ಮಂಗಳವಾರ, ಆಗಸ್ಟ್ 11, 2020
27 °C

ಕಡಿಮೆ ಬೆಲೆ ಸ್ಮಾರ್ಟ್ ಫೋನ್!

ಎಂ.ಎಸ್. Updated:

ಅಕ್ಷರ ಗಾತ್ರ : | |

ಕಡಿಮೆ ಬೆಲೆ ಸ್ಮಾರ್ಟ್ ಫೋನ್!

*ಹೊಸ ಮೊಬೈಲ್ ಹ್ಯಾಂಡ್‌ಸೆಟ್

`ಕಾರ್ಬನ್ ಸ್ಮಾರ್ಟ್~... ನವದೆಹಲಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಕಾರ್ಬನ್ ಮೊಬೈಲ್ಸ್ ಕಂಪೆನಿ `ರಿಡಿಫೈನ್ ಮೊಬಿಲಿಟಿ~ ಚಿಂತನೆಯಲ್ಲಿ ಪವರ್‌ಫುಲ್ ಸ್ಮಾರ್ಟ್‌ಫೋನ್‌ಗಳನ್ನು ವಿನ್ಯಾಸಗೊಳಿಸಿದೆ. ಜತೆಗೆ ಹೈಟೆಕ್ ಟ್ಯಾಬ್ಲೆಟ್‌ಗಳನ್ನೂ ಬಿಡುಗಡೆ ಮಾಡಿದೆ.ಅಲ್ಟ್ರಾ ಫಾಸ್ಟ್ ಪ್ರೊಸೆಸರ್, ಲೇಟೆಸ್ಟ್ ಆಂಡ್ರಾಯ್ಡ ವರ್ಷನ್, ಪ್ರಿ ಎಂಬೆಡೆಡ್ ಅಪ್ಲಿಕೇಷನ್ಸ್,  ಅತ್ಯಾಧುನಿಕ ಕ್ಯಾಮೆರಾ ಮತ್ತು ಡ್ಯುಯಲ್ ಸಿಮ್ ಬಳಕಗೆ ಅವಕಾಶ ಸೇರಿದಂತೆ ಹೆಚ್ಚು ಆಧುನಿಕ ಸೌಲಭ್ಯಗಳಿರುವ ಸ್ಮಾರ್ಟ್‌ಫೋನ್ ಇದು ಎಂದು ಕಾರ್ಬನ್ ಹೇಳಿಕೊಂಡಿದೆ.ಈ ಹೊಸ ಸ್ಮಾರ್ಟ್‌ಫೋನ್ ಸರಣಿಯಲ್ಲಿ ಬಿಡುಗಡೆಯಾಗಿರುವ `ಕಾರ್ಬನ್ ಎ9~, ಕಾರ್ಬನ್ ಎ7 ಮತ್ತು `ಕಾರ್ಬನ್ ಎ5~ ಹ್ಯಾಂಡ್‌ಸೆಟ್‌ಗಳಲ್ಲಿ ಸಾಮಾಜಿಕ ನಂಟಿನ ತಾಣಗಳು, ಮನರಂಜನೆ ಒದಗಿಸುವ ಅಪ್ಲಿಕೇಷನ್‌ಗಳನ್ನು ಮೊದಲೇ ಅಳವಡಿಸಲಾಗಿದೆ. ಇವುಗಳಲ್ಲಿ ಯುಟಿಲಿಟಿ ಅಪ್ಲಿಕೇಷನ್ಸ್ ಸಹ ಸಾಕಷ್ಟು ಸಂಖ್ಯೆಯಲ್ಲಿವೆ.ಇತ್ತೀಚಿನ ಆವೃತ್ತಿಗಳಾದ ಆಂಡ್ರಾಯ್ಡ 2.3.6  ಜಿಂಜರ್ ಬ್ರೆಡ್ ವರ್ಷನ್ ಸಹ ಇದರಲ್ಲಿ ಮೊದಲೇ ಅಡಕವಾಗಿದೆ. ಬಹಳ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅಪ್ಲಿಕೇಷನ್‌ಗಳಿಗೆ ಸಪೋರ್ಟ್ ಮಾಡುವಂತಹ ಸ್ಮಾರ್ಟ್‌ಫೋನ್‌ಗಳನ್ನು ಬಳಸುವವರಿಗೆ ಇದು ಸೂಕ್ತವಾಗಿದೆ ಎಂಬುದು ಕಾರ್ಬನ್‌ನ ಪ್ರಚಾರವಾಗಿದೆ.ಕಾರ್ಬನ್ ಸ್ಮಾರ್ಟ್‌ಫೋನ್ ಎ9ನ 1ಗಿಗಾಹರ್ಟ್ಸ್ ಪ್ರೊಸೆಸರ್ ಹೊಂದಿದ್ದರೆ,  ಎ7 ಮತ್ತು ಎ5ನಲ್ಲಿ 800 ಮೆಗಾಹರ್ಟ್ಸ್ ಪ್ರೊಸೆಸರ್ ಇದೆ.  ಮೊದಲ ಮಾದರಿ 9.7 ಸೆಂ.