ಕೃಷ್ಣರಾಜಪೇಟೆ: ವಿಶ್ವಕನ್ನಡ ಸಮ್ಮೇಳನಕ್ಕೆ ತೆರಳುತ್ತಿರುವ ಜಿಲ್ಲೆಯ ಕನ್ನಡ ತೇರನ್ನು ಪಟ್ಟಣದ ಪ್ರವಾಸಿಮಂದಿರ ವೃತ್ತದ ಬಳಿ ಬುಧವಾರ ಬೀಳ್ಕೊಡಲಾಯಿತು. ಪಟ್ಟಣದ ಪ್ರವಾಸಿ ಮಂದಿರ ವೃತ್ತದ ಬಳಿ ಬುಧವಾರ ಬೆಳಿಗ್ಗೆ ತೇರಿನ ಯಾತ್ರೆಗೆ ಶಾಸಕ ಕೆ.ಬಿ. ಚಂದ್ರಶೇಖರ್ ಚಾಲನೆ ನೀಡಿದರು. ಪಾಂಡವಪುರ ಉಪವಿಭಾಗಾ ಧಿಕಾರಿ ಜಿ.ಪ್ರಭು, ತಹಶೀಲ್ದಾರ್ ಡಾ.ಹೆಚ್.ಎಲ್.ನಾಗರಾಜು, ಪುರ ಸಭೆ ಮುಖ್ಯಾಧಿಕಾರಿ ಬಸವರಾಜು, ತಾ.ಪಂ ಈ.ಓ ನಾಗೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಪುಟ್ಟಸ್ವಾಮಿಗೌಡ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಕೆ.ಹರಿಚರಣ್ತಿಲಕ್, ಕರ್ನಾಟಕ ಜಾನಪದ ಪರಿಷತ್ನ ತಾಲ್ಲೂಕು ಅಧ್ಯಕ್ಷ ಕೆ.ಎಸ್. ಸೋಮಶೇಖರ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಜಯ ರಾಮು ಸೇರಿದಂತೆ ವಿವಿಧ ಜನ ಪ್ರತಿನಿಧಿಗಳು, ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಪಟ್ಟಣದ ಎಲ್ಲಾ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಆಕರ್ಷಕ ಪಥ ಸಂಚಲನ ಹಾಗೂ ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರಗು ತಂದಿದ್ದವು. ತಾಲ್ಲೂಕಿನ ಗಡಿಗ್ರಾಮ ಕೆಸವಿನ ಕಟ್ಟೆಯ ಬಳಿ ಮಂಗಳವಾರ ಸಂಜೆ ತೇರನ್ನು ಅದ್ದೂರಿಯಿಂದ ಸ್ವಾಗತಿಸಲಾಗಿತ್ತು. ತಾಲ್ಲೂಕಿನ ಜನತೆಯ ಪರವಾಗಿ ವಿವಿಧ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಸ್ವಾಗತಿಸಿದರು. ತಾಲ್ಲೂಕಿನ ರಂಗನಾಥ ಪುರ ಕ್ರಾಸ್, ಸಂತೇಬಾಚಹಳ್ಳಿ, ದೊಡ್ಡಕ್ಯಾತನ ಹಳ್ಳಿ, ಕೊಟಗಹಳ್ಳಿ, ಜಾಗಿನಕೆರೆ, ಕೈಗೋನಹಳ್ಳಿಕ್ರಾಸ್, ಅಗ್ರಹಾರಬಾಚಹಳ್ಳಿ ಕ್ರಾಸ್ ಸೇರಿದಂತೆ ದಾರಿಯುದ್ದಕ್ಕೂ ಸಾರ್ವಜನಿಕರು, ಶಾಲಾ ಮಕ್ಕಳು, ಶಿಕ್ಷಕರು ರಥವನ್ನು ಸ್ವಾಗತಿಸಿದರು.

ತೇರಿ ನೊಂದಿಗೆ ಮೆರವಣಿಗೆಯಲ್ಲಿ ಸಾಗಿದ ವರಿಗೆ ಮಜ್ಜಿಗೆ, ಕಬ್ಬಿನ ಹಾಲನ್ನು ನೀಡಿದ್ದು ವಿಶೇಷವಾಗಿತ್ತು. ಸಂತೇ ಬಾಚಹಳ್ಳಿಯಲ್ಲಿ ಹಾಗೂ ಪಟ್ಟಣದಲ್ಲಿ ರಾತ್ರಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಶಾಲಾ ಮಕ್ಕಳು ಆಕರ್ಷಕ ಕಾರ್ಯಕ್ರಮ ನೀಡಿದರು.

