ಶುಕ್ರವಾರ, ಜೂನ್ 18, 2021
27 °C

ಕರಕುಶಲ ಸಂತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಾಫ್ಟ್ ಮೇಳ ನಗರದಲ್ಲಿ ಆಕರ್ಷಕ ಕೈಮಗ್ಗ ಹಾಗೂ ಬುಡಕಟ್ಟು ಕಲಾವಿದರ ಕರಕುಶಲ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಏರ್ಪಡಿಸಿದೆ.ಇಲ್ಲಿ ಪಶ್ಚಿಮ ಬಂಗಾಳ ಮತ್ತು ಒಡಿಶಾ ಬುಡಕಟ್ಟು ಕಲಾವಿದರು ರಚಿಸಿರುವ ಗೋಡೆ ಚಿತ್ರಪಟ, ಕಲಾಕೃತಿ, ರಾಜಸ್ತಾನಿ ಚಿತ್ರಕಲೆ, ಹತ್ತಿಯ ಉಡುಪುಗಳ ಸಂಗ್ರಹ, ಬಿಹಾರದ ಆಕರ್ಷಕ ಮಧುಬನಿ ಕಲಾಕೃತಿಗಳು, ಮಣಿಪುರದ ವೈವಿಧ್ಯಮಯ ಕೈಮಗ್ಗ ಉತ್ಪನ್ನ ಕರ್ನಾಟಕ ಮತ್ತು ರಾಜಸ್ತಾನದ ಅಲಂಕಾರಿಕ ಆಭರಣ, ಮಣ್ಣಿನ ಮಡಿಕೆ, ಆಂಧ್ರ ಪ್ರದೇಶದ ಚರ್ಮದ ಉತ್ಪನ್ನಗಳು ಇವುಗಳೊಂದಿಗೆ ಮಕ್ಕಳ ಆಟಿಕೆ, ಬೊಂಬೆ,  ಕಬ್ಬಿಣದ ಸಾಮಗ್ರಿಗಳು.. ಹೀಗೆ ಹತ್ತು ಹಲವು ಕೈಮಗ್ಗ ಹಾಗೂ ಕರಕುಶಲ ಉತ್ಪನ್ನಗಳು ಅನಾವರಣಗೊಂಡಿವೆ.ಪ್ರದರ್ಶನ ಮತ್ತು ಮಾರಾಟ ಮಾ.11ರವರೆಗೆ ನಡೆಯಲಿದೆ. ಸ್ಥಳ: ಸಫಿನಾ ಪ್ಲಾಜಾ, ಕಮರ್ಷಿಯಲ್ ಸ್ಟ್ರೀಟ್ ಬಳಿ. ಬೆಳಿಗ್ಗೆ 10ರಿಂದ ಸಂಜೆ 8.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.