ಕಂದಕಕ್ಕೆ ಬಸ್: 6 ಸಾವು

7

ಕಂದಕಕ್ಕೆ ಬಸ್: 6 ಸಾವು

Published:
Updated:

ಕಾರವಾರ: ಕುಮಟಾ ತಾಲ್ಲೂಕಿನ ದಿವಗಿ ಸಮೀಪದ ಹರ್ಕಡೆ ಕ್ರಾಸ್ ಹತ್ತಿರ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸೊಂದು ಸೋಮವಾರ ರಾತ್ರಿ ಕಂದಕಕ್ಕೆ ಉರುಳಿಬಿದ್ದು 6 ಜನರು ಮೃತಪಟ್ಟು 15 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.ಧರ್ಮಸ್ಥಳದಿಂದ ಬಾಗಲಕೋಟೆಗೆ ಹೊರಟಿದ್ದ ಈ ಬಸ್ಸಿನಲ್ಲಿ ಒಟ್ಟು 55 ಜನರಿದ್ದರು. ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಬಸ್ ಹೆದ್ದಾರಿ ನಂ.17ರ ಪಕ್ಕದಲ್ಲಿನ ಸುಮಾರು 40 ಅಡಿ ಆಳದ ಕಂದಕಕ್ಕೆ ಉರುಳಿಬಿದ್ದಿದೆ. ಮೃತರು, ಗಾಯಾಳುಗಳ ವಿವರ ಲಭ್ಯವಾಗಬೇಕಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry