ಸೋಮವಾರ, ಜನವರಿ 20, 2020
17 °C

ಕಬಡ್ಡಿ: ಮಲೇಷ್ಯ ತಂಡಕ್ಕೆ ರವೀಂದ್ರ ಕೋಚ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕದ ಹಿರಿಯ ಕಬಡ್ಡಿ ಕೋಚ್ ರವೀಂದ್ರ ಶೆಟ್ಟಿ ಮಲೇಷ್ಯ ರಾಷ್ಟ್ರೀಯ ಕಬಡ್ಡಿ ತಂಡದ ಕೋಚ್ ಆಗಿ ನೇಮಕಗೊಂಡಿದ್ದಾರೆ. ಮಲೇಷ್ಯ ಕಬಡ್ಡಿ ಸಂಸ್ಥೆಯ ಕೋರಿಕೆಯಂತೆ ಏಷ್ಯನ್ ಕಬಡ್ಡಿ ಫೆಡರೇಷನ್ ರವೀಂದ್ರ ಅವರ ಹೆಸರನ್ನು ಸೂಚಿಸಿತ್ತು.ವಿಶ್ವಕಪ್ ಕಬಡ್ಡಿ ಚಾಂಪಿಯನ್‌ಷಿಪ್‌ಗೆ ಮಲೇಷ್ಯ ತಂಡವನ್ನು ಸಿದ್ಧಗೊಳಿಸುವ ಜವಾಬ್ದಾರಿ ರವೀಂದ್ರ ಮೇಲಿದೆ. ಅವರು ಶುಕ್ರವಾರ ಮಲೇಷ್ಯಕ್ಕೆ ಪ್ರಯಾಣಿಸಿದರು. ವಿಶ್ವಕಪ್ ಟೂರ್ನಿ ಮಾರ್ಚ್ ಒಂದರಿಂದ ನಾಲ್ಕರವರೆಗೆ ಪಟ್ನಾದಲ್ಲಿ ನಡೆಯಲಿದೆ. ಅದೇ ರೀತಿ ಜೂನ್ ತಿಂಗಳಲ್ಲಿ ಚೀನಾದಲ್ಲಿ ನಡೆಯುವ ಏಷ್ಯನ್ ಬೀಚ್ ಗೇಮ್ಸನಲ್ಲಿ ಪಾಲ್ಗೊಳ್ಳುವ ತಂಡಕ್ಕೂ ಅವರು ಮಾರ್ಗದರ್ಶನ ನೀಡುವರು.ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ರವೀಂದ್ರ ಸಿಕ್ಯುಎಎಲ್ ತಂಡದ ಕೋಚ್ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರತಿಕ್ರಿಯಿಸಿ (+)