ಮರಿಯಮ್ಮನಹಳ್ಳಿ: ಆತಿಥೇಯ ಕರ್ನಾಟಕ ತಂಡ ಪಟ್ಟಣದ ಶ್ರೀ ವಿನಾಯಕ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 14ವರ್ಷದೊಳಗಿನ ಶಾಲಾಮಕ್ಕಳ 57ನೇ ರಾಷ್ಟ್ರಮಟ್ಟದ ವಾಲಿಬಾಲ್ ಟೂರ್ನಿಯ ಬಾಲಕಿಯರ ವಿಭಾಗದಲ್ಲಿ ಮಂಗಳವಾರ 2-0 (25-10, 25-10)ರಿಂದ ಛತ್ತೀಸ್ಗಡ ತಂಡವನ್ನು ಪರಾಭವಗೊಳಿಸುವ ಮೂಲಕ ಶುಭಾರಂಭ ಮಾಡಿತು.

ಬಾಲಕರ ವಿಭಾಗದಲ್ಲಿ ಕರ್ನಾಟಕ ತಂಡ 2-0(25-13, 25-16)ರಿಂದ ಮಧ್ಯ ಪ್ರದೇಶ ತಂಡವನ್ನು ಪರಾಭವಗೊಳಿಸಿದರೆ, ಮಣಿಪುರ ತಂಡದ ವಿರುದ್ಧ 1-2 (27-25, 17-25, 17-25)ರಿಂದ ಮಣಿಯಿತು.

ಬಾಲಕರ ವಿಭಾಗದ ಇತರ ಪಂದ್ಯಗಳಲ್ಲಿ ಉತ್ತರಾಖಂಡ ತಂಡ 2-0(25-08, 25-08)ರಿಂದ ವಿದ್ಯಾಭಾರತಿ ತಂಡದ ವಿರುದ್ಧವೂ; ಆಂಧ್ರ ಪ್ರದೇಶ ತಂಡ 2-0(25-12, 25-09)ರಿಂದ ಛತ್ತೀಸ್ಗಡ ತಂಡದ ಮೇಲೂ; ಹರಿಯಾಣ ತಂಡ 2-0 (25-12, 25-16)ರಿಂದ ಗುಜರಾತ್ ವಿರುದ್ಧವೂ; ಉತ್ತರಪ್ರದೇಶ ತಂಡ 2-0 (25-19, 25-21)ರಿಂದ ಮಧ್ಯ ಪ್ರದೇಶ ತಂಡದ ಮೇಲೂ ಗೆಲವು ಸಾಧಿಸಿದವು.

ಬಾಲಕಿಯರ ವಿಭಾಗದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡ ಛತ್ತೀಸ್ಗಡ ಬಾಲಕಿಯರನ್ನು 2-0ರಲ್ಲಿ ಸೋಲಿಸಿದರು. ದೆಹಲಿ ತಂಡದ ಬಾಲಕಿಯರು ವಿದ್ಯಾಭಾರತಿ ತಂಡದ ವಿರುದ್ಧ 2-0 (25-13, 25-21)ರಲ್ಲಿ ವಿಜಯ ಸಾಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.