ಹುಣಸಗಿ: ಕಳೆದ ವಾರ ಶಹಾಪುರ ಸರ್ಕಾರಿ ಆಸ್ಪತ್ರೆ ವೈದ್ಯರ ಮೇಲೆ ಕೆಲವರು ಹಲ್ಲೆ ನಡೆದಿದ್ದನ್ನು ಖಂಡಿಸಿ ಹುಣಸಗಿಯಲ್ಲಿ ಭಾರತೀಯ ವೈದ್ಯಕೀಯ ಸಂಘ ಮತ್ತು ಆಯುಷ್ಯ ಫೆಡರೆಷನ್ ಆಫ್ ಇಂಡಿಯಾ ಸಂಯುಕ್ತ ಆಶ್ರಯದಲ್ಲಿ ಸೋಮವಾರ ವೈದ್ಯರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಈ ಕುರಿತು ಪ್ರತಿಭಟನಾನಿರತರನ್ನು ಉದ್ದೇಶಿಸಿ ಡಾ.ಎಸ್.ಎಸ್.ಹೈಯಾಳ ಮಾತನಾಡುತ್ತಾ, ಇಂದಿನ ದಿನಗಳಲ್ಲಿ ವೈದ್ಯರ ಮೇಲೆ ಹಲ್ಲೆ ಪ್ರಕರಗಳು ಹೆಚ್ಚಾಗುತ್ತಿವೆ, ಇದರಿಂದಾಗಿ ವೈದ್ಯರು ಕಾರ್ಯನಿರ್ವಹಿಸಲು ಆಗುತ್ತಿಲ್ಲ ಆದ್ದರಿಂದ ಸರ್ಕಾರ ಕೂಡಲೇ ಗಮನಹರಿಸಿ 2009ರ ಅಧಿನಿಯಮ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ಒಂದು ಕಾಲದಲ್ಲಿ ವೈದ್ಯೋ ನಾರಾಹಣ ಹರಿಃ ಎನ್ನುತ್ತಿರುವ ಭಾರತದಲ್ಲಿ ಇಂದು ಹಲ್ಲೆಯಂತಹ ಪ್ರಕರಣಗಳು ಹೆಚ್ಚಾಗುತ್ತಿರುವದು ಅನಾಗರಿತನವನ್ನು ಎತ್ತಿತೊರಿಸುತ್ತಿದೆ. ಅಂತಹ ಯಾವದೇ ವ್ಯಕ್ತಿ ಇದ್ದರೂ ಅವರನ್ನು ಬಂಧಿಸಿ ಶಿಕ್ಷಗೆ ಗುರಿ ಪಡಿಸಬೇಕೆಂದು ಆಗ್ರಹಿಸಿದರು.

ಪಟ್ಟಣದ ಮಹಾಂತಸ್ವಾಮಿ ವೃತ್ತದಿಂದ ಬಸವೇಶ್ವರ ವೃತ್ತದ ಮುಖಾಂತರ ಹುಣಸಗಿ ವಿಶೇಷ ತಹಸೀಲ್ದಾರ್ ಕಚೇರಿವರೆಗೆ ಕೈಗೆ ಕಪ್ಪುಪಟ್ಟಿ ಧರಿಸಿ ಮೌನ ಮೆರವಣಿಗೆ ನಡೆಸಿದರು.ಹುಣಸಗಿ ವಿಶೇಷ ತಹಸೀಲ್ದಾರ ಸಿದ್ದಲಿಂಗಪ್ಪ ಹೂವಿನಬಾವಿ ಅವರಿಗೆ ಮನವಿ ನೀಡಿದರು. ಪ್ರತಿಭಟನೆಯಲ್ಲಿ ಡಾ.ವಿಲಾಸ ಗುಂಡಾ, ಡಾ.ಜಿ.ಎಸ್.ಪಾಟೀಲ, ಜಿ.ಎಸ್. ಪಂಚಗಲ್, ಮಹಾಂತೇಶ ಕನ್ನೂರ, ನಿಂಗಾರಡ್ಡಿ ಬಿರಾದಾರ, ಪ್ರವೀಣ ಕುಂಬಾರ, ವಿನಾಯಕ ಕುಲಕರ್ಣಿ, ಎಂ.ಆರ್ ಅಮ್ಮಾಪುರ ಬಲಶೇಟ್ಟಿಹಾಳ ಸೇರಿದಂತೆ ವೈದ್ಯೋಪಚಾರ ಸಂಸ್ಥೆಯ ಸದಸ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.