ಬಳ್ಳಾರಿ: ಕನ್ನಡವನ್ನು ಓದಲು, ಬರೆಯಲು ಕಲಿತರೆ ಸಾಲದು. ಬದಲಿಗೆ, ಜೀವನದಲ್ಲಿ ಕನ್ನಡದ ಸಂಸ್ಕೃತಿಯನ್ನು ಅಳವಡಿಸಿ ಕೊಂಡು, ಕನ್ನಡ ಪರಂಪರೆಯನ್ನು ಉಳಿಸಲು ಶ್ರಮಿಸುವುದೇ ನಿಜವಾದ ಕನ್ನಡಿಗರ ಆದ್ಯ ಕರ್ತವ್ಯ ಎಂದು ಎಂದು ಸಿರಿಗೇರಿ ಪನ್ನರಾಜ್ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕ ಭಾನುವಾರ ಅವರ ನಿವಾಸದಲ್ಲಿ ಏರ್ಪಡಿಸಿದ್ದ `ಕನ್ನಡದ ಕಟ್ಟಾಳುವಿ ನೊಂದಿಗೆ ಕಸಾಪ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಮರಸ್ಯದಿಂದ ಜೀವನ ನಡೆಸುವವರ ನಡುವೆ ಪರಸ್ಪರ ಜಗಳ ಮೂಡಿಸಿ, ಭಾಷಾ ಸಾಮರಸ್ಯ ಕದಡಿಸುತ್ತ ತಮ್ಮ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳಿಂದಾಗಿ ಅನ್ಯ ಭಾಷಿಕರೊಂದಿಗಿನ ಸಂಬಂಧ ಹದಗೆಡುತ್ತಿದೆ. ಅದನ್ನು ತೆಯಲು ಒಗ್ಗಟ್ಟು ಅಗತ್ಯವಾಗಿದೆ ಎಂದು ಅವರು ಹೇಳಿದರು.

ತಮಿಳು, ಮರಾಠಿ, ತೆಲುಗು ಭಾಷೆಯ ಜನರೊಂದಿಗೆ ಕನ್ನಡಿಗರು ಒಂದಾಗಿ ಜೀವನ ನಡೆಸುತ್ತಿದ್ದು, ಭಾಷೆ, ಗಡಿ ಸಮಸ್ಯೆ ಕೆದಕುತ್ತ ಸಾಮರಸ್ಯವನ್ನು ಕೆಡಿಸಲಾಗುತ್ತಿದೆ ಎಂದು ಅವರು ದೂರಿದರು.

ಸಹಬಾಳ್ವೆ, ಸಮಪಾಲು ಕನ್ನಡಿಗರ ಮೂಲ ತತ್ವವಾಗಿದೆ. `ಕಾಯಕವೇ ಕೈಲಾಸ' ಎಂದು ತಿಳಿಸಿದ ಶರಣ ಸಂಸ್ಕೃತಿಯು 12ನೇ ಶತಮಾನದಲ್ಲಿ ಈ ತತ್ವವನ್ನೇ ಅನುಸರಿಸಿದೆ. ಕನ್ನಡಿಗರು ಅದನ್ನು ಪಾಲಿಸಿ, ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ ಎಂದು ಅವರು ಹೇಳಿದರು.

`ಬೆಳಗಾವಿ ಕನ್ನಡ ನಾಡಿಗೆ ಸೇರಬೇಕು' ಎಂಬ ಹೋರಾಟದಲ್ಲಿ ಮೊದಲು ಪಾಲ್ಗೊಂಡು, ಕನ್ನಡಪರ ಸಂಘಟನೆಯಲ್ಲಿ ತೊಡಗಿದ್ದಾಗಿ ತಿಳಿಸಿದ ಪನ್ನರಾಜ್, ಬಳ್ಳಾರಿಯಲ್ಲಿ ಸೋದರ ಸಿರಿಗೇರಿ ಬಸವರಾಜ್ ಸ್ಥಾಪಿಸಿದ್ದ ಕರ್ನಾಟಕ ಯುವಕ ಸಂಘ ಅದಕ್ಕೆ ಸ್ಫೂರ್ತಿ ನೀಡಿತು ಎಂದರು.

