ಗುರುವಾರ , ಜೂನ್ 17, 2021
27 °C

ಕನ್ನಡ ಭಾಷೆ ಉಳಿಯಲು ಮಗುವಿನ ಪ್ರೀತಿ ಬೇಕಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೊರಬ: `ಮಗು ನನ್ನದು ಎಂಬ ಕಾರಣಕ್ಕೆ ಪೋಷಕರು ಅದನ್ನು ಪ್ರೀತಿಸುವಂತೆ ಕನ್ನಡ ಭಾಷೆಯನ್ನು ಪ್ರೀತಿಸಬೇಕಿದೆ~ ಎಂದು ಹಿರಿಯ ಸಾಹಿತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕತ ಡಾ.ನಾ. ಡಿಸೋಜಾ ಕರೆ ನೀಡಿದರು.ಮಂಗಳವಾರ ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಾಂಸ್ಕತಿಕ ವೇದಿಕೆ ಮತ್ತು ಕನ್ನಡ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ, ಸುಗಮ ಸಂಗೀತ ಕಾರ್ಯಕ್ರಮ ಮತ್ತು ಡಾ.ಚೆಲುವರಾಜ `ಕನ್ನಡ ಜನಪದ ಮಹಾಕಾವ್ಯಗಳ ಪರ್ಯಾಯ ವಿವೇಚನೆ~ ಎಂಬ ಸಂಶೋಧನಾ ಗ್ರಂಥದ ಬಿಡುಗಡೆ ನೆರವೇರಿಸಿದ ಅವರು `ಪ್ರಸ್ತುತ ದಿನಗಳಲ್ಲಿ ಕನ್ನಡ ಭಾಷೆಯ ಸ್ಥಿತಿಗತಿಗಳು~ ವಿಷಯ ಕುರಿತು ಮಾತನಾಡಿದರು.ಭಾಷಾ ಪ್ರೇಮವನ್ನು ತಮಿಳು ಕವಿಗಳಿಂದ ಕಲಿಯಬೇಕಿದೆ ಎಂದ ಅವರು, ರಾಜ್ಯ ಸರ್ಕಾರಕ್ಕೆ ಕನ್ನಡಕ್ಕಾಗಿ ಕಾವಲು ಸಮಿತಿ ರಚಿಸುವಂತಹ ಪರಿಸ್ಥಿತಿ ಬಂದಿದೆ. ಆಡಳಿತದಲ್ಲಿ ಕನ್ನಡವನ್ನು ಕಡ್ಡಾಯ ಮಾಡಬೇಕು ಎಂದು ನೂರಾರು ಆದೇಶಗಳಿದ್ದರೂ ಅದರ ಅಭಿವೃದ್ಧಿ ಆಗಿಲ್ಲ. ಕೇವಲ ಭಾಷೆ ಆಗಿರದೇ ಜೀವನದ ವಿಧಿ ವಿಧಾನವಾಗಿ ಉಳಿದಿರುವ ಕನ್ನಡಕ್ಕೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂದು ವಿಷಾದಿಸಿದರು.ನಮ್ಮ ಭಾಷೆಯಲ್ಲಿ ಜೀವಿಸಿ, ಇತರ ಭಾಷೆ ಗೌರವಿಸಿದಾಗ ಮಾತ್ರ ಕನ್ನಡದ ಬಗ್ಗೆ ಅಭಿಮಾನ ಬೆಳೆಯುತ್ತದೆ ಎಂದ ಅವರು, ಆಲೂರು ವೆಂಕಟರಾಯರ `ವಾಗ್ಭೂಷಣ~ ಪತ್ರಿಕೆ ಉಲ್ಲೇಖಿಸಿ, ಆ ಲೇಖನದಲ್ಲಿದ್ದ ಅರ್ಧದಷ್ಟು ನಿರೀಕ್ಷೆಗಳೂ ಈಡೇರಿಲ್ಲದಿರುವುದು ವಿಪರ್ಯಾಸ ಎಂದರು.ಕನ್ನಡಾಭಿಮಾನ ನವೆಂಬರ್ ತಿಂಗಳಿಗೆ ಸೀಮಿತವಾಗರದೇ ಮಗುವಿನ ಅಳು ಕೇಳಿ ಓಡಿ ಬರುವ ತಾಯಿಯಂತೆ ಸದಾ ಪೋಷಣೆಗೊಳ್ಳಬೇಕು ಎಂದು ಸಲಹೆ ನೀಡಿದರು. ಪ್ರಾಂಶುಪಾಲ ಪ್ರೊ.ಎಂ. ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು.  ಸಂಶೋಧನಾ ಗ್ರಂಥದ ಲೇಖಕ ಡಾ.ಚೆಲುವರಾಜು, ಪ್ರಾಧ್ಯಾಪಕರಾದ ಎ. ಮೋಹನ್, ಆರ್. ಗಂಗಾಧರ್,  ಅಶ್ವಥ್ಥ ನಾರಾಯಣ, ಗೀತಾ,  ಬಸವರಾಜಪ್ಪ, ರಾಜಶೇಖರ ಗೌಡ,  ಶಶಿಕುಮಾರ್, ಮೊಹಮ್ಮದ್ ಅಲಿ, ಪಿಡಿ ಸುಬ್ರಹ್ಮಣ್ಯ, ಗ್ರಂಥಾಲಯದ ಮುಖ್ಯಸ್ಥ ಸಂತೋಷ್,  ಹುಚ್ಚರಾಯ, ಗಣಪತಿ, ರಚನಾ, ಗೀತಾ ಮೊದಲಾದವರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.