ಕಂಪ್ಯೂಟರ್ ಎಂದಾಕ್ಷಣ, ಮಾನಿಟರ್, ಕೀ ಬೋರ್ಡ್, ಮೌಸ್, ಸಿಪಿಯು ನೆನಪಾಗುತ್ತದೆ ಅಲ್ಲವೇ? ಆದರೆ ಇನ್ನು ಮುಂದೆ ಕಂಪ್ಯೂಟರ್ ಎಂದರೆ ‘ಇಯರ್ ರಿಂಗ್’ ನೆನಪಾಗಲಿದೆ! ಹೌದು, ಸದ್ಯ ಇರುವ ಕಂಪ್ಯೂಟರ್ ಪರಿಕಲ್ಪನೆಗೆ ಹೊಸ ರೂಪ ನೀಡುವತ್ತ ಜಪಾನ್ ತಂತ್ರಜ್ಞರು ಹೆಜ್ಜೆ ಇಟ್ಟಿದ್ದಾರೆ.

‘ಇಯರ್ ರಿಂಗ್’ನಂತೆ ಕಿವಿಯಲ್ಲಿ ಇಟ್ಟುಕೊಳ್ಳಬಲ್ಲ ಅತ್ಯಂತ ಪುಟ್ಟ ಗಾತ್ರದ ಕಂಪ್ಯೂಟರ್ ತಯಾರಿಕೆಯಲ್ಲಿ ಜಪಾನಿನ ‘ಹಿರೋಶಿಮಾ ಸಿಟಿ’ ವಿಶ್ವವಿದ್ಯಾಲಯದ ತಂಡ ಕಾರ್ಯನಿರತವಾಗಿದೆ. 2016ರಲ್ಲಿ ಕ್ರಿಸ್ಮಸ್ ವೇಳೆಗೆ ಇದನ್ನು ಮಾರುಕಟ್ಟೆಗೆ ಪರಿಚಯಿಸುವ ನಿಟ್ಟಿನಲ್ಲಿ ನಿರಂತರ ಶ್ರಮಿಸುತ್ತಿದೆ. ಕಂಪ್ಯೂಟರ್ ಕ್ಷೇತ್ರದಲ್ಲಿ ಇದು ಹೊಸ ಯುಗಾರಂಭಕ್ಕೆ ನಾಂದಿ ಹಾಡಲಿದೆ ಎನ್ನುವುದು ಈ ತಜ್ಞರ ತಂಡದ ಅಭಿಮತ.

ಇದು ಇಯರ್ ಕ್ಲಿಪ್ ಮಾದರಿಯ ಪರ್ಸನಲ್ ಕಂಪ್ಯೂಟರ್ (ಪಿಸಿ). ವಿನ್ಯಾಸದಲ್ಲಿ ಬ್ಲೂಟೂತ್ ಹೆಡ್ ಫೋನ್ ರೀತಿ ಕಾಣಿಸುತ್ತದೆ.
17 ಗ್ರಾಂ ತೂಕದ ಈ ವೈರ್ಲೆಸ್ ಕಂಪ್ಯೂಟರ್ನಲ್ಲಿ ಬ್ಲೂಟೂತ್, ಜಿಪಿಎಸ್, ಕಾಂಪಾಸ್(ದಿಕ್ಸೂಚಿ), ಬ್ಯಾಟರಿ, ಬಾರೋಮೀಟರ್, ಸ್ಪೀಕರ್ ಮತ್ತು ಮೈಕ್ರೋಫೋನ್ ಸೌಲಭ್ಯಗಳಿವೆ. ಮೈಕ್ರೋಚಿಪ್ನಲ್ಲಿ ಮಾಹಿತಿ ಸಂಗ್ರಹ ಮಾಡಿಕೊಳ್ಳಬಹುದು ಮತ್ತು ಅಗತ್ಯ ತಂತ್ರಾಂಶಗಳನ್ನೂ ಅಳವಡಿಸಿಕೊಳ್ಳಬಹುದು.

