ರಾಜ್ಯದಲ್ಲಿ ಖಾಲಿಯಿರುವ ಪಿ.ಡಿ.ಒ. ಹುದ್ದೆಗಳಿಗಾಗಿ ಕೆಪಿಎಸ್ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ `ಕಂಪ್ಯೂಟರ್ ಜ್ಞಾನ~ ಕಡ್ಡಾಯ ಮಾಡಿದ್ದು ಅದರಲ್ಲಿ ಹನ್ನೊಂದು ಅಂಕಗಳನ್ನು ಪಡೆಯಬೇಕೆಂಬ ನಿಯಮ ರೂಪಿಸಿದೆ.

ದುರದೃಷ್ಟದ ಸಂಗತಿ ಎಂದರೆ ಗ್ರಾಮೀಣ ಪ್ರದೇಶದ ಅಂಗವಿಕಲ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಕಲಿಯುವ ಅವಕಾಶಗಳಿಲ್ಲ. ಸಮೀಪದ ಪಟ್ಟಣ ಪ್ರದೇಶಗಳಿಗೆ ಹೋಗಿ ಕಂಪ್ಯೂಟರ್ ಕಲಿಯುವುದು ಕಷ್ಟವಾಗುತ್ತದೆ.

`ಕಂಪ್ಯೂಟರ್ ವಿಷಯವನ್ನು ಆಯ್ಕೆಗೆ ಮಾನದಂಡವಾಗಿ ಪರಿಗಣಿಸುವ ಬದಲು ಆಯ್ಕೆಯಾದ ಅಂಗವಿಕಲ ಅಭ್ಯರ್ಥಿಗಳಿಗೆ ನೇಮಕಾತಿ ನಂತರ ತರಬೇತಿ ನೀಡಬಹುದು.

ಅಂಗವಿಕಲರ ಹಿತದೃಷ್ಟಿಯಿಂದ ಕಂಪ್ಯೂಟರ್ ಕಲಿಕೆ ಅಗತ್ಯ ಎಂಬ ನಿಯಮಗಳನ್ನು ಸಡಿಲಗೊಳಿಸಿ ಉಳಿದ ನಾಲ್ಕು ವಿಷಯಗಳ ಅಂಕಗಳನ್ನು ಪರಿಗಣಿಸಿ ಆಯ್ಕೆ ಮಾಡಿಕೊಳ್ಳಬೇಕು ಎಂದು ವಿನಂತಿಸುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.