ಶನಿವಾರ, ಜುಲೈ 24, 2021
27 °C

ಒಬಾಮ ಘೋಷಣೆಗೆ ಮುನ್ನವೇ ಬಹಿರಂಗವಾದ ಹತ್ಯೆಯ ಸುದ್ದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಐಎಎನ್‌ಎಸ್): ಶ್ವೇತಭವನದಲ್ಲಿ ರಾತ್ರಿ 10.30ಕ್ಕೆ ಅಧ್ಯಕ್ಷ ಒಬಾಮ ರಾಷ್ಟ್ರವನ್ನುದ್ದೇಶಿಸಿ ಮಾತನಾಡುವರು ಎಂದು ಪ್ರಕಟಣೆ ಹೊರಬೀಳುವ ಮೊದಲೇ ಟ್ವಿಟರ್ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಲಾಡೆನ್ ಹತ್ಯೆಯಾದ ಬಗ್ಗೆ ಊಹಾಪೋಹಗಳು ಬರಲಾರಂಭಿಸಿದವು. ‘ಎನ್‌ಬಿಸಿ ನೈಟ್ಲಿ ನ್ಯೂಸ್’ ನಿರೂಪಕ ಸೇರಿದಂತೆ ಕೆಲವು ಪತ್ರಕರ್ತರಿಗೆ ಮೂರು ಪದಗಳ ಇ-ಮೇಲ್ ಲಭ್ಯವಾಯಿತು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.ರಾಷ್ಟ್ರೀಯ ಟಿವಿ ವಾಹಿನಿ ನಿರೂಪಕರು ಮತ್ತು ವೃತ್ತಪತ್ರಿಕೆಗಳ ಸಂಪಾದಕರಿಗೆ, ಲಾಡೆನ್ ಸಾವಿನ ಸುದ್ದಿಯನ್ನು ಒಬಾಮ ಪ್ರಕಟಿಸುವರು ಎನ್ನುವ ವಿಷಯ ತಿಳಿದಿರಲಿಲ್ಲ. ಆದರೆ ವಾಷಿಂಗ್ಟನ್‌ನಲ್ಲಿನ ವರದಿಗಾರರು ಮಾತ್ರ ಈ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಕೆಲವು ಟ್ವಿಟರ್‌ನಲ್ಲಿ ರಾತ್ರಿ 10.25ರ ವೇಳೆಗೆ ಲಾಡೆನ್ ಸತ್ತಿರುವ ಬಗ್ಗೆ ಮಾಹಿತಿ ಲಭ್ಯವಾಯಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.