ವಿಜಾಪುರ: `ಪ್ರತಿ ಮನೆಗೂ ಉನ್ನತ ಶಿಕ್ಷಣ' ಧ್ಯೇಯದೊಂದಿಗೆ ಗ್ರಾಮೀಣ ಪ್ರದೇಶದ ಹೆಚ್ಚು ಹೆಚ್ಚು ಜನರನ್ನು ತಲುಪಲು ನಿರ್ಧರಿಸಿರುವ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ, ಕನ್ನಡ ಭಾಷೆಯಲ್ಲಿಯೂ ಕೋರ್ಸ್ಗಳನ್ನು ಆರಂಭಿಸಲು ಮುಂದಾಗಿದೆ.

ಕೈದಿಗಳು ಮತ್ತು ಲೈಂಗಿಕ ಅಲ್ಪಸಂಖ್ಯಾತರಿಗೆ ಅವರ ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆ ವಿವಿಧ ವೃತ್ತಿಪರ ಕೋರ್ಸ್ಗಳಿಗೆ ಉಚಿತ ಪ್ರವೇಶ ನೀಡಲಿದೆ. ಜೈಲುಗಳಲ್ಲಿಯೇ ಅಧ್ಯಯನ ಕೇಂದ್ರ ಆರಂಭಿಸಲು ನಿರ್ಧರಿಸಿದೆ.

ರಾಜ್ಯದಲ್ಲಿ ಬೆಂಗಳೂರಿನಲ್ಲಿ ಮಾತ್ರ ಇದ್ದ ಪ್ರಾದೇಶಿಕ ಕೇಂದ್ರವನ್ನು ವಿಭಜಿಸಿ ವಿಜಾಪುರದಲ್ಲಿಯೂ ಹೊಸ ಪ್ರಾದೇಶಿಕ ಕೇಂದ್ರ ಸ್ಥಾಪಿಸಲಾಗಿದೆ. ವಿಜಾಪುರ, ಯಾದಗಿರಿ, ಬೀದರ, ಗುಲ್ಬರ್ಗ, ರಾಯಚೂರು, ಬಳ್ಳಾರಿ, ಕೊಪ್ಪಳ, ಹಾವೇರಿ, ಗದಗ ಹಾಗೂ ಮಹಾರಾಷ್ಟ್ರದ ಸೋಲಾಪುರ, ಲಾತೂರ ಹೀಗೆ 12 ಜಿಲ್ಲೆಗಳು ಈ ಪ್ರಾದೇಶಿಕ ಕೇಂದ್ರದ ವ್ಯಾಪ್ತಿಗೊಳಪಟ್ಟಿವೆ.

`ಕಳೆದ ವರ್ಷ ನಮ್ಮ ಪ್ರದೇಶಿಕ ಕೇಂದ್ರದ ವ್ಯಾಪ್ತಿಯಲ್ಲಿ ವಿವಿಧ ಕೋರ್ಸ್ಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಸಂಖ್ಯೆ ಕೇವಲ 1200. ನಮ್ಮ ಕೋರ್ಸ್ಗಳ ಅಧ್ಯಯನ ಮಾಧ್ಯಮ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಇರುವುದರಿಂದ ಹೆಚ್ಚು ಜನರನ್ನು ತಲುಪಲು ಸಾಧ್ಯವಾಗುತ್ತಿಲ್ಲ.

ಸ್ಥಳೀಯ ಬೇಡಿಕೆಯ ಅನುಸಾರವಾಗಿ ಕೋರ್ಸ್ಗಳನ್ನು ಕನ್ನಡದಲ್ಲಿ ಆರಂಭಿಸಲು ವಿವಿಯ ಆಡಳಿತ ಮಂಡಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅಧ್ಯಯನ ಸಾಮಗ್ರಿಗಳನ್ನು ಕನ್ನಡಕ್ಕೆ ಅನುವಾದಿಸಲು ನಿರ್ಧರಿಸಿದ್ದೇವೆ' ಎಂದು ವಿಜಾಪುರ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ.ಬಿ. ಸುಕುಮಾರ ಹೇಳಿದರು.

`ರಾಯಚೂರು, ಹಾವೇರಿ, ಯಾದಗಿರಿ, ಕೊಪ್ಪಳ, ಗದಗ ಜಿಲ್ಲೆಗಳಲ್ಲಿ ನಮ್ಮ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರಗಳೇ ಇಲ್ಲ. ಹೀಗಾಗಿ ಅಲ್ಲಿಯವರಿಗೆ ಪ್ರವೇಶ ಪಡೆಯಲು ತೊಂದರೆಯಾಗುತ್ತಿದ್ದು, ಈ ಎಲ್ಲ ಜಿಲ್ಲೆಗಳಲ್ಲಿ ಹೊಸ ಅಧ್ಯಯನ ಕೇಂದ್ರಗಳನ್ನು ಆರಂಭಿಸುತ್ತಿದ್ದೇವೆ' ಎಂದರು.