‘ikebana’ ಜಪಾನಿನ ಜನಪ್ರಿಯ ಪುಷ್ಪ ಜೋಡಣೆ ಕಲೆ. ಈ ಕಲಾಕೃತಿಯ ಶೈಲಿಯಲ್ಲಿಯೇ ಕಿವಿಯಲ್ಲಿ ಅಲಂಕಾರಿಕವಾಗಿ ಧರಿಸಬಹುದಾದ ಈ ಸಣ್ಣ ಕಂಪ್ಯೂಟರ್ ವಿನ್ಯಾಸಗೊಳಿಸಲಾಗಿದೆ ಎನ್ನುತ್ತಾರೆ ತಜ್ಞರು. ಇದರಿಂದ ಐಪ್ಯಾಡ್ ಮತ್ತು ಇತರ ಗ್ಯಾಜೆಟ್ಗಳಿಗೆ ಸಂಪರ್ಕ ಕಲ್ಪಿಸಿ ಸಾಫ್ಟ್ವೇರ್ ಪ್ರೋಗ್ರಾಂಗಳನ್ನು ನಿಯಂತ್ರಿಸಬಹುದಾಗಿದೆ.

ಪ್ರೋಗ್ರಾಮಿಂಗ್
ಈ ಸೂಕ್ಷ್ಮ ಸ್ವರೂಪದ ಗಣಕಕ್ಕೆ ಇನ್ಫ್ರಾರೆಡ್ (ಅತಿನೇರಳೆ) ಸೆನ್ಸಾರ್ ಅಳವಡಿಸಲಾಗಿದೆ. ಹಾಗಾಗಿ ಈ ಗಣಕವನ್ನು ಕಣ್ಣು ಮತ್ತು ಕಣ್ರೆಪ್ಪೆಯ ಚಲನೆ, ನಾಲಿಗೆಯನ್ನು ಅತ್ತಿತ್ತ ಸರಿದಾಡಿಸುವ ಮೂಲಕ ಮತ್ತು ತುಟಿ ಚಲನೆಯಿಂದ ನಿಯಂತ್ರಿಸಬಹುದಾಗಿದೆ ಎನ್ನುತ್ತದೆ ಇದರ ಸೃಷ್ಟಿಕರ್ತರ ತಂಡ.

ಯಾರಿಗೆ ಉಪಯೋಗ?
ವಾಹನ ಸವಾರರು, ಅದರಲ್ಲೂ ಬೈಕ್ ಸವಾರರಿಗೆ, ಚಾರಣ ಪ್ರಿಯರಿಗೆ, ಗಗನಯಾತ್ರಿಗಳಿಗೆ ಮತ್ತು ಅಂಗವಿಕಲರಿಗೆ ಮೂರನೇ ಕೈ ರೀತಿಯಲ್ಲಿ ಈ ಪುಟಾಣಿ ಕಂಪ್ಯೂಟರ್ ಪ್ರಯೋಜನಕ್ಕೆ ಬರಲಿದೆ ಎನ್ನುತ್ತಾರೆ ತಂತ್ರಜ್ಞರು.

ನಾನು ಶಿಖರ ಏರುತ್ತಿರುವಾಗ, ಆಕಾಶದಲ್ಲಿ ಪ್ರಜ್ವಲಿಸುತ್ತಿರುವ ಒಂದು ನಕ್ಷತ್ರ ಕಂಡರೆ, ನಾನು ನೋಡುತ್ತಿರುವ ದಿಕ್ಕು ಮತ್ತು ಕೋನದ ಆಧಾರದ ಮೇಲೆ ನಾನು ನೋಡುತ್ತಿರುವ ನಕ್ಷತ್ರ ಯಾವುದು ಎಂದು ಇದು ತಿಳಿಸುತ್ತದೆ. ಎನ್ನುತ್ತಾರೆ ಜಪಾನ್ ತಜ್ಞ.

ವೃದ್ಧರ ಆರೈಕೆಗೆ
ಮನೆಯಲ್ಲಿರುವ ವೃದ್ಧರಿಗೆ ಈ ಕಂಪ್ಯೂಟರ್ ಅಳವಡಿಸಿದರೆ ಅವರ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ನೀಡುತ್ತದೆ. ಮಾತ್ರವಲ್ಲ ತೀವ್ರ ಅನಾರೋಗ್ಯ ಉಂಟಾದರೆ ಅಥವಾ ಅಪಘಾತ ಸಂಭವಿಸಿದರೆ ‘ಜಿಪಿಎಸ್’ ನೆರವಿನಿಂದ ಆಂಬುಲೆನ್ಸ್ಗೆ ಮಾಹಿತಿಯನ್ನೂ ರವಾನಿಸಿ ಆಪತ್ಕಾಲದ ಸಹಾಯಕನಂತೆ ನೆರವಾಗುತ್ತದೆ. l

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.