ಬಸವನಬಾಗೇವಾಡಿ: ಮಾನವಿಯ ಮೌಲ್ಯಗಳನ್ನು ಅರ್ಥೈಸಿಕೊಳ್ಳಲು ಸಂಘಟನೆಗಳ ಪಾತ್ರ ಮುಖ್ಯವಾಗಿದೆ ಎಂದು ಕರಬಂಟನಾಳದ ಶಿವಕುಮಾರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಇವಣಗಿ ಗ್ರಾಮದಲ್ಲಿ ಭಾನುವಾರ ಕನ್ನಡ ರಕ್ಷಣಾ ವೇದಿಕೆಯ ಗ್ರಾಮ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಂಘಟನೆಯಲ್ಲಿ ರಾಜಕೀಯ ಮಾಡದೆ ಕನ್ನಡ ಭಾಷೆ, ಪ್ರದೇಶಗಳ ಉಳಿವಿಗಾಗಿ ಹೋರಾಟ ಮಾಡಬೇಕು. ಭಾಷೆಯ ಹೆಸರಿನಲ್ಲಿ ರಾಜಕೀಯ ಮಾಡಿದರೆ ಕನ್ನಡ ರಕ್ಷಣೆ ಬಗ್ಗೆ ಹೋರಾಟ ಮಾಡಿದವರ ಘನತೆ ಕುಂದುತ್ತದೆ ಎಂದು ತಿಳಿಸಿದರು.

ಕರವೇ ಜಿಲ್ಲಾ ಅಧ್ಯಕ್ಷ ಶೇಷರಾವ ಮಾನೆ ಮಾತನಾಡಿ ಕನ್ನಡ ಉಳಿವಿಗಾಗಿ ಕಾರ್ಯಕರ್ತರು ಕಾರ್ಯ ನಿರ್ವಹಿಸಬೇಕು. ಸಾಹಿತ್ಯದ ಅಭಿವೃದ್ದಿ ಆಗಬೇಕು. ಅವುಗಳನ್ನು ಕನ್ನಡಿಗರಿಗೆ ತಲುಪಿಸುವ ಕೆಲಸವಾಗಬೇಕು. ಕನ್ನಡಿಗರಿಗೆ ಅನ್ಯಾಯವಾದರೆ ಸಹಿಸದೆ ಹೋರಾಟಕ್ಕೆ ಇಳಿಯಬೇಕು ಎಂದು ನುಡಿದರು.ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ ಕನ್ನಡದ ನೆಲ-ಜಲ, ಸಂಸ್ಕ್ರತಿ ರಕ್ಷಣೆ ಹಾಗೂ ನಾಡಿನ ಏಳಿಗೆಗಾಗಿ ಕರವೇ ಮಾಡುತ್ತಿರುವ ಕಾರ್ಯ ಹೆಮ್ಮೆ ತಂದಿದೆ ಎಂದು ತಿಳಿಸಿದರು.

ಅಮರೇಶ ಮಿಣಜಗಿ ಮಾತನಾಡಿ ಕನ್ನಡಿಗರು ಇಂಗ್ಲಿಷ್ ಭಾಷೆಗೆ ಮರುಹೋಗದೇ ಕನ್ನಡತನವನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ಕರವೇ ಹಲವು ಕರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮನ್ನಾನ ಶಾಬಾದಿ, ಗೌರಮ್ಮ ಮುತ್ತತ್ತಿ, ಲಕ್ಷ್ಮಿಬಾಯಿ ಹಂಚನಾಳ, ಶಿವಮಾನಪ್ಪ ಚಕ್ರಮನಿ, ಸಿ.ಆರ್.ಸುಖನಾಪುರ, ಬಸಪ್ಪ ಪೂಜಾರಿ, ಬಸವರಾಜ ತಾಳಿಕೋಟ ಉಪಸ್ಥಿತರಿದ್ದರು.ಸುರೇಶ ಚಿಗರಿ ಸ್ವಾಗತಿಸಿದರು, ಬಿ.ಎ.ಚಕ್ರಮನಿ ವಂದಿಸಿದರು, ಬಸವರಾಜ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.