ಗುರುವಾರ , ಏಪ್ರಿಲ್ 22, 2021
28 °C

ಒಡ್ಡಿನ ಅಸಮರ್ಪಕ ನಿರ್ವಹಣೆ: ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ತಾಲ್ಲೂಕಿನ ಇಟಗುಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲಗಾರಿನಲ್ಲಿ ಚಿಕ್ಕ ನೀರಾವರಿ ಇಲಾಖೆ ಅಧೀನ ದಲ್ಲಿರುವ ಒಡ್ಡಿನ ಅಸಮರ್ಪಕ ನಿರ್ವಹಣೆ ಯಿಂದ ಸ್ಥಳೀಯ ರೈತರಿಗೆ ತೊಂದರೆಯಾಗುತ್ತಿದ್ದು, ತಕ್ಷಣ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ಕೃಷಿಕರು ಸಣ್ಣ ನೀರಾವರಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೋಮವಾರ ಬೇಡಿಕೆ ಪತ್ರ ಸಲ್ಲಿಸಿದರು.ಕಲಗಾರದಲ್ಲಿ ಚಿಕ್ಕ ನೀರಾವರಿ ಇಲಾಖೆ ಎರಡು ದಶಕಗಳ ಹಿಂದೆ ನಿರ್ಮಿಸಿದ ಒಡ್ಡಿನ ಬಾಗಿಲನ್ನು ಮಳೆ ಗಾಲದಲ್ಲಿಯೂ ತೆಗೆದಿಲ್ಲ. ಇದರಿಂದ ಈ ಭಾಗದ 25ಕ್ಕೂ ಹೆಚ್ಚು ರೈತ ಕುಟುಂಬ ಗಳಿಗೆ ಸಮಸ್ಯೆ ಉಂಟಾಗುತ್ತಿದೆ.ಕಲಗಾರ ಒಡ್ಡಿನ ನೀರು ಹರಿಯುವ ಕಾಲುವೆಯ ಸ್ಥಿತಿ ಗಂಭೀರವಾಗಿದ್ದು, ನಿರ್ವಹಣೆ ಇಲ್ಲದೆ ಹೂಳು ತುಂಬಿದೆ. ಒಡ್ಡಿನ ಕೆಳಭಾಗದ ಜಮೀನುಗಳಿಗೆ ಸರಾಗವಾಗಿ ನೀರು ಹರಿಯದೆ ಒಡ್ಡಿನ ಮೇಲ್ಭಾಗದ ರೈತರ ಹೊಲ, ತೋಟಗಳಿಗೆ ಹಿನ್ನೀರು ನುಗ್ಗುತ್ತಿದೆ. ಇದರ ಪರಿಣಾಮ ನೂರಾರು ಎಕರೆ ಪ್ರದೇಶದಲ್ಲಿ ಬೆಳೆಯುವ ತೆಂಗು, ಅಡಿಕೆ, ಬತ್ತ, ಬಾಳೆ, ಕಬ್ಬು ಸೇರಿದಂತೆ ಇತರ ಬೆಳೆಗಳಿಗೆ ಹಾನಿಯಾಗುತ್ತಿದೆ.ಸುಮಾರು ಅರ್ಧ ಕಿಮೀ ದೂರದವರೆಗೆ ಹಿನ್ನೀರು ನಿಂತು ಮಣ್ಣಿನ ಸವಕಳಿ, ಜವಳು ಭೂಮಿಯ ಸಮಸ್ಯೆ ಉಂಟಾಗಿದೆ. ಭೂಮಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ನಿಂತ ಪರಿಣಾಮ ಕ್ಷಾರಗುಣ ಹೆಚ್ಚಾಗುತ್ತಿದ್ದು, ರೈತರ ನೆರವಿಗೆಂದು ಅನುಷ್ಠಾನಗೊಂಡ ಯೋಜನೆ ಇಲಾಖೆಗಳ ನಿರ್ಲಕ್ಷ್ಯದಿಂದ ರೈತರ ಬದುಕಿಗೇ ಮುಳುವಾಗುತ್ತಿದೆ.

