ಶನಿವಾರ, ಜನವರಿ 18, 2020
21 °C

ಕನ್ನಡ ವಿರೋಧಿಗಳ ಗಡಿಪಾರಿಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಂಡ್ಲುಪೇಟೆ:- ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ಮತ್ತು ಮಾಜಿ ಸಚಿವ ಉಮೇಶ್ ಕತ್ತಿ ಅವರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.ಪಟ್ಟಣದ  ಪ್ರವಾಸಿ ಮಂದಿರದ ಮುಂಭಾಗದಲ್ಲಿ  ಸಮಾವೇಶಗೊಂಡ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಧಿಕ್ಕಾರದ ಘೋಷಣೆ ಕೂಗುತ್ತಾ ಜಾಥಾದಲ್ಲಿ ಸಾಗಿದರು. ನಂತರ  ತಾಲ್ಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.ಜಯಕರ್ನಾಟಕ ಸಂಘಟನೆಯ ಅಲ್ಪ ಸಂಖ್ಯಾತರ ಘಟಕ, ಜಿಲ್ಲಾ ಘಟಕ ಮತ್ತು ಮಹಿಳಾ ಘಟಕ ಹಾಗೂ ತೆರಕಣಾಂಬಿ ಹೋಬಳಿ ಘಟಕದ ಕಾರ್ಯಕರ್ತರು  ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ  ತಾಲ್ಲೂಕು ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಮನ್ಸೂರ್ ಮಾತನಾಡಿ, ಕರ್ನಾಟಕ ರಾಜ್ಯದಿಂದ ವಿಧಾನ ಸಭೆಗೆ ಆಯ್ಕೆಯಾಗಿರುವ ಎಂ.ಇ.ಎಸ್.ಶಾಸಕರು ರಾಜ್ಯದ ಬಗ್ಗೆ ಶವಯಾತ್ರೆ ಮಾಡುತ್ತೇವೆ ಎಂದು ಹೇಳಿರುವುದು ಅವರ ಉದ್ಧಟತನವನ್ನು ಎತ್ತಿ ತೋರಿಸುತ್ತದೆ ಎಂದರು.

ಈ ಇಬ್ಬರನ್ನು ತಕ್ಷಣವೇ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.ನಂತರ ಮನವಿಯನ್ನು ತಾಲ್ಲೂಕು ಕಚೇರಿ ಉಪ ತಹಸೀಲ್ದಾರ್ ಸಿದ್ದಪ್ಪ ಅವರಿಗೆ ನೀಡಲಾಯಿತು. ಜಿಲ್ಲಾ ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಮಹೇಶ್ ಕುದರ್, ಮಹಿಳಾ ಘಟಕದ ಅಧ್ಯಕ್ಷೆ ಮಂಗಳಾ ಮಂಜುನಾಥ್, ಜಿಲ್ಲಾ ಘಟಕದ ಪದಾಧಿಕಾರಿಗಳಾದ ನಾಗೇಶ್ ನಾಯಕ್, ಬೇಗೂರು ಮಹದೇವಸ್ವಾಮಿ, ತೆರಕಣಾಂಬಿ ಘಟಕದ ಅಧ್ಯಕ್ಷ ಈಶ್ವರ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಾಮು, ಪದಾಧಿಕಾರಿಗಳಾದ ಪ್ರಶಾಂತ್, ಮಲ್ಲು, ಚಂದ್ರ, ಪ್ರದೀಪ್, ಮಲ್ಲು, ಹೊನ್ನೇಗೌಡನಹಳ್ಳಿ ಮಾದಪ್ಪ, ಕಬ್ಬಹಳ್ಳಿ ಮಹೇಶ್, ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಸೈಯದ್‌ಗೌಸ್, ಇಮ್ರಾನ್,  ಉಪಾಧ್ಯಕ್ಷ ಅನ್ಸರ್, ಸೇರಿದಂತೆ ವಿವಿಧ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.ಡಿ.ಎಲ್‌ ವಿತರಣೆ

ಗುಂಡ್ಲುಪೇಟೆ:
ತಾಲ್ಲೂಕಿನ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ವಾಹನ ಸವಾರರಿಗೆ ಉಚಿತವಾಗಿ ಚಾಲನಾ ಪರವಾನಗಿ ಮಾಡಿಸಲು ಬೇಗೂರು ಪೊಲೀಸರು ಮುಂದಾಗಿದ್ದಾರೆ.ಡಿ. 16 ರಂದು ಠಾಣೆಯ ಆವರಣದಲ್ಲಿ ಸಾರಿಗೆ ಇಲಾಖೆಯ ವತಿಯಿಂದ ಉಚಿತ ಡ್ರೈವಿಂಗ್ ಮೇಳ ನಡೆಸಲು ಸಿದ್ಧತೆ ನಡೆಸಲಾಗಿದೆ ಎಂದು ಸಬ್‌ ಇನ್ಸ್‌ಪೆಕ್ಟರ್‌ ಸಂದೀಪ್‌ಕುಮಾರ್‌ ತಿಳಿಸಿದ್ದಾರೆ. ಠಾಣಾ ವ್ಯಾಪ್ತಿಯ ವಾಹನ ಸವಾರರು ಈಚಿನ 3 ಪಾಸ್ ಪೋಟೋ  ಭಾವಚಿತ್ರ, ಮತದಾನದ ಗುರುತಿನ ಪತ್ರ, ರೇಷನ್ ಕಾರ್ಡ್‌, ಜನ್ಮ ದಿನಾಂಕ ಅಥವಾ ನೋಟರಿಯವರಿಂದ ವಯಸ್ಸಿನ ದೃಢೀಕರಣ ಪತ್ರ, 40 ವರ್ಷ ವಯಸ್ಸಾಗಿರುವವರು ವೈದ್ಯಕೀಯ ಪ್ರಮಾಣ ಪತ್ರವನ್ನು ನೀಡಿ ಡಿ.5 ರಿಂದ  10 ವರೆಗೆ ಬೇಗೂರು ಠಾಣೆಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)