ಮೀ. ಅಗಲ ಮತ್ತು ಉಳಿದೆರಡು ಹ್ಯಾಂಡ್‌ಸೆಟ್‌ಗಳು 8.9 ಸೆಂ.ಮೀ. ಅಗಲದ ಕ್ಯಾಪ್ಟೀವ್ ಮಲ್ಟಿ ಟಚ್ ಸ್ಕ್ರೀನ್ ಹೊಂದಿವೆ.ಎ9 ಮಾದರಿಗೆ 480-800 ಪಿಕ್ಸೆಲ್‌ನ ಡಬ್ಲ್ಯುವಿ  ಜಿಎ ಸ್ಕ್ರೀನ್ ರೆಷಲ್ಯೂಷನ್ ಇದ್ದರೆ, ಎ7 ಮತ್ತು ಎ5ನಲ್ಲಿ 320-480 ಎಚ್‌ವಿಜಿಎ ಸ್ಕ್ರೀನ್ ರೆಷಲ್ಯೂಷನ್ ಇದೆ.`ಕಾರ್ಬನ್ ಎ9~ನಲ್ಲಿ ಆಟೊ ಫೋಕಸ್ ಸೌಲಭ್ಯವಿರುವ 5 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಜತೆಗೆ ಫ್ಲಾಷ್‌ಲೈಟ್ ಇದೆ.ಎ7 ಮಾದರಿಯಲ್ಲಿ 5ಎಂಪಿ ಕ್ಯಾಮೆರಾ ಇದ್ದರೂ ಆಟೊ ಫೋಕಸ್ ಇಲ್ಲ. ಆದರೆ ಡ್ಯೂಯಲ್ ಲೆಡ್ ಫ್ಲಾಷ್ ಇದೆ.ಈ ಎರಡೂ ಮಾದರಿಯಲ್ಲಿ ಫ್ರಂಟ್ ಕ್ಯಾಮೆರಾ ಸೌಲಭ್ಯವಿದ್ದು ವೀಡಿಯೊ ಕಾಲಿಂಗ್‌ಗೆ ನೆರವಾಗುತ್ತವೆ.ಕಾರ್ಬನ್ ಎ5 ಮಾದರಿಯಲ್ಲಿ 2ಎಂಪಿ ಕ್ಯಾಮೆರಾ ಮಾತ್ರ ಇದೆ. ಮೂರೂ ಹ್ಯಾಂಡ್‌ಸೆಟ್‌ಗಳು `3ಜಿ~ ತಂತ್ರಾಂಶ ಉಳ್ಳವಾಗಿದ್ದು, ಎಚ್‌ಎಸ್‌ಡಿಪಿಎ 7.2 ಮೆಗಾಬೈಟ್ಸ್ ಪರ್ ಸೆಕೆಂಡ್ ವೇಗದಲ್ಲಿ ಕಾರ್ಯ ನಿರ್ವಹಿಸುತ್ತವೆ.ಮೂರರಲ್ಲಿಯೂ ಗ್ಲೋಬಲ್ ಪೊಸಿಷನಿಂಗ್ ಸಿಸ್ಟೆಂ(ಜಿಪಿಎಸ್) ಮತ್ತು 802.11ಬಿ/ಜಿ/ಎನ್ ವೈಫೈ  ಸೌಲಭ್ಯ ಅಳವಡಿಕೆಯಾಗಿದೆ. 32 ಜಿ.ಬಿ.ವರೆಗೂ ಸ್ಮರಣಶಕ್ತಿ ವಿಸ್ತರಿಸಿಕೊಳ್ಳಲು ಅವಕಾಶವಿದೆ.ಜತೆಗೆ ಜಿಪಿಆರ್‌ಎಸ್/ಡಬ್ಲ್ಯುಎಪಿ/ಎಂಎಂಎಸ್/ಎಡ್ಜ್, ಎಫ್‌ಎಂ ರೇಡಿಯೊ, ಮ್ಯೂಸಿಕ್ ಮತ್ತು ವಿಡಿಯೊ ಪ್ಲೇಯರ್ ಸವಲತ್ತುಗಳಿವೆ.ಮೂರು ಹ್ಯಾಂಡ್‌ಸೆಟ್‌ಗಳಲ್ಲಿ ಜಿ ಸೆನ್ಸರ್, ಪ್ರಾಕ್ಸಿಮಿಟಿ ಸೆನ್ಸರ್ ಸೌಲಭ್ಯವಿದೆ. ಜತೆಗೆ ಮೊದಲ ಎರಡು ಮಾದರಿಯಲ್ಲಿ ಲೈಟ್ ಸೆನ್ಸರ್ ಸಹ ಇದೆ.ಕಾರ್ಬನ್ ಎ9 ಸ್ಮಾರ್ಟ್‌ಫೋನ್‌ಬೆಲೆ  ರೂ 9490

ಕಾರ್ಬನ್ ಎ7 ಸ್ಮಾರ್ಟ್‌ಫೋನ್‌ಬೆಲೆ  ರೂ 7490

ಕಾರ್ಬನ್ ಎ5 ಸ್ಮಾರ್ಟ್‌ಫೋನ್‌ಬೆಲೆ  ರೂ 5790

ಹೆಚ್ಚಿನ ಮಾಹಿತಿಗೆ: www.karbonnmobiles.com

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.