ಭಾನುವಾರ, ಮೇ 16, 2021
27 °C

ಒಬ್ಬ ವಿರಳ ಸಚಿವ !

- ಸಿ. ಪಿ. ಕೆ.,ಮೈಸೂರು Updated:

ಅಕ್ಷರ ಗಾತ್ರ : | |

ಈಗ ಬಹುಮಂದಿ ಶಾಸಕರು, ಸಂಸದರು ಸಚಿವರಾಗಲು (ಮಾಡಬಾರದ) ಶತಪ್ರಯತ್ನ ಮಾಡುತ್ತಾರೆ; ಮಂತ್ರಿಗಳಾದ ಕೂಡಲೆ ಪ್ರಮಾಣ ವಚನ ಸ್ವೀಕರಿಸಲು ತುದಿಗಾಲಿನಲ್ಲಿ ನಿಂತು ಕಾಯುತ್ತಾರೆ!ತದ್ವಿರುದ್ಧ ವಿದ್ಯಮಾನವೊಂದು ನೆನಪಾಗುತ್ತದೆ. ಬಹಳ ಹಿಂದೇನೂ ಅಲ್ಲ. ಕರ್ನಾಟಕದ ಸಿದ್ದು ನ್ಯಾಮಗೌಡ ಎಂಬವರು ಕೇಂದ್ರ ಸಚಿವರಾಗಿದ್ದರು. ಅವರು ಚುನಾವಣೆಯಲ್ಲಿ ಗೆದ್ದ ಮೇಲೆ ಮನೆಯಲ್ಲಿ ಕುಳಿತು ದೂರದರ್ಶನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ವೀಕ್ಷಿಸುತ್ತಿದ್ದಾಗ, ಅವರ ಹೆಸರನ್ನು ಕರೆಯಲಾಯಿತಂತೆ! ಅವರಿಗೆ ಪರಮಾಶ್ಚರ್ಯ: ತಾವು ಸಚಿವರಾಗಿರುವುದು ಪಾಪ ಅವರಿಗೆ ಗೊತ್ತೇ ಇರಲಿಲ್ಲ!ಅಂಥವರೂ ಇರಬಹುದು, ವಿರಳಾತಿ ವಿರಳವಾಗಿ!

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.