ಕನ್ನಡದಲ್ಲಿ ಕೋರ್ಸ್
`ಕನ್ನಡ ಮಾಧ್ಯಮ ಅಳವಡಿಸಿಕೊಂಡರೆ ಮಾತ್ರ ಹೆಚ್ಚು ಜನರಿಗೆ ಶಿಕ್ಷಣ ನೀಡಬಹುದು ಎಂಬ ಮನವರಿಕೆಯಾಗಿದೆ. ಇದೇ ಕಾರಣಕ್ಕಾಗಿ ಎಸ್ಎಸ್ಎಲ್ಸಿ ಅಥವಾ ಪಿಯುಸಿ ವ್ಯಾಸಂಗ ಮಾಡದ 18 ವರ್ಷ ಮೇಲ್ಪಟ್ಟವರಿಗೆ ಆರು ತಿಂಗಳ ಬುನಾದಿ ತರಬೇತಿ ಕೋರ್ಸ್ (ಬಿಪಿಪಿ)ನ್ನು ಕನ್ನಡ ಮಾಧ್ಯಮದಲ್ಲಿ ನೀಡುತ್ತಿದ್ದೇವೆ.

ಈ ಬುನಾದಿ ತರಬೇತಿ ಕೋರ್ಸ್ ಪೂರೈಸಿದ ನಂತರ ಅವರು ನೇರವಾಗಿ ಪದವಿ ತರಗತಿಗಳಿಗೆ ಪ್ರವೇಶ ಪಡೆಯಬಹುದು. ಈ ಪದವಿ ಕೋರ್ಸ್ಗಳನ್ನೂ ಕನ್ನಡದಲ್ಲಿ ಆರಂಭಿಸಲು ನಿರ್ಧರಿಸಿದ್ದೇವೆ' ಎಂದು ವಿವಿಯ ಸಹಾಯಕ ಪ್ರಾದೇಶಿಕ ನಿರ್ದೇಶಕ ಡಾ.ಬಿ.ಎನ್. ದೇವೇಂದ್ರ ಹೇಳಿದರು.

`ಆಹಾರ ಮತ್ತು ಪೌಷ್ಟಿಕಾಂಶ ವಿಷಯದ ಆರು ತಿಂಗಳ ಅವಧಿಯ ಕೋರ್ಸ್ನ್ನು ಈಗ ಕನ್ನಡ ಮಾಧ್ಯಮದಲ್ಲಿ ನಡೆಸಲಾಗುತ್ತಿದೆ. ಬಿ.ಎಡ್., ಪದವಿ ಸೇರಿದಂತೆ ಬೇಡಿಕೆ ಹೆಚ್ಚಾಗಿರುವ ಕೋರ್ಸ್ಗಳನ್ನು ಕನ್ನಡದಲ್ಲಿ ನಡೆಸಬೇಕು ಎಂಬುದು ನಮ್ಮ ಉದ್ದೇಶ' ಎಂದರು.

ಕೈದಿಗಳಿಗೆ ಶಿಕ್ಷಣ
`ಕೈದಿಗಳು ಶಿಕ್ಷೆ ಅನುಭವಿಸಿ ಬಿಡುಗಡೆಯಾದ ನಂತರ ಉತ್ತಮ ನಾಗರಿಕರಾಗಿ ರೂಪಗೊಳ್ಳಬೇಕು ಮತ್ತು ಲೈಂಗಿಕ ಅಲ್ಪಸಂಖ್ಯಾತರು ಶಿಕ್ಷಣದ ಮೂಲಕ ಸಬಲರಾಗಬೇಕು ಎಂಬುದು ನಮ್ಮ ವಿಶ್ವವಿದ್ಯಾಲಯದ ಬಯಕೆ. ಅದೇ ಕಾರಣಕ್ಕಾಗಿ ಕೈದಿಗಳು ಹಾಗೂ ಲೈಂಗಿಕ ಅಲ್ಪಸಂಖ್ಯಾತರಿಗೆ ಅಗತ್ಯಬಿದ್ದರೆ ಬುನಾದಿ ತರಬೇತಿ ನೀಡಿ ಮತ್ತು ಅವರ ಅರ್ಹತೆ ಆಧರಿಸಿ ವಿವಿಧ ವೃತ್ತಿಪರ ಕೋರ್ಸ್ಗಳಿಗೆ ಉಚಿತ ಪ್ರವೇಶ ನೀಡುತ್ತಿದ್ದೇವೆ.

ಇತರೆಡೆ ಜಾರಿಯಲ್ಲಿರುವ ಈ ಯೋಜನೆಯನ್ನು ವಿಜಾಪುರ ಪ್ರಾದೇಶಿಕ ಕೇಂದ್ರದ ವ್ಯಾಪ್ತಿಯ ಜಿಲ್ಲೆಗಳಲ್ಲಿಯೂ ಅನುಷ್ಠಾನಗೊಳಿಸುತ್ತಿದೆ' ಎಂದು ವಿವಿಯ ಮತ್ತೊಬ್ಬ ಸಹಾಯಕ ಪ್ರಾದೇಶಿಕ ನಿರ್ದೇಶಕ ಡಾ.ವಿಜಯ್ ರಾಘವನ್ ಹೇಳಿದರು.
ಪ್ರವೇಶ ಆರಂಭಗೊಂಡಿದ್ದು, ಮಾಹಿತಿಗೆ ಸಂಪರ್ಕಿಸಿ: ಡಾ.ಬಿ.ಎನ್. ದೇವೇಂದ್ರ ಮೊ. 9740340802/ 08352-260006. ವೆಬ್ಸೈಟ್: www.ignou.ac.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.