ವಿಶೇಷ ಆತಿಥ್ಯ
ಕಿಕ್ಕೇರಿ: ಜಿಲ್ಲೆಯ ಗಡಿ ಭಾಗದ ಹೋಬಳಿಯಾದ ಕಿಕ್ಕೇರಿಗೆ ಬುಧವಾರ ಆಗಮಿಸಿದ ವಿಶ್ವ ಕನ್ನಡ ನುಡಿ ತೇರಿಗೆ ಶಾಸಕ ಕೆ.ಬಿ.ಚಂದ್ರಶೇಖರ್, ತಹಶೀ ಲ್ದಾರ್ ಡಾ.ಎಚ್. ಎಲ್.ನಾಗರಾಜು ಮಾರ್ಗದರ್ಶನದಲ್ಲಿ ಗ್ರಾಮ ಪಂಚಾ ಯಿತಿಯವರು ಅದ್ದೂರಿ ಕಾರ್ಯಕ್ರಮ ಏರ್ಪಡಿಸಿ ವಿಶೇಷ ಆತಿಥ್ಯದೊಂದಿಗೆ ಬೀಳ್ಕೊಡುಗೆ ನೀಡಿದರು. ಶಾಸಕ ಕೆ.ಬಿ.ಚಂದ್ರಶೇಖರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತಹಶೀ ಲ್ದಾರ್ ಡಾ.ಎಚ್.ಎಲ್. ನಾಗರಾಜು ಮಾತನಾಡಿದರು.

ಊರ ಹೊರಭಾಗದ ಮಾರ್ಕೆಟ್ ನಿಂದ ಕನ್ನಡ ತೇರನ್ನು ಆತ್ಮೀಯವಾಗಿ ತಮಟೆ ಮದ್ದಳೆ, ಪೂಜಾ ಕುಣಿತ, ಡೊಳ್ಳು ಕುಣಿತ, ಕುಂಭ ಮೇಳದೊಂದಿಗೆ ಸ್ವಾಗತಿಸಲಾಯಿತು. ಶಾಲಾ ಕಾಲೇಜು ವಿದ್ಯಾರ್ಥಿಗಳು ಬ್ಯಾಂಡ್ ಸೆಟ್, ಆಕರ್ಷಕ ಕನ್ನಡ ಬಾವುಟ ಹಿಡಿದು, ಎತ್ತಿನ ಗಾಡಿ ಮೆರವಣಿಗೆಯೊಂದಿಗೆ ಸಾಗಿದರು. ಲೇಪಾಕ್ಷಿಗೌಡ ನಿರೂಪಿಸಿ, ಗ್ರಾಪಂ. ಸದಸ್ಯ ಕೆ.ವಿ.ಅರುಣ್ಕುಮಾರ್ ಸ್ವಾಗ ತಿಸಿ, ತಾಲ್ಲೂಕು ಕಾರ್ಯ ನಿರ್ವಹಕಾ ಧಿಕಾರಿ ಎಚ್.ಆರ್. ನಾಗೇ ಗೌಡ ವಂದಿಸಿದರು.

ಶಾಸಕ ಕೆ.ಬಿ.ಚಂದ್ರಶೇಖರ್, ತಹಶೀಲ್ದಾರ್ ಡಾ.ಎಚ್. ಎಲ್. ನಾಗರಾಜು, ಜಿಪಂ.ಅಧ್ಯಕ್ಷ ಕೆ.ಎಸ್. ಪ್ರಭಾಕರ್, ಗ್ರಾಪಂ.ಅಧ್ಯಕ್ಷ ಸುರೇಶ್, ಉಪಾಧ್ಯಕ್ಷೆ ಪುಟ್ಟಲಕ್ಷ್ಮೀ, ವರ್ತೂರು ಪ್ರಕಾಶ್ ಸಂಘದ ಕೆ.ಜೆ. ವಿಜಯ ಕುಮಾರ್, ಪ್ರೊಬೆಷನರಿ ಎಸಿ ಬಸವ ರಾಜು, ಯುವಜನ ಸೇವಾ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಡಾ. ಮಂಜುಳಾ, ಬಿಇಓ ಎ.ಬಿ.ಪುಟ್ಟ ಸ್ವಾಮಿಗೌಡ, ಇಓ ಎಚ್.ಆರ್. ನಾಗೇಗೌಡ, ತಾಲ್ಲೂಕು ಕಸಾಪ ಅಧ್ಯಕ್ಷ ಹರಿಚರಣತಿಲಕ್, ತಾಪಂ. ಮಾಜಿ ಸದಸ್ಯ ಜವರಾಯಿ ಗೌಡ, ಟಿಎಪಿಸಿಎಂಎಸ್ ಇತರರು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.