ಬುಧವಾರ, ಮಾರ್ಚ್ 3, 2021
19 °C

ಕನ್ನಡ ಕಲಾ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ಕಲಾ ಸಂಭ್ರಮ

ಒಂದೇ ವೇದಿಕೆಯಲ್ಲಿ ಕನ್ನಡ ಕಲೆ ಬೆಳಗಿಸುವಂಥ ರಂಗಗೀತೆ ಹಾಗೂ ಗೀತ ಗಾಯನ ಮತ್ತು ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇತ್ತೀಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ  ಸೊಗಸಾಗಿ ಮೂಡಿಬಂತು.85ರ ಹರೆಯದ ಡಾ. ಎಂ. ಆರ್. ಎಸ್. ಅಯ್ಯಂಗಾರ್ ಅವರಿಂದ ಬೆರಗಾಗಿಸುವಂಥ ರಂಗಗೀತೆ ಹಾಗೂ ಯುವ ಪ್ರತಿಭೆ ಮುರುಳಿಕೃಷ್ಣ ಮತ್ತು ತಂಡದವರಿಂದ ಗೀತಗಾಯನ ಅತ್ಯುತ್ತಮವಾಗಿ ಮೂಡಿ ಬಂತು. ಡಾ. ಎಂ. ಆರ್. ಎಸ್. ಅಯ್ಯಂಗಾರ್ ಅವರ ವಯಸ್ಸಿಗೆ ಮೀರಿದ ಕಂಟಕ್ಕೆ ಬೆರಗಿದ ಪ್ರೇಕ್ಷಕರು ಹಾಗೂ ಅತಿಥಿಗಳು ನಿಂತು ಚಪ್ಪಾಳೆ ಮೂಲಕ ಅಭಿನಂದಿಸಿ ಗೌರವ ಸೂಚಿಸಿದರು.  ಕಾರ್ಯಕ್ರಮದಲ್ಲಿ ಜೂನಿಯರ್ ರಾಜಕುಮಾರ್ ಖ್ಯಾತಿಯ ಪರಶುರಾಮ್, ಪ್ರೇಕ್ಷಕರಿಗೆ ಡಾ. ರಾಜ್ ಕುಮಾರ್ ಅವರ ನೆನಪು ಮಾಡಿಸಿದರು. ಈ ಸಂದರ್ಭದಲ್ಲಿ ವೊಕ್ಕರಣೆ ಸೇವಾ ಟ್ರಸ್ಟ್, ಆಯ್ದ ಪ್ರತಿಭಾವಂತ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.