷ್ಟಪಡಿಸಿದರು.

`ಮುಂದಿನ ದಿನಗಳಲ್ಲಿ ಕೆಜೆಪಿ ಹಾಗೂ ಬಿಜೆಪಿ ಒಂದಾಗುವ ಸೂಚನೆ ಕಾಣುತ್ತಿದೆ. ಹಾಗಾದಲ್ಲಿ ಜೆಡಿಎಸ್ ವಿರೋಧ ಪಕ್ಷದ ಸ್ಥಾನದಲ್ಲೇ ಇರುವುದಿಲ್ಲ. ಇದರಿಂದಾಗಿ ಈಗ ತೆಗೆದುಕೊಳ್ಳುವ ನಿರ್ಧಾರಗಳು ಕೇವಲ ತಾತ್ಕಾಲಿಕ' ಎಂದರು.

ಸಮಯ ಸಾಧಕ...
`ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು ಒಳ್ಳೆಯ ಸ್ಥಾನಮಾನ ಬೇಕಾದಾಗ ತಾನು ಒಕ್ಕಲಿಗ ಎಂದು ಹೇಳಿಕೊಂಡು, ಬೇರೆ ವಿಚಾರಗಳಲ್ಲಿ ಮಾತ್ರ ತಾನು ಕುಂಚಿಟಿಗ ಎಂದು ಹೇಳಿಕೊಳ್ಳುತ್ತಾರೆ. ಇಂತಹವರಿಂದಲೇ ಒಕ್ಕಲಿಗ ಸಮುದಾಯಕ್ಕೆ ನಿಜವಾಗಲೂ ತೊಂದರೆಯಾಗುತ್ತಿದೆ'.
-ಎಚ್.ಡಿ. ಕುಮಾರಸ್ವಾಮಿ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.