ಭಾನುವಾರ, ಮೇ 16, 2021
29 °C

ಕರುಳು ಬೇನೆಗೆ ಮಗು ಬಲಿ: ಪರಿಹಾರ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ವೆಂಕಟಸ್ವಾಮಿ ಗಾರ್ಡನ್ ಬಳಿಯ ನರಸಿಂಹಯ್ಯ ಹಾಗೂ ಯಶೋಧಮ್ಮ ದಂಪತಿಯ ಎರಡು ವರ್ಷದ ಮಗು ಮಾಸ್ಟರ್ ಚಂದನ್ ಕರುಳುಬೇನೆಯಿಂದ ಮೃತಪಟ್ಟಿದೆ. ಮಗುವಿನ ಹೆತ್ತವರಿಗೆ ಮಹಾನಗರ ಪಾಲಿಕೆ ವತಿಯಿಂದ ಮೇಯರ್ ಶಾರದಮ್ಮ ಶುಕ್ರವಾರ ರೂ ಒಂದು ಲಕ್ಷದ ಪರಿಹಾರ ಮೊತ್ತದ ಚೆಕ್ ಅನ್ನು ಹಸ್ತಾಂತರಿಸಿದರು.ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಚಂದನ್ ಚಿಕಿತ್ಸೆಗೆ ಸ್ಪಂದಿಸದೆ ಮಾರ್ಚ್ 29ರಂದು ಮೃತಪಟ್ಟಿದ್ದ.ಬಡ ಕುಟುಂಬಕ್ಕೆ ಸಾಂತ್ವನ ನೀಡಲು ಚೆಕ್ ಹಸ್ತಾಂತರಿಸಲಾಯಿತು ಎಂದು ಬಿಬಿಎಂಪಿ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.