ಲಿಂಗಸುಗೂರ: ರೋಗ-ರುಜಿನಗಳನ್ನು ದೂರವಿಡುವ, ಗ್ರಾಮಕ್ಕೆ ಸಂಕಷ್ಟಗಳು ಬಾರದೆ ಇರಲಿ ಎಂಬ ಪ್ರಾರ್ಥನೆಯೊಂದಿಗೆ ಆಚರಿಸುವ ಹಾಲೆರೆಯುವ ಕಾರ್ಯಕ್ರಮವು ತಾಲ್ಲೂಕಿನ ಕರಡಕಲ್ಲ ಗ್ರಾಮದಲ್ಲಿ ಶುಕ್ರವಾರ ನಡೆಯಿತು.

ಸಂಪ್ರದಾಯದಂತೆ ಹಂಪಿ ಹುಣ್ಣಿಮೆಯಂದು ಕರಡಕಲ್ಲ ಗ್ರಾಮದಲ್ಲಿ ಗ್ರಾಮದ ಸೀಮೆಯ ಸುತ್ತ ಮಡಿಕೆಯಲ್ಲಿ ಹಾಲು ತುಂಬಿ ಮಡಿ ಸಮೇತ ಹಾಲೆರೆಯುತ್ತ ಹೋಗುವುದು ವಾಡಿಕೆ. ಅಂತೆಯೆ ಶುಕ್ರವಾರ ಬೆಳಿಗ್ಗೆ ಸಮಸ್ತ ಗ್ರಾಮಸ್ಥರು ಭಾಜಾ ಭಜಂತ್ರಿ, ಡೊಳ್ಳು ಮೇಳಗಳ ಸಮೇತ ಹಾಲು ತುಂಬಿದ ಬಿಂದಿಗೆಗೆ ತೂತು ಮಾಡಿ ಜಯಘೋಷಗಳೊಂದಿಗೆ ಪ್ರದಕ್ಷಿಣೆ ಹಾಕಿದರು.

ಪ್ರತಿಯೊಂದು ಕುಟುಂಬದ ಯುವಕರು ಹಾಲೆರೆಯುತ್ತ ಸಾಗುವಾಗ ಪೂಜಾರಿ ಹಿಂಬಾಲಿಸಿ ನೀರು ಹಾಕುತ್ತ ಬರುತ್ತಾರೆ. ನೀರನ್ನು ಪರಸ್ಪರ ಮೈಮೇಲೆ ಎರಚಾಡುವುದು, ಜಾತಿ, ಕುಲ ಮರೆತು ಒಂದಾಗಿ ಪಾಲ್ಗೊಳ್ಳುವುದು ಕಂಡುಬಂತು. ಹಾಲೆರೆಯುವ ಕಾರ್ಯಕ್ರಮ ಆಚರಣೆಯಿಂದ ಗ್ರಾಮದಲ್ಲಿ ಮಾರಣಾಂತಿಕ ರೋಗಗಳು ಹರಡುತ್ತಿಲ್ಲ.

ರಾಜಕೀಯವಾಗಿ ಕೂಡ ಕರಡಕಲ್ಲ ಗ್ರಾಮದ ಸಮಸ್ತ ಜನತೆ ಸೌಹಾರ್ದತೆ ಬದುಕು ಕಟ್ಟಿಕೊಂಡಿದ್ದಾರೆ. ಆಚರಣೆ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಭೂಪನಗೌಡ ಕರಡಕಲ್ಲ, ಗಿರಿಮಲ್ಲನಗೌಡ ಕರಡಕಲ್ಲ, ಚೆನ್ನಪ್ಪಗೌಡ, ಶರಣಪ್ಪ ಅಂಗಡಿ, ಸಿದ್ಧನಗೌಡ ನೆಲಾಳ, ಶರಣಯ್ಯ ಗಣಾಚಾರಿ, ನಾಗಯ್ಯ ಸೊಪ್ಪಿಮಠ, ಶರಣಬಸವ ಪಾಟೀಲ, ಬಸನಗೌಡ ಪಾಟೀಲ, ಪವಾಡೆಪ್ಪ ನಾಯಕ, ಹನುಮಂತಪ್ಪ ಸಾಹುಕಾರ, ಹನೀಫಸಾಬ, ಶಿವರಾಜ ಬಾಳೆಗೌಡ್ರ, ರುದ್ರಯ್ಯ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.