ಒಂದು ದಶಕದಿಂದ ಸಮಸ್ಯೆ ಕುರಿತು ಅಧಿಕಾರಿಗಳಿಗೆ ರೈತರ ಸಮಸ್ಯೆ ಗಮನಕ್ಕೆ ತಂದರೂ ಇಲಾಖೆಯಿಂದ ಒಡ್ಡಿನ ಕನಿಷ್ಠ ನಿರ್ವಹಣೆ ಸಾಧ್ಯವಾಗಿಲ್ಲ. ಸಮಸ್ಯೆ ಶೀಘ್ರ ಪರಿಹಾರವಾಗದಿದ್ದಲ್ಲಿ ಇದೇ 15ರಂದು ಕಪ್ಪು ಪಟ್ಟಿ ಧರಿಸಿ ಧರಣಿ ಮಾಡಲಾಗುವುದು ಎಂದು ಮನವಿ ಯಲ್ಲಿ ರೈತರು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯರಾದ ಕೃಷ್ಣ ಹೆಗಡೆ, ಲೋಕೇಶ ಹೆಗಡೆ, ರಾಮಾ ಗೌಡ, ನಾಗರತ್ನಾ ಗೌಡ ಮತ್ತಿತರರು ಇದ್ದರು.`ಆಶು ಕಲೆಗಳಲ್ಲಿ ಯಕ್ಷಗಾನ ಶ್ರೇಷ್ಠ~

ಸಿದ್ದಾಪುರ
:  ಜಗತ್ತಿನ ಆಶುಕಲೆ ಗಳಲ್ಲಿ ಯಕ್ಷಗಾನ ತಾಳಮದ್ದಳೆ ಶ್ರೇಷ್ಠವಾ ದುದು ಎಂದು ಯಕ್ಷಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ ಅಭಿಪ್ರಾಯಪಟ್ಟರು.ತಾಲ್ಲೂಕಿನ  ಮುತ್ತಿಗೆಯಲ್ಲಿ ಈಚೆಗೆ ಏರ್ಪಡಿಸಿದ್ದ ಭುವನೇಶ್ವರಿ ತಾಳಮದ್ದಳೆ ಕೂಟದ ರಜತ ಸಂಭ್ರಮದ ಐದನೇ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಭುವನೇಶ್ವರಿ ತಾಳಮದ್ದಳೆ ಕೂಟದವರು ತಮಗೆ ಮಾಡಿರುವ ಈ ಸನ್ಮಾನವನ್ನು ಕೆರೆಮನೆ ಪರಂಪರೆಗೆ ನೀಡಿದ ಗೌರವ ಎಂದು ಭಾವಿಸುವು ದಾಗಿ ಅವರು ನುಡಿದರು. ಅತಿಥಿಗಳಾಗಿ ವಕೀಲ ಜಿ.ಎಸ್. ಹೆಗಡೆ ಬೆಳ್ಳೆಮಡಿಕೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು   ಹಿರಿಯ ವಕೀಲ ಎ.ಪಿ.ಭಟ್ಟ ಮುತ್ತಿಗೆ ವಹಿಸಿದ್ದರು. ಶ್ರೀಕಾಂತ ಭಟ್ಟ ಸ್ವಾಗತಿಸಿದರು. ಗಣಪತಿ ಹೆಗಡೆ ನಿರೂಪಿಸಿ, ವಂದಿಸಿದರು.ರಾವಣ ವಧೆ : ಸಭಾ ಕಾರ್ಯಕ್ರಮ ದ ನಂತರ ನಡೆದ `ರಾವಣ ವಧೆ~ ತಾಳಮದ್ದಳೆಯ ಹಿಮ್ಮೇಳದಲ್ಲಿ ಗಿರಗಡ್ಡೆ ಶಂಕರ ಭಾಗವತ( ಭಾಗವತರು), ಹನುಮಂತ ಗೌಡ ಕಶಿಗೆ(ಮದ್ದಳೆ) ಮತ್ತು ಮುಮ್ಮೇಳ ದಲ್ಲಿ  ಅರ್ಥದಾರಿಗಳಾಗಿ ಕೆರೆಮನೆ ಶಿವಾನಂದ ಹೆಗಡೆ ಮತ್ತು ಜಿ.ಕೆ.ಭಟ್ಟ ಕಶಿಗೆ( ರಾವಣ), ಜಯರಾಮ ಭಟ್ಟ (ಮಂಡೋದರಿ), ಶೇಷಗಿರಿ ಭಟ್ಟ (ರಾಮ). ಎಂ.ಕೆ.ಹೆಗಡೆ (ಮಾತಲಿ) ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.