ಗುರುವಾರ , ಮೇ 19, 2022
20 °C

ಕಡಲೆ ವಿಶೇಷ ರುಚಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಡಲೆ ಕಾಳಿನ ಗೊಜ್ಜು

ಬೇಕಾಗುವ ಸಾಮಗ್ರಿ: ಒಂದೂವರೆ ಬಟ್ಟಲು ಕೊಬ್ಬರಿ, ಒಂದು ಬಟ್ಟಲು ಕಡಲೆ ಕಾಳು, 5-6ಬ್ಯಾಡಗಿ ಮೆಣಸಿನಕಾಯಿ, 1ಚಮಚ ಕರಿ ಎಳ್ಳು, 1ನಿಂಬೆ ಗಾತ್ರದ ಹುಣಸೆ ಹಣ್ಣು, 1 ಈರುಳ್ಳಿ, ರುಚಿಗೆ ಉಪ್ಪು, ಚಿಟಕಿ ಇಂಗು.ಮಾಡುವ ವಿಧಾನ: ಮೊದಲು ಕಡಲೆ ಕಾಳನ್ನು ಸ್ವಲ್ಪ ಎಣ್ಣೆ ಹಾಕಿ ಕೆಂಪಗೆ ಹುರಿದುಕೊಳ್ಳಿ. ಕರಿ ಎಳ್ಳು, ಮೆಣಸಿನ ಕಾಯಿಹುರಿದುಕೊಳ್ಳಿ. ಮಿಕ್ಸಿಗೆ ಕೊಬ್ಬರಿ, ಹುರಿದ ಕಡಲೆ ಕಾಳು, ಎಳ್ಳು, ಹುಣಸೆ ಹಣ್ಣು, ಇಂಗು, ಮೆಣಸಿನ ಕಾಯಿ, ಹಾಕಿ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣ ವನ್ನು ಒಂದು ಪಾತ್ರೆಗೆ ಹಾಕಿ. ಈ ಮಿಶ್ರಣಕ್ಕೆ ಸಾಸಿವೆ ಒಗ್ಗರಣೆ ಕೊಡಿ. ಅನಂತರ ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿ ಮೇಲೆ ಉದುರಿಸಿ ಕೊತ್ತುಂಬರಿ ಸೊಪ್ಪು ಹಾಕಿ. ಚಪಾತಿ ಹಾಗೂ ರೊಟ್ಟಿ ಜೊತೆ ಗೊಜ್ಜು ತಿಂದರೆ ರುಚಿ.ಪಂಚಕಜ್ಜಾಯ

ಬೇಕಾಗುವ ಸಾಮಗ್ರಿ: ಕಡಲೆ ಕಾಳು-1/2ಕಿ.ಗ್ರಾಂ, 1 ಬಟ್ಟಲು ಕೊಬ್ಬರಿ ತುರಿ, 1ಕಿ.ಗ್ರಾಂಬೆಲ್ಲ, 2ಚಮಚ ಸಕ್ಕರೆ, 8-10 ಏಲಕ್ಕಿ, 50ಗ್ರಾಂ ಬಿಳಿ ಎಳ್ಳು.ಮಾಡುವ ವಿಧಾನ: ಸ್ವಚ್ಛಮಾಡಿದ ಕಡಲೆಕಾಳು ಹಾಗೂ ಎಳ್ಳನ್ನು ಸುವಾಸನೆ ಬರುವಂತೆ ಹುರಿದು, ಇವೆರಡನ್ನು ಹಿಟ್ಟು ಮಾಡಿಟ್ಟುಕೊಳ್ಳಿ. ಒಂದು ದಪ್ಪ ತಳವಿರುವ ಪಾತ್ರೆಯಲ್ಲಿ ಬೆಲ್ಲ, 2ಚಮಚ ಸಕ್ಕರೆ, ಕೊಬ್ಬರಿ ತುರಿ ನೀರು ಬೆರೆಸಿ ಕುದಿಸಿ. ದಪ್ಪವಾಗುತ್ತ ಬಂದಾಗ ಒಂದು ಬಟ್ಟಲಿನಲ್ಲಿ ಸ್ವಲ್ಪ ನೀರಿಟ್ಟುಕೊಂಡು ಆ ಪಾಕವನ್ನು ಹಾಕಿದಾಗ ಅದು ಕರಗದೆ ಮುದ್ದೆಯಾದಾಗ ಪಾಕ ಆಯಿತೆಂದು ತಿಳಿಯಬೇಕು. ಈ ಪಾಕಕ್ಕೆ ಏಲಕ್ಕಿ ಪುಡಿ, ಹುರಿದ ಕಡಲೆಹಿಟ್ಟು, ಎಳ್ಳಿನ ಪುಡಿ ಹಾಕಿ ಸರಿಯಾಗಿ ಮಿಶ್ರ ಮಾಡಿ. ಸ್ವಲ್ಪ ಸಮಯ ಬಿಟ್ಟು ದಪ್ಪ ಸೌಟಿನಿಂದ ಚೆನ್ನಾಗಿ ಉಜ್ಜಿ ಉಜ್ಜಿ ಪುಡಿ ಮಾಡಿ.ಕಡಲೆ ಬೇಳೆ ಪಲ್ಯದ ಪುಡಿ

ಬೇಕಾಗುವ ಸಾಮಗ್ರಿ: 1ಬಟ್ಟಲು ಕಡಲೆ ಬೇಳೆ, 1 ಬಟ್ಟಲು ಉದ್ದಿನ ಕಾಳು, ಕೊತ್ತುಂಬರಿ, ಜೀರಿಗೆ, ಇಂಗು, 1 ಚಮಚ ಅರಿಷಿಣ, 8-10 ಒಣಮೆಣಸು.ಮಾಡುವ ವಿಧಾನ: ಕಡಲೆಬೇಳೆ, ಉದ್ದಿನ ಬೇಳೆ, ಕೊತ್ತುಂಬರಿ, ಜೀರಿಗೆ, ಒಣಮೆಣಸು ಎಲ್ಲವನ್ನು ಕೆಂಪಗೆ ಹುರಿದು ಆರಿದ ನಂತರ ಪುಡಿ ಮಾಡಬೇಕು. ಈ ಪಲ್ಯದ ಪುಡಿಯನ್ನು ಹಾಗಲಕಾಯಿ, ಬದನೆಕಾಯಿ, ತೊಂಡೆಕಾಯಿ, ಬೆಂಡೆಕಾಯಿ ಮೊದಲಾದ ತರಕಾರಿ ಪಲ್ಯ ಮಾಡುವಾಗ ಹಾಕಿ ಪಲ್ಯ ಮಾಡಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.