ಶುಕ್ರವಾರ, ಏಪ್ರಿಲ್ 16, 2021
31 °C

ಕನ್ನಡ ಸಾಹಿತ್ಯ ಸಂಶೋಧನೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನಮ್ಮ ಕನ್ನಡ ಭಾಷೆಗೆ ಬಹು ಪ್ರಾಚೀನವಾದ ಸಾಹಿತ್ಯ ಪರಂಪರೆ ಇದೆ. ಸಮೃದ್ಧವಾದ ಸಾಹಿತ್ಯ ಪರಂಪರೆಯನ್ನು ಐತಿಹಾಸಿಕವಾಗಿ ಸಂಶೋಧಿಸುವುದು, ಸಂಪಾದಿಸುವುದು ಮತ್ತು ವಿಮರ್ಶೆ ಮಾಡುವ ಕಾರ್ಯ ಅಗತ್ಯವಾಗಿ ಆಗಬೇಕಿದೆ~ ಎಂದು ಚಿಂತಕ ಮಧು ಬಿಲ್ಲನಕೋಟೆ ಹೇಳಿದರು.ಕನ್ನಡ ಯುವಜನ ಸಂಘವು ಇತ್ತೀಚೆಗೆ ನಗರದಲ್ಲಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ `ಕನ್ನಡದ ಪ್ರಾಚೀನತೆ-ಒಂದು ಇಣುಕು ನೋಟ~ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.`ಕನ್ನಡ ಭಾಷೆ ಪ್ರಾಚೀನವಾಗಿದೆ, ಕನ್ನಡದ ಪ್ರಾಚೀನತೆ ಸಂಸ್ಕೃತ, ಪ್ರಾಕೃತ ಭಾಷೆಗಳಿಗೆ ಎರಡನೆಯದು. ಕವಿರಾಜಮಾರ್ಗದ ಕೃತಿಕಾರ ತನಗಿಂತ ಹಿಂದಿನ ಕನ್ನಡ ಕವಿಗಳ ಪದ್ಯಗಳನ್ನು ತನ್ನ ಕೃತಿಯಲ್ಲಿ ಉಲ್ಲೇಖಿಸಿದ್ದಾನೆ. ಅವುಗಳು ರಾಮಾಯಣ ಮತ್ತು ಮಹಾಭಾರತದ ಪದ್ಯಗಳಾಗಿವೆ. ಈ ಆಧಾರದಿಂದ ಕವಿರಾಜಮಾರ್ಗದ ಮೊದಲೇ ರಾಮಾಯಣ ಮತ್ತು ಮಹಾಭಾರತ ಕೃತಿಗಳು ಕನ್ನಡದಲ್ಲಿ ರಚನೆಯಾಗಿದ್ದವು ಎಂಬುದಕ್ಕೆ ಸಾಕ್ಷಿ ದೊರೆಯುತ್ತದೆ~ ಎಂದು ವಿವರಿಸಿದರು.`ಶಾತವಾಹನರ ಕಾಲದಲ್ಲಿ ಪ್ರಾಕೃತ ಕವನ ಸಂಕಲನವಾದ ಗಾಥಾಸಪ್ತ ಸತಿಯಲ್ಲಿ ಪ್ರಯೋಗವಾಗಿರುವ  ಪದಗಳು ಮತ್ತು ಕ್ರಿ.ಶ. 450 ರ ಹಲ್ಮಿಡಿ ಶಾಸನವು ಕನ್ನಡದ ಪ್ರಾಚೀನತೆಗೆ ಕನ್ನಡಿ ಹಿಡಿಯುತ್ತವೆ~ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಜಗದೀಶ ರೆಡ್ಡಿ, ಕಾರ್ಯದರ್ಶಿ ಬಿ.ಭದ್ರೇಗೌಡ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.