ಒಬ್ಬ ಶಿಕ್ಷಕ ಅಮಾನತು, 6 ಜನರಿಗೆ ನೋಟಿಸ್
ರಾಯಚೂರು: ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ತಪ್ಪು ಮಾಹಿತಿ ನೀಡಿದ ಗಂಭೀರ ಆರೋಪದ ಮೇಲೆ ಒಬ್ಬ ಶಿಕ್ಷಕನನ್ನು ಅಮಾನತು ಮಾಡಲಾಗಿದ್ದು, ಇದೇ ಕಾರಣದಡಿ ಇನ್ನೂ 6 ಶಿಕ್ಷಕರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಮೃತ ಬೆಟ್ಟದ್ ತಿಳಿಸಿದ್ದಾರೆ.
ಅಮಾನತುಗೊಂಡ ಶಿಕ್ಷಕ ಮಾನ್ವಿ ತಾಲ್ಲೂಕಿನ ಉಟಕನೂರು ಗ್ರಾಮದ ಪ್ರಾಥಮಿಕ ಶಾಲೆಯ ಶಿಕ್ಷಕ ರವಿಚಂದ್ರ ಎಂಬುವವರಾಗಿದ್ದಾರೆ.
ಸಿಂಧನೂರಿನ ತಾಲ್ಲೂಕು ಗುಂಜಳ್ಳಿ ಗ್ರಾಮದ ಪ್ರಾಥಮಿಕ ಶಾಲೆಯ ಶಿಕ್ಷಕಿ ದೊಡ್ಡವ್ವ ರುದ್ರಪ್ಪ, ಲಿಂಗಸುಗೂರು ತಾಲ್ಲೂಕಿನ ಗೋನವಾಟ್ಲ ಗ್ರಾಮದ ಪ್ರಾಥಮಿಕ ಶಾಲೆ ಶಿಕ್ಷಕ ಸನಾವುಲ್ಲಾ, ಲಿಂಗಸುಗೂರು ತಾಲ್ಲೂಕಿನ ಮುದಗಲ್ ಪಟ್ಟಣದ ಪ್ರಾಥಮಿಕ ಶಾಲೆಯ ದಾನಮ್ಮ ಮಲ್ಲಪ್ಪ, ಇದೇ ತಾಲ್ಲೂಕಿನ ಚಕ್ಕಿಹಾಳ ಗ್ರಾಮದ ರಾಧಾ ಎಸ್, ಸಿಂಧನೂರು ತಾಲ್ಲೂಕಿನ ಅಲಬನೂರು ಗ್ರಾಮದ ಪ್ರಾಥಮಿಕ ಶಾಲೆ ಶಿಕ್ಷಕಿ ಜ್ಯೋತಿ ಎಂ.ಆರ್, ಮಾನ್ವಿ ತಾಲ್ಲೂಕಿನ ಗೋವಿನದೊಡ್ಡಿ ಚಿಮ್ಮಾಪುರ ಪ್ರಾಥಮಿಕ ಶಾಲೆಯ ಶಿಕ್ಷಕಿ ಸುಗುಣಾ ಎಂ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.