`ಪ್ರೊ. ಶೇಷಾದ್ರಿ ಅವರೊಂದಿಗಿನ ಒಡನಾಟದಿಂದಾಗಿ ಗೋಕಾಕ್ ಚಳವಳಿಯಲ್ಲಿ ಪಾಲ್ಗೊಂಡು, ಕನ್ನಡಪರ ಹೋರಾಟದಲ್ಲಿ ಭಾಗವಹಿಸಿದ್ದಲ್ಲದೆ, ಬಳ್ಳಾರಿಯಲ್ಲಿ ವಿವಿಧ ರೀತಿಯ ಹೋರಾಟಗಳಲ್ಲಿ ಪಾಲ್ಗೊಂಡೆ' ಎಂದು ತಿಳಿಸಿದ ಅವರು, `ಜಗತ್ತಿನಲ್ಲಿ ಅತ್ಯಂತ ವೇಗವಾಗಿ ನಶಿಸಿ ಹೋಗುತ್ತಿರುವ ಭಾಷೆಗಳಲ್ಲಿ ಕನ್ನಡವೂ ಒಂದಾಗಿದೆ. ಆಧುನಿಕ ಯುಗದಲ್ಲಿ ಕಂಪ್ಯೂಟರ್ ನೆರವಿನೊಂದಿಗೆ ಚಿಕ್ಕ ಮಕ್ಕಳಿಗೆ ಕನ್ನಡದ ಬಗ್ಗೆ ಅರಿವು ಮೂಡಿಸಬೇಕಿದೆ' ಎಂದರು.

ನಗರದಲ್ಲಿ ಕನ್ನಡ ಭವನ ನಿರ್ಮಿಸುವಂತೆ ಕನ್ನಡ ಸಾಹಿತ್ಯ ಪರಿಷತ್ತು ಮನವಿ ಸಲ್ಲಿಸಿದ್ದು, ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಅನಿಲ್ ಲಾಡ್ ಭರವಸೆ ನೀಡಿದರು.

ನಗರದಲ್ಲಿ ಪ್ರತಿ ತಿಂಗಳೂ ಸಾಂಸ್ಕೃತಿಕ ಕಾರ್ಯಕ್ರಮ ರೂಪಿಸುವಂತೆ ಕನ್ನಡಪರ ಚಿಂತಕರು ಸಲಹೆ ನೀಡಿದ್ದು, ಕನ್ನಡದ ಮನಸ್ಸುಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಅಂತಹ ಕಾರ್ಯಕ್ರಮ ರೂಪಿಸಲು ಚಿಂತನೆ ನಡೆದಿದೆ ಎಂದು ಅವರು ಹೇಳಿದರು. ರಂಗಭೂಮಿ ಕಲಾವಿದ ಬೆಳಗಲ್ ವೀರಣ್ಣ ಮಾತನಾಡಿದರು.

ಪರಿಷತ್ನ ಜಿಲ್ಲಾ ಘಟಕದ ಅಧ್ಯಕ್ಷ ಸಿರಿಗೇರಿ ಯರಿಸ್ವಾಮಿ ಸ್ವಾಗತಿಸಿದರು. ಎನ್.ಡಿ. ವೆಂಕಮ್ಮ ಪರಿಚಯಿಸಿದರು. ವೀ.ವಿ. ಸಂಘದ ಸದಸ್ಯ ರಾಜಣ್ಣ, ಚಾ.ಮ. ಗಂಗಾಧರಯ್ಯ, ಸಂಪಿಗೆ ನಾಗರಾಜ್, ಮುಂಡಾಸದ ಮಲ್ಲಿಕಾರ್ಜುನ ಮತ್ತಿತರರು ಉಪಸ್ಥಿತರಿದ್ದರು. ವಿಶ್ವೇಶ್ವರ ಗೌಡ ಕಾರ್ಯಕ್ರಮ ನಿರೂಪಿಸಿದರು.

ರಂಗಭೂಮಿ ಹಾಗೂ ತೊಗಲುಗೊಂಬೆ ಕಲಾವಿದ ಬೆಳಗಲ್ ವೀರಣ್ಣ ಅವರಿಗೆ ಯಕ್ಷಗಾನ ಮತ್ತು ಜಾನಪದ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವಂತೆ, ಸಿರಿಗೇರಿ ಪನ್ನರಾಜ್ ಅವರನ್ನು ವಿಧಾನ ಪರಿಷತ್ಗೆ ನಾಮ ನಿರ್ದೇಶನ ಮಾಡುವಂತೆ ಸರ್ಕಾರದ ಗಮನ ಸೆಳೆಯಬೇಕು ಎಂದು ಇದೇ ಸಂದರ್ಭದಲ್ಲಿ ಶಾಸಕ ಅನಿಲ್ ಲಾಡ್ ಅವರಲ್ಲಿ ಮನವಿ ಮಾಡಿಕೊಳ್ಳಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.